ಮಿಷನ್ ಆಸ್ಪತ್ರೆಗೆ ಅಪ್ಪು ಎಕ್ಸ್ ಪ್ರೆಸ್ ಆಂಬ್ಯುಲೆನ್ಸ್ ಕೊಡುಗೆ, ಬ್ಲಡ್ ಬ್ಯಾಂಕ್ ಸ್ಥಾಪನೆ: ಪವರ್ ಸ್ಟಾರ್ ನೆನೆದು ಭಾವುಕರಾದ ನಟ ಪ್ರಕಾಶ್ ರೈ.

Promotion

ಮೈಸೂರು,ಆಗಸ್ಟ್,6,2022(www.justkannada.in): ಖ್ಯಾತ ನಟ ದಿ. ಪುನೀತ್ ರಾಜಕುಮಾರ್ ಅವರ ಸ್ಮರಣಾರ್ಥ ಬಹುಭಾಷಾ ನಟ ಪ್ರಕಾಶ್ ರಾಜ್ ಅವರು ಮೈಸೂರಿನ ಮಿಷನ್ ಆಸ್ಪತ್ರೆಗೆ ‘ಅಪ್ಪು ಎಕ್ಸ್ ಪ್ರೆಸ್’ ಆಂಬುಲೆನ್ಸ್ ಅನ್ನು ಕೊಡುಗೆಯಾಗಿ ನೀಡಿದ್ದಾರೆ.

‘ಅಪ್ಪು ಎಕ್ಸ್ ಪ್ರೆಸ್’ ಆ್ಯಂಬುಲೆನ್ಸ್ ಗೆ ಚಾಲನೆ ನೀಡಿ ಬಳಿಕ ಮಾತನಾಡಿದ ನಟ ಪ್ರಕಾಶ್ ರೈ, ಅಪ್ಪು ಹೆಸರು ಮತ್ತು ಸೇವೆಗಳನ್ನು ಸ್ಮರಿಸುತ್ತಾ ಕೂರಬಾರದು.ಅವರನ್ನು ನಮ್ಮಲ್ಲಿ ಜೀವಂತ ಉಳಿಸಬೇಕಾದರೆ ಅವರು‌ ಮಾಡುತ್ತಿದ್ಧ ಒಳ್ಳೆಯ ಕೆಲಸಗಳನ್ನ ನಾವು ಮಾಡಬೇಕಿದೆ. ಅಪ್ಪು ಜೊತೆ  3 ಚಿತ್ರಗಳನ್ನ ಮಾಡಿದ್ರೂ ಇಬ್ಬರೂ ಉತ್ತಮ ಒಡನಾಟ ಚೆನ್ನಾಗಿತ್ತು.  ಅವರು ಮಾಡುತ್ತಿದ್ದ ಒಳ್ಳೆಯ ಕೆಲಸ ಯಾರಿಗೂ ಗೊತ್ತಾಗುತ್ತಿರಲಿಲ್ಲ. ಕೊರೋನಾ ಸಂದರ್ಭ ನಾನು ಮಾಡುತ್ತಿದ್ದ ಸೇವಾ ಕಾರ್ಯಗಳಿಗೆ ದೇಣಿಗೆ ನೀಡಿ ಅಪ್ಪು ಸಹಾಯ ಮಾಡಿದ್ದರು. ಅದನ್ನು ಎಲ್ಲಿಯೂ ಹೇಳಿರಲಿಲ್ಲ ಎಂದರು.

ಮಿಷನ್ ಅಸ್ಪತ್ರೆಯಲ್ಲಿ ಅಪ್ಪು ಹೆಸರಲ್ಲೇ ಬ್ಲಡ್ ಬ್ಯಾಂಕ್ ಸ್ಥಾಪನೆ..

ಇನ್ನು ಎರಡ್ಮೂರು  ತಿಂಗಳಳ್ಲಿ ಮಿಷನ್ ಅಸ್ಪತ್ರೆಯಲ್ಲಿ ಅಪ್ಪು ಹೆಸರಲ್ಲೇ ಬ್ಲಡ್ ಬ್ಯಾಂಕ್ ಸ್ಥಾಪನೆ ಮಾಡುತ್ತೇವೆ. ರಾಜ್ಯದ 30 ಜಿಲ್ಲೆಗಳಲ್ಲೂ ಅಫ್ಪು ಎಕ್ಸ್ ಪ್ರೆಸ್ ಗೆ ಚಾಲನೆ ಕೊಡುತ್ತೇನೆ. ಅಪ್ಪು ಹೆಸರಲ್ಲಿ ಸೇವಾ ಕಾರ್ಯ ಮಾಡೋಕೆ ನಾನು ಸಂಕೋಚ ಬಿಟ್ಟು ಸ್ನೇಹಿತರ ಸಹಾಯ ಕೇಳುತ್ತೇನೆ. ನನಗೆ ತುಂಬಾ ಜನ ಸ್ನೇಹಿತರಿದ್ದಾರೆ. ಅವರನ್ನ ಕೇಳಿದರೇ ಖಂಡಿತ ಬೆಂಬಲ ಕೊಡ್ತಾರೆ. ಎಲ್ಲರೂ ಸೇರಿ ಅಪ್ಪು ಹೆಸರನ್ನು ಉಳಿಸಿಕೊಳ್ಳುವುದರ ಜತೆಗೆ ಅವರ ಸೇವೆ ಮುಂದುವರಿಸಲು ನಾನು ಕಟಿಬದ್ದ ಎಂದರು.

ಅಂಬ್ಯುಲೆನ್ಸ್ ಕೊಡಲು ಕಾರಣವಿದೆ. ಅಂತಹ ಮಹಾನ್ ನಟನಿಗೆ ಸಕಾಲಕ್ಕೆ ಅಂಬ್ಯುಲೆನ್ಸ್ ಸಿಕ್ಕಿದ್ರೆ ಬದುಕುತ್ತಿದ್ದರೇನೋ..? ಇಂತಹ ಸ್ಥಿತಿ ಮುಂದೆ ಬಡವರಿಗೆ ಬರಬಾರದೆಂಬ ಎಂಬ ಉದ್ದೇಶ ನನ್ನದು ಎಂದರು.

ನಾವು ನೀವೆಲ್ಲ ಸೇರಲು ಒಂದೇ ಶಕ್ತಿ. ಪ್ರತಿಯೊಬ್ಬರಲ್ಲೂ ಅಗಲಿಕೆ ನೋವು ಕಾಣ್ತಿದೆ. ಅಪ್ಪು ಕಳೆದುಕೊಂಡಾಗ ಅನಾಥ ಪ್ರಜ್ಞೆ ಕಾಡಿತ್ತು. ನಾನು ಈವರಗೆ ಯಾವ ವೇದಿಕೆಯಲ್ಲೂ ಮಾತನಾಡಿರಲಿಲ್ಲ. ಆತನನ್ನ ಒಬ್ಬ ನಟನಾಗಿ ನಾನು ನೋಡಿರಲಿಲ್ಲ. ಬಾಲ್ಯದಿಂದ ನಾನು ನೋಡಿದ್ದೆ. ಅಪ್ಪು ಅವರು ಆಂಬ್ಯುಲೆನ್ಸ್ ಇದ್ದಿದ್ದರೆ ಬದುಕುತ್ತಿದ್ದರು. ಆ ಆಲೋಚನೆ‌ ಬಂದ ತಕ್ಷಣ ನಾನು ನಿರ್ಧರಿಸಿದೆ. ಬಡವರಿಗೆ ಹೆಚ್ಚು ಅನುಕೂಲ ಆಗಲಿದೆ ಎಂಬ ಕಾರಣಕ್ಕೆ ಮಿಷನ್ ಆಸ್ಪತ್ರೆ ಆಯ್ಕೆ ಮಾಡಿಕೊಂಡೆ. ಕೋವಿಡ್ ವೇಳೆ ಪ್ರಕಾಶ್ ಫೌಂಡೇಷನ್ ವತಿಯಿಂದ ಊಟ, ವಸತಿ ನೀಡಿದ್ದೆವು. ಪುನೀತ್ ರಾಜಕುಮಾರ್ ಧನ ಸಹಾಯ ಮಾಡಿದ್ದರು. ಡಾ.ರಾಜ್ ಫೌಂಡೇಷನ್ ನಿಂದ ಎರಡು ಲಕ್ಷ ನೀಡಿದ್ದರು. ಪ್ರತಿಯೊಬ್ಬರಿಗೂ ಪುನೀತ್ ಸಹಾಯ ಮಾಡಿದ್ದರು. ಆ ವ್ಯಕ್ತಿ ಇದ್ದಿದ್ದರೆ ಮಾಡುತ್ತಿದ್ದ ಕೆಲಸವನ್ನ ನಾವು ಮಾಡಬೇಕಿದೆ. ಅವರ ವ್ಯಕ್ತಿತ್ವ ಉಳಿಸಿ ಬೆಳಡಸಿಕೊಂಡು ಹೋಗುವುದು ಮುಖ್ಯ ಎಂದು ಪ್ರಕಾಶ್ ರೈ ತಿಳಿಸಿದರು.

ಬಾಲ‌ನಟನಾಗಿ ರಾಷ್ಟ್ರಪ್ರಶಸ್ತಿ ಪಡೆದವರು. 45 ವರ್ಷಕ್ಕೆ ಕಾಲವಾದಾಗ ನಾವು ಸಾಕಷ್ಟು ಕಳೆದುಕೊಂಡೆವು. ಶ್ರೀಮಂತ ಮನೆತನದಲ್ಲಿ ಹುಟ್ಡಿದರೂ ಸರಳವಾಗಿ ಬದುಕಿದರು. ಹುಟ್ಟುಹಬ್ಬದ ಕಾರ್ಯಕ್ರಮದಲ್ಲಿ ಒಮ್ಮೆ ಮಾತನಾಡಿಕೊಂಡಿದ್ದವು. ಎತ್ತರಕ್ಕೆ ಬೆಳೆಯುವುದು ಮುಖ್ಯವಲ್ಲ. ಆ ವ್ಯಕ್ತಿಯಿಂದ ಮತ್ತಷ್ಟು ಜನರು ಎತ್ತರಕ್ಕೆ ಬೆಳೆಯುವುದು ಎಂದಿದ್ದೆ. ಅದೇ ನಮ್ಮ ನಿಮ್ಮೆಲ್ಲರ ಅಪ್ಪು ಎಂದು  ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರನ್ನ  ನೆನಪಿಸಿಕೊಂಡು ನಟ ಪ್ರಕಾಶ್ ರೈ ಭಾವುಕರಾದರು.

ನಿರ್ದೇಶಕ ಆನಂದ್ ರಾಮ್  ಮಾತನಾಡಿ,  ಸರ್ ಫೋನ್ ಮೂಲಕ ಅಪ್ಪು ಎಕ್ಸ್ ಪ್ರೆಸ್ ಶುರು ಮಾಡೋಣ ಅಂದ್ರು. ಆಂಬ್ಯುಲೆನ್ಸ್ ಗೆ ಅಪ್ಪು ಎಕ್ಸ್‌ ಪ್ರೆಸ್‌ ಅಂಥ‌ ಹೆಸರಿಟ್ಟಿದ್ದೇವೆ. ಮೈಸೂರಿನಿಂದ ಈ ಕೆಲಸ ಆರಂಭ ಅಗಿದೆ. 32 ಜಿಲ್ಲೆಗಳಲ್ಲೂ ಅಪ್ಪು ಎಕ್ಸ್ ಪ್ರೆಸ್ ಓಡಾಡುತ್ತೆ. ಅಪ್ಪು ಅವರು ಜನರ ಮನಸ್ಸಿನಲ್ಲಿ ದೇವರ ಸ್ಥಾನದಲ್ಲಿದ್ದಾರೆ. ಅಪ್ಪು ಕೊಟ್ಟಿದ್ದನ್ನ ಎಲ್ಲಿಯೂ ಹೇಳಿಕೊಂಡಿಲ್ಲ. ಬಲಗೈಲ್ಲಿ ಕೊಟ್ಟಿದ್ದು ಎಡಗೈ ಗೊತ್ತಾಗದಂತೆ ಕೆಲಸ ಮಾಡಿದ್ದಾರೆ.

ಸಪ್ಲೈಯರ್ ಒಬ್ರು ನಮ್ಮ ತಂದೆ ಅಪರೇಷನ್ ಗೆ 50 ಸಾವಿರ ಕೊಟ್ಟಿದ್ದಾರೆ ಎಂದು ನೆನಸಿಕೊಂಡು ಕಣ್ಣೀರು ಹಾಕಿದರು. ಅಪ್ಪು ಸರ್ ವ್ಯಕ್ತಿತ್ವವನ್ನ ಎಲ್ಲರಲ್ಲೂ ಕಾಣಲೂ ಈ ರೀತಿ ಮಾಡುತ್ತಿದ್ದೇವೆ. ಅಪ್ಪು ಅವರ ವ್ಯಕ್ತಿತ್ವ ಇಡೀ ಭಾರತಕ್ಕೆ ಗೊತ್ತಾಗಬೇಕು. ಅಪ್ಪು ಅವರ ಜೊತೆ ಎರೆಡು ಸಿನಿಮಾ ಮಾಡಿದ್ದೇವೆ. ಪುನೀತ್ ಒಬ್ರು ಮಾಹನ್ ವ್ಯಕ್ತಿ. ಅಪ್ಪು ನಿಸ್ವಾರ್ಥ ಸೇವೆ ನೀಡಿದ್ದಾರೆ ಎಂದು ನಿರ್ದೇಶಕ ಆನಂದ್ ರಾಮ್ ತಿಳಿಸಿದರು.

Key words:  Appu Express- Ambulance -Mission Hospital-Actor -Prakash Rai

ENGLISH SUMMARY…

Veteran actor Prakash Raj donates Appu Express Ambulance to Mission Hospital in Mysuru: Becomes emotional
Mysuru, August 6, 2022 (www.justkannada.in): Renowned actor Prakash Raj donated an ambulance in the name of ‘Appu Express’ to the Mission Hospital in Mysuru today in memory of the late actor Puneeth Rajkumar.
Speaking on the occasion, Prakash Raj expressed his view that we should not keep quiet just remembering his name and his good works. “If we want to make him be alive among us, we should continue what he was doing. I had acted in 3 movies with Puneeth and we had a cordial relationship. Nobody used to know his social works. Puneeth had also contributed for the help that I had provided during Corona. But he had never revealed it anywhere,” he said.
Blood bank in name of Appu at Mission Hospital
“We will open a blood bank in Mission Hospital in two-three months. Appu Express will be launched in all the 30 districts of the State. I won’t hesitate to approach my friends seeking their contribution for the social works that I do in the name of Appu. I have lot of friends. They will definitely help me if I ask. We are all committed to uphold Appu’s name and his services,” he observed.
“There is a reason for contributing ambulance. I have a feeling that he could have survived if he could get ambulance service in time…? It is my objective that poor people should not face such situations,” he added.
“I can see the pain of Appu’s loss in everyone. We all faced loneliness when we lost him. I had never spoken about this anywhere till now. I have not seen him only as an actor. I have seen him since his childhood. I feel he could have survived if he would have got ambulance service. As soon as this feeling got into my mind, I swung in action. I selected the Mission Hospital because the poor people are in need of such services. During COVID pandemic we had provided food and shelter through the Prakash Foundation. Puneeth had donated money to the foundation. We had received a sum of Rs. 2 lakh from the Dr. Raj Foundation. Puneeth had helped so many people. We all should do the work that he would have done if he would have been alive for more days. We should develop his character and continue his good works,” he added.
Speaking on the occasion Director Anand Ram informed that a hotel supplier shared that Puneeth had contributed Rs. 50 thousand for his father’s treatment. “We are doing this with a view of spreading his character among everyone. The entire country should know his character and personality. He is a great person,” he said.
Keywords: Prakash Raj/ Appu/ Mission Hospital/ Appu Express ambulance