ಬಿಜೆಪಿ ರಾಜ್ಯಾಧ್ಯಕ್ಷರ ನೇಮಕದಿಂದ ಕಾಂಗ್ರೆಸ್ ಗೆ ಏನು ಎಫೆಕ್ಟ್ ಆಗಲ್ಲ-ಸಚಿವ ಹೆಚ್.ಕೆ ಪಾಟೀಲ್

Promotion

ಬಳ್ಳಾರಿ,ನವೆಂಬರ್,11,2023(www.justkannada.in): ಬಿಜೆಪಿ ರಾಜ್ಯಾಧ್ಯಕ್ಷರಾಗಿ ಬಿವೈ ವಿಜಯೇಂದ್ರ ನೇಮಕದಿಂದ ಕಾಂಗ್ರೆಸ್ ಗೆ ಏನು ಎಫೆಕ್ಟ್ ಆಗಲ್ಲ ಎಂದು ಕಾನೂನು ಸಚಿವ ಹೆಚ್.ಕೆ ಪಾಟೀಲ್ ತಿಳಿಸಿದ್ದಾರೆ.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಸಚಿವ ಹೆಚ್.ಕೆ ಪಾಟೀಲ್,  ಕಾಂಗ್ರೆಸ್ ಸಂಘಟನೆ ಜನರು ನೋಡಿದ್ದಾರೆ. ಗ್ಯಾರಂಟಿ ಯೋಜನೆ ಯಶಸ್ವಿಯಾಗಿದೆ. ಇದರಿಂದ ಜನರಿಗೆ ಅನುಕೂಲವಾಗಿದೆ.  ಗ್ಯಾರಂಟಿ ಯೋಜನೆಯಿಂದ ಬಿಜೆಪಿ ಸಂಪೂರ್ಣ ತತ್ತರಿಸಿದ್ದಾರೆ . ರಾಜ್ಯಾಧ್ಯಕ್ಷರ ನೇಮಕದಿಂದ ಕಾಂಗ್ರೆಸ್ ಗೆ ಎಫೆಕ್ಟ್ ಆಗಲ್ಲ. ರಾಜ್ಯಾಧ್ಯಕ್ಷರನ್ನ ನೇಮಕ ಮಾಡಲು ಇಷ್ಟು ದಿನ ಬೇಕಾಯಿತು. ಕಾಂಗ್ರೆಸ್ ಸಂಘಟನೆ ಗಟ್ಟಿಯಾಗಿದೆ ಲೋಕಸಭೆಯಲ್ಲಿ 20ಕ್ಕೂ ಹೆಚ್ಚು ಸ್ಥಾನ ಗೆಲ್ಲುತ್ತೇವೆ ಎಂದರು.

ಬರ ಪರಿಶೀಲನೆ ವಿಚಾರ ಕುರಿತು ಪ್ರತಿಕ್ರಿಯಿಸಿದ ಹೆಚ್.ಕೆ ಪಾಟೀಲ್ , ಕೇಂದ್ರದ ಬರ ಅಧ್ಯಯನ ತಂಡ ಬಂದು ಪರಿಶೀಲನೆ ನಡೆಸಿ ಹೋಗಿದೆ ಬರ ಪರಿಹಾರವಾಗಿ ಕೇಂದ್ರ ಸರ್ಕಾರ 3,700 ಕೋಟಿ ರೂ. ಬಿಡುಗಡೆ ಮಾಡಬೇಕಿತ್ತು. ಆದರೆ ಇದುವರೆಗೆ ನಯಾಪೈಸೆ ಕೊಟ್ಟಿಲ್ಲ ಎಂದು ಕಿಡಿಕಾರಿದರು.

Key words:  appointment – BJP- state- president – not – effect – Congress – Minister -HK Patil