ಉಚಿತ ಪೋಸ್ಟ್ ಡಿಪ್ಲೋಮಾ ಇನ್ ಟೂಲ್ ಡಿಸೈನ್ ಪ್ರವೇಶಕ್ಕೆ ಎಸ್ ಸಿ ಮತ್ತು ಎಸ್ ಟಿ ಅಭ್ಯರ್ಥಿಗಳಿಗೆ ಅರ್ಜಿ ಆಹ್ವಾನ.

Promotion

ಮೈಸೂರು,ನವೆಂಬರ್, 24,2021(www.justkannada.in): ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರ ಮೈಸೂರು ರವರಿಂದ (GTTC MYSURU) ಒಂದು ವರ್ಷದ ಅವಧಿಯ ಉಚಿತ ಪೋಸ್ಟ್ ಡಿಪ್ಲೋಮಾ ಇನ್ ಟೂಲ್ ಡಿಸೈನ್ ಪ್ರವೇಶಕ್ಕೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗಾಗಿ ಅರ್ಜಿ ಆಹ್ವಾನಿಸಲಾಗಿದೆ.

ಪ್ರೆಸ್ ಟೂಲ್. ಪ್ಲಾಸ್ಟಿಕ್ ಮೌಲ್ಡ್ಸ್, ಪ್ರೆಷರ್ ಡೈ ಕ್ಯಾಸ್ಟಿಂಗ್ಸ್ ಡ್ಕೈಸ್, ಜಿಗ್ಸ್ ಮತ್ತು ಫಿಕ್ಷರ್ ಮುಂತಾದ ವಿಷಯಗಳನ್ನೊಳಗೊಂಡ ಒಂದು ವರ್ಷದ ಅವಧಿಯ ಉಚಿತ ಪೋಸ್ಟ್ ಡಿಪ್ಲೋಮಾ ಇನ್ ಟೂಲ್ ಡಿಸೈನ್ ಪ್ರವೇಶಕ್ಕೆ ಡಿಪ್ಲೋಮಾ ಉತ್ತೀರ್ಣರಾದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಂದ ಅರ್ಜಿಗಳನ್ನು GTTC Mysuru ಕೇಂದ್ರದಲ್ಲಿ ಆಹ್ವಾನಿಸಲಾಗಿದೆ.

ಈ ತರಬೇತಿಯನ್ನು ಉಚಿತವಾಗಿ ನೀಡಲಾಗುವುದು ಮತ್ತು ತರಬೇತಿಯನ್ನು ಯಶಸ್ವಿಯಾಗಿ ಮುಗಿಸಿದ ಅಭ್ಯರ್ಥಿಗಳಿಗೆ ಮಾಸಿಕ ವಿದ್ಯಾರ್ಥಿ ವೇತನವನ್ನು ನೀಡಲಾಗುವುದು. ಮೊದಲು ಬಂದವರಿಗೆ ಆದ್ಯತೆ ನೀಡಲಾಗಿವುದು. ಆರ್ಹ ಅಭ್ಯರ್ಥಿಗಳು ಅರ್ಜಿಯನ್ನು ಪಡೆದು ಸಲ್ಲಿಸಲು ಈ ಕೆಳಗೆ ನಮೂದಿಸಿರುವ ಮೊಬೈಲ್‌ ಸಂಖ್ಯೆಯನ್ನ ಸಂಪರ್ಕಿಸಿ 9243989954, 9141630303, 9141629598, 9945442654, 0821-2582750.

Key words: Applications -invited –SC-ST-students- admission – Free -Post Diploma – Tool Design -mysore