ನೈಪುಣ್ಯ ದಸರಾ ಪ್ರಶಸ್ತಿಗಾಗಿ ಅಂತರ ಶಾಲಾ ಚಿತ್ರಕಲಾ ಸ್ಪರ್ಧೆಗೆ ಅರ್ಜಿ ಆಹ್ವಾನ.

Promotion

ಮೈಸೂರು,ಸೆಪ್ಟಂಬರ್,3,2022(www.justkannada.in): ಮೈಸೂರಿನ ಆರ್.ಟಿ.ನಗರದ ‘ನೈಪುಣ್ಯ ಸ್ಕೂಲ್‌ ಆಫ್‌ ಎಕ್ಸ್ ಲೆನ್ಸ್ ‘ಶಾಲೆಯು ಪ್ರಸಕ್ತ ಸಾಲಿನ ನಾಡ ಹಬ್ಬ ದಸರಾ ಅಂಗವಾಗಿ ʻಅಂತರಶಾಲಾ ಚಿತ್ರಕಲಾ ಸ್ಪರ್ಧೆ-2022ʼ ಆಯೋಜಿಸುತ್ತಿದ್ದು ಪ್ರಥಮ ಬಹುಮಾನಿತರಿಗೆ ನಗದು ಸಹಿತ ʻನೈಪುಣ್ಯ ದಸರಾ ಪ್ರಶಸ್ತಿʼ ಪ್ರದಾನ ಮಾಡಲಿದೆ.

ಇದೇ ಸೆಪ್ಟೆಂಬರ್‌ 18ರಂದು  ಶಾಲಾ ಆವರಣದಲ್ಲಿ ಮಕ್ಕಳಿಗೆ ಚಿತ್ರಕಲಾ ಸ್ಪರ್ಧೆ ಹಮ್ಮಿಕೊಂಡಿದೆ. ಭಾಗವಹಿಸಲು ಇಚ್ಚಿಸುವ ವಿದ್ಯಾರ್ಥಿಗಳು ನೇರವಾಗಿ ಅಥವಾ ತಾವು ವ್ಯಾಸಂಗ ಮಾಡುತ್ತಿರುವ ಶಾಲೆಯ ಮುಖೇನ ಸೆಪ್ಟೆಂಬರ್‌ 13ರ ಒಳಗೆ ಹೆಸರು ನೋಂದಾಯಿಸಿಕೊಳ್ಳಲು ಕೋರಲಾಗಿದೆ.

ಪ್ರಶಸ್ತಿಯು ನಗದು ಬಹುಮಾನವನ್ನು ಒಳಗೊಂಡಿದೆ. ಸೀನಿಯರ್ ವಿಭಾಗದ ಪ್ರಥಮ ಬಹುಮಾನಿತರಿಗೆ 10 ಸಾವಿರ ರೂ. ನಗದು ಪುರಸ್ಕಾರ ದೊಂದಿಗೆ ‘ ನೈಪುಣ್ಯ ದಸರಾ ಪ್ರಶಸ್ತಿ’ ಪ್ರದಾನ ಮಾಡಲಾಗುವುದು ಅಂತೆಯೇ  ಜೂನಿಯರ್ , ಸಬ್  ಜೂನಿಯರ್ ವಿಭಾಗಗಳಿಗೂ ಪ್ರಶಸ್ತಿ ಹಾಗೂ ನಗದು ಬಹುಮಾನಗಳನ್ನು ಸ್ಪರ್ಧೆ ಒಳಗೊಂಡಿರುತ್ತದೆ.  ಹೆಚ್ಚಿನ ಮಾಹಿತಿಗೆ: 9108002966 /0821-2340041 ಸಂಪಕಿಸಹುದಾಗಿದೆ.

Key words: Application-Invitation – Inter School Art -Competition – Skill -dasara Award.