ಪೊಲೀಸ್ ಇಲಾಖೆಯಲ್ಲಿ ಸಬ್ ಇನ್ಸ್’ಪೆಕ್ಟರ್ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ

ಸಾಂದರ್ಭಿಕ ಚಿತ್ರ

ಬೆಂಗಳೂರು, ಫೆಬ್ರವರಿ 14, 2022 (www.justkannada.in): ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯಲ್ಲಿ ಖಾಲಿ ಇರುವ 63 ಸಬ್​ ಇನ್ಸ್​​ಪೆಕ್ಟರ್ ​ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ.

ಹೆಚ್ಚಿನ ಮಾಹಿತಿಗಾಗಿ rec21.ksp-online.in ಗೆ ಭೇಟಿ ನೀಡಿ. ಫೆಬ್ರವರಿ 10ರಿಂದ ಅರ್ಜಿ ಸಲ್ಲಿಕೆ ಆರಂಭವಾಗಿದೆ. ಅರ್ಜಿ ಸಲ್ಲಿಸುವ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತ ಇಲ್ಲಿದೆ ಮಾಹಿತಿ.

ಸಂಸ್ಥೆ ಕರ್ನಾಟಕ ರಾಜ್ಯ ಪೊಲೀಸ್
ಹುದ್ದೆಯ ಹೆಸರು ಸಬ್​ ಇನ್ಸ್​​ಪೆಕ್ಟರ್
ಒಟ್ಟು ಹುದ್ದೆಗಳು 63
ವಿದ್ಯಾರ್ಹತೆ ಪಿಯುಸಿ
ಅರ್ಜಿ ಸಲ್ಲಿಕೆ ಬಗೆ ಆನ್​ಲೈನ್​
ಅರ್ಜಿ ಸಲ್ಲಿಕೆ ಆರಂಭ ದಿನಾಂಕ 10/02/2022
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 03/03/2022

ವಿದ್ಯಾರ್ಹತೆ: ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆ ನೇಮಕಾತಿ ಅಧಿಸೂಚನೆ ಪ್ರಕಾರ, ಸಬ್​ ಇನ್ಸ್​ಪೆಕ್ಟರ್​ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಬೋರ್ಡ್​ನಿಂದ ಕಡ್ಡಾಯವಾಗಿ ಪಿಯುಸಿ ಉತ್ತೀರ್ಣರಾಗಿರಬೇಕು.

ವಯೋಮಿತಿ: ಕರ್ನಾಟಕ ರಾಜ್ಯ ಪೊಲೀಸ್ ನೇಮಕಾತಿ ಅಧಿಸೂಚನೆಯ ಪ್ರಕಾರ, ಅಭ್ಯರ್ಥಿಯು ಮಾರ್ಚ್​ 3, 2022ಕ್ಕೆ ಕನಿಷ್ಠ 21 ವರ್ಷಗಳು ಮತ್ತು ಗರಿಷ್ಠ 35 ವರ್ಷ ಮೀರಿರಬಾರದು.

ವಯೋಮಿತಿ ಸಡಿಲಿಕೆ: OBC ಅಭ್ಯರ್ಥಿಗಳು: 03 ವರ್ಷಗಳು
SC/ST ಅಭ್ಯರ್ಥಿಗಳು: 05 ವರ್ಷಗಳು

ಅರ್ಜಿ ಶುಲ್ಕ: ಸಾಮಾನ್ಯ, 2A, 2B, 3A, 3B ಅಭ್ಯರ್ಥಿಗಳು: ರೂ.500/-
SC/SC (A)/ST ಅಭ್ಯರ್ಥಿಗಳು: ರೂ.250/-

ಆಯ್ಕೆ ಪ್ರಕ್ರಿಯೆ: ದೈಹಿಕ ಗುಣಮಟ್ಟದ ಪರೀಕ್ಷೆ
ಸಹಿಷ್ಣುತೆ ಪರೀಕ್ಷೆ
ದೈಹಿಕ ದಕ್ಷತೆ ಪರೀಕ್ಷೆ