ಪ್ರೆಸ್ ಇನ್ಫರ್ಮೇಷನ್ ಬ್ಯೂರೋಗೆ ಅನುವಾದಕರಿಂದ ಅರ್ಜಿ ಆಹ್ವಾನ

Promotion

ಬೆಂಗಳೂರು,ಮಾರ್ಚ್ 16,2022(www.justkannada.in): ಭಾರತ ಸರ್ಕಾರದ ಪ್ರೆಸ್ ಇನ್ಫರ್ಮೇಷನ್ ಬ್ಯೂರೋ (ಪಿಐಬಿ) ದ ಬೆಂಗಳೂರು ಕಚೇರಿಯಲ್ಲಿ ಕಾರ್ಯ ನಿರ್ವಹಿಸಲು ಹಂಗಾಮಿ ಆಧಾರದ ಮೇಲೆ ಅನುವಾದಕರನ್ನು ಎಂಪಾನಲ್ ಮಾಡಿಕೊಳ್ಳಲು ಅರ್ಹರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಅರ್ಜಿದಾರರು ಇಂಗ್ಲಿಷ್ನಿಂದ ಕನ್ನಡ ಹಾಗೂ ಕನ್ನಡದಿಂದ ಇಂಗ್ಲೀಷ್ ಭಾಷೆಗೆ ಅನುವಾದ, ಕನ್ನಡ ಟೈಪಿಂಗ್ ಹಾಗೂ ಕಂಪ್ಯೂಟರ್ ಬಳಕೆ (ಡಿಎಒ) ಬಲ್ಲವರಾಗಿದ್ದು, ಮಾರ್ಚ್ 31ರೊಳಗಾಗಿ ಅರ್ಜಿ ಸಲ್ಲಿಸಲು ಅವಕಾಶವಿರುತ್ತದೆ.

ಹೆಚ್ಚಿನ ಮಾಹಿತಿಗಾಗಿ ಹೆಚ್ಚುವರಿ ಮಹಾ ನಿರ್ದೇಶಕರು, ಕೇಂದ್ರ ವಾರ್ತಾ ಶಾಖೆ, ಬೆಂಗಳೂರು ಕಚೇರಿಯ ಜಾಲತಾಣ www.pib.gov.in ನ್ನು ಸಂಪರ್ಕಿಸಬಹುದಾಗಿದೆ ಎಂದು ಬ್ಯೂರೋ ಉಪನಿರ್ದೇಶಕರಾದ ಜಯಂತಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.