ಆಪ್ತರು, ಕ್ಷೇತ್ರದ ದಾನಿಗಳಿಂದ ಇನ್ನೂ 1 ವರ್ಷ ಪ್ರಾಣಿಗಳ ದತ್ತು ಸ್ವೀಕಾರಕ್ಕೆ ಮನವಿ-ಸಚಿವ ಎಸ್.ಟಿ  ಸೋಮಶೇಖರ್

ಮೈಸೂರು,ಫೆಬ್ರವರಿ,15,2021(www.justkannada.in):  ಕೋವಿಡ್ ಸಂಕಷ್ಟ ಕಾಲದಲ್ಲಿ ನಾನು ನನ್ನ ಆಪ್ತರು, ಸಚಿವರು, ಕ್ಷೇತ್ರದ ಜನತೆಯಿಂದ 3.65 ಕೋಟಿ ರೂಪಾಯಿ ಸಂಗ್ರಹಿಸಿ ಕೊಟ್ಟಿದ್ದೆ. ಇದೇ ವೇಳೆ ಪ್ರಾಣಿಗಳನ್ನು ಹಲವರು ದತ್ತು ಪಡೆದಿದ್ದರು. ಹೀಗಾಗಿ ಈ ಎಲ್ಲ ದಾನಿಗಳು ಇನ್ನೂ ಒಂದು ವರ್ಷದ ಅವಧಿಗೆ ದತ್ತು ತೆಗೆದುಕೊಳ್ಳುವಂತೆ ಪತ್ರ ಮುಖೇನ ಮನವಿ ಮಾಡುವುದಾಗಿ ಸಹಕಾರ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ.ಸೋಮಶೇಖರ್ ಹೇಳಿದರು.

ಇಲ್ಲಿನ ಜಯಚಾರಾಜೇಂದ್ರ ಮೃಗಾಲಯಕ್ಕೆ ಭೇಟಿ ನೀಡಿ ಮೃಗಾಲಯದ ಸ್ಥಿತಿಗತಿಗಳನ್ನು ಪರಿಶೀಲನೆ ನಡೆಸಿ ಮಾತನಾಡಿದ ಸಚಿವ ಎಸ್.ಟಿ ಸೋಮಶೇಖರ್, ಕೋವಿಡ್ 19ರ ಸಂದರ್ಭದಲ್ಲಿ ಮೃಗಾಲಯಕ್ಕೆ ಆರ್ಥಿಕ ಬಿಕ್ಕಟ್ಟು ಎದುರಾಗಿತ್ತು. ಆದರೆ, ಈಗ ಪ್ರವಾಸೋದ್ಯಮವೂ ಅಭಿವೃದ್ಧಿಯಾಗುತ್ತಿರುವುದರ ಜೊತೆಗೆ ಪ್ರವಾಸಿಗರ ಭೇಟಿ ಸಹ ಹೆಚ್ಚಳವಾಗುತ್ತಿದೆ. ಇದರಿಂದ ಮೃಗಾಲಯಕ್ಕೆ ಹಣದ ಹರಿವೂ ಸಹ ಬರತೊಡಗಿದೆ ಎಂದು ತಿಳಿಸಿದರು.jk

ಇನ್ಫೋಸಿಸ್‌ನಿಂದ 3 ಕೋಟಿ ರೂ. ವೆಚ್ಚದಲ್ಲಿ ಗೊರಿಲ್ಲಾಕ್ಕೆ ಶೆಡ್; ಸುಧಾಮೂರ್ತಿ ಅವರಿಗೆ ಸಚಿವರ ಶ್ಲಾಘನೆ

ಜೂನ್ ನಲ್ಲಿ ಮೂರು ಕೋಟಿ ರೂಪಾಯಿ ವೆಚ್ಚದಲ್ಲಿ ಇನ್ಫೋಸಿಸ್ ಪ್ರತಿಷ್ಠಾನದ ವೆಚ್ಚದಲ್ಲಿ ಗೊರಿಲ್ಲಾಕ್ಕೆ ಶೆಡ್ ನಿರ್ಮಾಣ ಮಾಡುತ್ತಿರುವ ಕಾಮಗಾರಿಯನ್ನು ವೀಕ್ಷಣೆ ಮಾಡಿದ ಸಚಿವ ಎಸ್.ಟಿ ಸೋಮಶೇಖರ್, ಇನ್ಫೋಸಿಸ್ ಪ್ರತಿಷ್ಠಾನದ ಮುಖ್ಯಸ್ಥರಾದ ಸುಧಾಮೂರ್ತಿ ಅವರು ಅತ್ಯುತ್ತಮವಾದ ಸಮಾಜಮುಖಿ ಕೆಲಸ ಮಾಡುತ್ತಿದ್ದಾರೆಂದು ಶ್ಲಾಘನೆ ವ್ಯಕ್ತಪಡಿಸಿದರು. ಸುಧಾಮೂರ್ತಿಯವರು ಹೆಬ್ಬಾಳು ಕೆರೆಯನ್ನೂ ಅಭಿವೃದ್ಧಿ ಮಾಡಿದ್ದಾರೆ. ಇಂತಹ ಅನೇಕ ಸಮಾಜಮುಖಿ ಕಾರ್ಯಗಳನ್ನು ಅವರು ಮಾಡುತ್ತಿರುವುದು ನಿಜಕ್ಕೂ ಪ್ರಶಂಸನೀಯ. ಹೀಗಾಗಿ ಅವರಿಗೆ ಪೌರಸನ್ಮಾನವನ್ನು ಮಾಡಲಾಗುವುದು. ಜೊತೆಗೆ ಗೊರಿಲ್ಲಾಕ್ಕೆ ಶೆಡ್ ನಿರ್ಮಾಣ ಮಾಡುವ ಕಾಮಗಾರಿ ಅತ್ಯುತ್ತಮವಾಗಿ ಸಾಗುತ್ತಿತ್ತು, ಬರುವ ಜೂನ್ ಒಳಗೆ ಪೂರ್ಣಗೊಳ್ಳಬಹುದು ಎಂದು ತಿಳಿಸಿದರು.

ಸಿಂಗಾಪುರದ ಒರಂಗೂಟ್ ಪ್ರಾಣಿಯ ವಾಸಸ್ಥಾನಕ್ಕಾಗಿ ಆರ್ ಬಿ ಐ 70 ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಿಸುತ್ತಿರುವ ಮನೆಯನ್ನು ಸಹ ಸಚಿವರು ಇದೇ ವೇಳೆ ವೀಕ್ಷಣೆ ಮಾಡಿದರು. ಅನೇಕ ಸಂಸ್ಥೆಗಳಿಂದಲೂ ಸಹ ಇಂತಹ ಉತ್ತಮ ಕಾರ್ಯಗಳು ಆಗಬೇಕಿದೆ ಎಂದು ಸಚಿವರಾದ ಸೋಮಶೇಖರ್ ಅವರು ತಿಳಿಸಿದರು.

ಇಂಥದ್ದಕ್ಕೆ ಸಿಎಸ್‌ಆರ್ ನಿಧಿ ಬಳಕೆಯಾಗಲಿ

ಖಾಸಗಿ ಕಂಪನಿಗಳು ಸಿಎಸ್‌ಆರ್ ನಿಧಿಗಳನ್ನು ಇಂಥ ಜನೋಪಯೋಗಿ ಕೆಲಸಗಳಿಗೆ ಬಳಸಬೇಕು. ಮೃಗಾಲಯ ಅಭಿವೃದ್ಧಿ, ಪಾರ್ಕ್, ಕೆರೆಗಳ ಮೂಲಸೌಕರ್ಯಗಳ ಅಭಿವೃದ್ಧಿಗೆ ಆದ್ಯತೆ ನೀಡಬೇಕು. ಈ ಪೂರೈಸುವ ಮೂಲಕ ಸಾರ್ವಜನಿಕವಾಗಿ ಹೆಚ್ಚು ಬಳಕೆಯಾಗುವ ಪ್ರದೇಶಗಳ ಅನುಕೂಲ ಮಾಡಿಕೊಡಬೇಕು. ಹೀಗಾಗಿ ಅಧಿಕಾರಿಗಳ ಸಭೆ ನಡೆಸಿ ಇಂಥ ನಿಧಿಗಳ ಬಳಕೆಯನ್ನು ಹೇಗೆ ಮಾಡಬೇಕೆಂಬ ಬಗ್ಗೆಯೂ ಚರ್ಚೆ ನಡೆಸಲಾಗುವುದು ಎಂದು ಹೇಳಿದರು.

ಆಹಾರ ಸಂಗ್ರಹಾಲಯ ಪರಿಶೀಲನೆ

ಇದೇ ವೇಳೆ ಮೃಗಾಲಯದಲ್ಲಿ ಪ್ರಾಣಿ, ಪಕ್ಷಿಗಳಿಗಾಗಿ ಕೊಡಮಾಡುವ ಆಹಾರ ಧಾನ್ಯಗಳ ಸಂಗ್ರಹಾಲಯಗಳಿಗೆ ಭೇಟಿ ನೀಡಿದ ಸಚಿವರಾದ ಸೋಮಶೇಖರ್ ಅವರು, ಅಧಿಕಾರಿಗಳಿಂದ ಸಂಗ್ರಹಣೆ, ವಿತರಣೆ ಪ್ರಮಾಣಗಳ ಬಗ್ಗೆ ಮಾಹಿತಿಯನ್ನು ಪಡೆದುಕೊಂಡರು. ಮಾಸಾಂಹಾರಗಳ ದರ ಹೆಚ್ಚಳಕ್ಕೆ ಸಂಬಂಧಪಟ್ಟಂತೆ ಸರ್ಕಾರದ ಏನೆಲ್ಲ ಕ್ರಮಗಳನ್ನು ತೆಗೆದುಕೊಳ್ಳಬಹುದು ಎಂಬ ನಿಟ್ಟಿನಲ್ಲಿ ಅರಣ್ಯ ಮಂತ್ರಿಗಳ ಜೊತೆ ಚರ್ಚೆ ನಡೆಸಿ, ಮುಖ್ಯಮಂತ್ರಿಗಳ ಗಮನಕ್ಕೆ ತಂದು ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಸಚಿವರಾದ ಸೋಮಶೇಖರ್ ತಿಳಿಸಿದರು.

ಅರಮನೆ ಹೆಣ್ಣಾನೆ ಸಂತಾನೋತ್ಪತ್ತಿಗೆ ಸರ್ಕಾರದ ಅನುಮತಿ

ಮೈಸೂರು ಮೃಗಾಲಯದಲ್ಲಿರುವ ಖಾಸಗಿ ಹೆಣ್ಣಾನೆ ಇದ್ದು, ಅದರ ಸಂತಾನೋತ್ಪತ್ತಿಗೆ ಯಾವ ರೀತಿಯಾಗಿ ಕ್ರಮ ತೆಗೆದುಕೊಳ್ಳಬಹುದು ಎಂಬ ಬಗ್ಗೆ ಮೃಗಾಲಯದ ಅಧಿಕಾರಿಗಳ ಜೊತೆ ಸಚಿವರಾದ ಸೋಮಶೇಖರ್ ಅವರು ಚರ್ಚಿಸಿದರು. ಹೀಗಾಗಿ ಅದರ ಸಂತಾನೋತ್ಪತ್ತಿಗೆ ಸರ್ಕಾರದಿಂದ ಅನುಮತಿ ಪತ್ರ ಕೊಡಿಸುವುದಲ್ಲದೆ, ಎಲ್ಲಿ ಅನುಕೂಲ ಮಾಡಿಕೊಡಬಹುದು ಎಂಬ ಬಗ್ಗೆ ಚರ್ಚೆ ನಡೆಸಿದರು. ಉಸ್ತುವಾರಿ ಸಚಿವರು ಅರಮನೆಗೆ ಭೇಟಿ ಕೊಟ್ಟಿದ್ದ ಸಮಯದಲ್ಲಿ ರಾಜಮಾತೆ ಪ್ರಮೋದಾ ದೇವಿ ಒಡೆಯರ್ ಅವರು ಈ ಬಗ್ಗೆ ಮನವಿ ಮಾಡಿದ್ದರು.appeal-request-adoption-another-1-year-old-animal-minister-st-somashekhar

ಮೃಗಾಲಯದ ಅಧ್ಯಕ್ಷರಾದ ಮಹದೇವಸ್ವಾಮಿ ಮತ್ತು ಸದಸ್ಯರು, ಮೃಗಾಲಯದ ಕಾರ್ಯನಿರ್ವಾಹಕ ನಿರ್ದೇಶಕರಾದ ಅಜಿತ್ ಕುಲಕರ್ಣಿ, ಮೃಗಾಲಯದ ಪ್ರಧಾನ ನಿರ್ದೇಶಕರಾದ ರವಿ, ಮೈಸೂರು ಹಾಲು ಒಕ್ಕೂಟಗಳ ನಿರ್ದೇಶಕರಾದ ಅಶೋಕ್, ಸಹಕಾರ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರ ವಿಶೇಷ ಕರ್ತವ್ಯಾಧಿಕಾರಿಯವರಾದ ದಿನೇಶ್ ಗೂಳಿಗೌಡ ಸೇರಿದಂತೆ ಅನೇಕ ಪ್ರಮುಖರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ENGLISH SUMMARY…

Minister S.T. Somashekar appeals well-wishers and donors of Mysuru to adopt zoo animals for one more year
Mysuru, Feb. 15, 2021 (www.justkannada.in): “During COVID-19 pandemic time I had collected a sum of RS. 3.65 crore from donors of Mysuru, Ministers, and other people whom I know. Many people had adopted the animals. I will again appeal all of them to continue their adoption of the zoo animals in Mysuru for one more year,” opined Mysuru District In-charge Minister S.T. Somashekar.appeal-request-adoption-another-1-year-old-animal-minister-st-somashekhar
He visited the Jayachamarajendra Zoo yesterday and checked the condition as the Zoo authorities were facing a financial crisis during the COVID-19 pandemic time. “But now the situation is gradually improving as the inflow of visitors and tourists is increasing,” he said.
On the occasion, he thanked Mrs. Sudha Murthy of Infosys Foundation for contributing a sum of Rs. 3 crore for construction of a gorilla shed and informed that a program would be held soon to felicitate her.
Keywords: Minister S.T. Somashekar/ visits Mysore zoo/ Jayacharmajendra Zoo

Key words: Appeal- request – adoption – another- 1 year -old animal -Minister -ST Somashekhar