ಸೋತವರಿಗೂ ಸಚಿವ ಸ್ಥಾನ, ಸೂಕ್ತ ಸ್ಥಾನಮಾನಕ್ಕೆ ಮನವಿ: ಮುನಿರತ್ನ ಮತ್ತು‌ ಪ್ರತಾಪ್ ಗೌಡ ಪಾಟೀಲ್ ವಿರುದ್ಧದ ದೂರು ವಾಪಸ್ ಪಡೆಯಲು ಒತ್ತಾಯ…

Promotion

ಬೆಂಗಳೂರು,ಡಿ,11,2019(www.justkannada.in):  ಉಪಚುನಾವಣೆಯಲ್ಲಿ ಗೆದ್ದ ನೂತನ ಶಾಸಕರು ಸಿಎಂ ಬಿಎಸ್ ಯಡಿಯೂರಪ್ಪ ಅವರನ್ನ ಭೇಟಿಯಾಗಿ ಸೋತವರಿಗೂ ಸಚಿವ ಸ್ಥಾನ ಅಥವಾ ಸೂಕ್ತ ಸ್ಥಾನಮಾನ ನೀಡುವಂತೆ ಒತ್ತಾಯ ಮಾಡಿದರು.

ಇಂದು ಡಾಲರ್ಸ್ ಕಾಲೋನಿಯಲ್ಲಿರುವ ಸಿಎಂ ನಿವಾಸಕ್ಕೆ ನೂತನ ಶಾಸಕರಾದ ರಮೇಶ್ ಜಾರಕಿಹೊಳಿ, ಬಿ ಸಿ ಪಾಟೀಲ್, ಎಸ್ ಟಿ ಸೋಮಶೇಖರ್, ಬೈರತಿ ಬಸವರಾಜು, ಸುಧಾಕರ್ ಭೇಟಿ ನೀಡಿದರು. ಇವರ ಜತೆ ಪ್ರತಾಪ್ ಗೌಡ ಪಾಟೀಲ್ ಪರಾಜಿತ ಅಭ್ಯರ್ಥಿ ಹೆಚ್.ವಿಶ್ವನಾಥ್ ಸಹ ಆಗಮಿಸಿ ಸಿಎಂ ಬಿಎಸ್ ವೈ ಭೇಟಿಯಾದರು.

ನಿನ್ನೆಯ ಸಭೆಯಲ್ಲಿ ಕೈಗೊಂಡ ನಿರ್ಧಾರಗಳನ್ನು ಶಾಸಕ ರಮೇಶ್ ಜಾರಕಿಹೊಳಿ ಸಿಎಂಗೆ ತಿಳಿಸಿದರು. ಮುನಿರತ್ನ ಮತ್ತು‌ ಪ್ರತಾಪ್ ಗೌಡ ಪಾಟೀಲ್ ವಿರುದ್ಧ ದೂರುಗಳನ್ನು ವಾಪಸ್ ಪಡೆಯಲು ಸಿಎಂ ಬಿಎಸ್ ವೈಗೆ  ಶಾಸಕರು ಒತ್ತಡ ಹೇರಿದರು. ಅವರಿಬ್ಬರ ಕ್ಷೇತ್ರಗಳಿಗೆ ಬೇಗ ಚುನಾವಣೆ ಆಗುವಂತೆ ನೋಡಿಕೊಳ್ಳಬೇಕು ಜೊತೆಗೆ ಅವರಿಬ್ಬರಿಗೂ ಎರಡು ಸಚಿವ ಸ್ಥಾನಗಳನ್ನು  ಕಾಯ್ದಿರಿಸಬೇಕು ಎಂದು ಬೇಡಿಕೆ ಇಟ್ಟರು.

Key words: Appeal -ministerial position – Munirthna  Pratap Gowda Patil -demanded –case-withdrawal-cm bs yeddyurappa