ಬಿಎಸ್ ವೈ, ಬಿವೈವಿ, ಎಸ್.ಟಿ ಸೋಮಶೇಖರ್ ವಿರುದ್ಧದ ಕೇಸ್ ಗೆ ಉತ್ತರವೇನು..? ಕ್ರಮವೇನು..?  ರಾಜ್ಯ ಕಾಂಗ್ರೆಸ್ ಕಿಡಿ.

ಬೆಂಗಳೂರು,ಸೆಪ್ಟಂಬರ್,19,2022(www.justkannada.in):  ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರ ಇಡಿ ವಿಚಾರಣೆಗೆ ರಾಜ್ಯ ಕಾಂಗ್ರೆಸ್ ಘಟಕ ಕಿಡಿಕಾರಿದೆ.

ಟ್ವೀಟ್ ಮೂಲಕ ರಾಜ್ಯ ಬಿಜೆಪಿ ಸರ್ಕಾರಕ್ಕೆ ಚಾಟಿ ಬೀಸಿರುವ ರಾಜ್ಯ ಕಾಂಗ್ರೆಸ್,   40 ಪರ್ಸೆಂಟ್ ಸರ್ಕಾರದ ಭ್ರಷ್ಟಾಚಾರ ಮುಚ್ಚಿಕೊಳ್ಳಲು ಕಾಂಗ್ರೆಸ್ ವಿರುದ್ಧದ ಬಿಜೆಪಿಯ ಬ್ಲಾಕ್ಮೇಲ್ ತಂತ್ರ ಫಲಿಸದು. ಕಾಂಗ್ರೆಸ್‌ ನ ಹಳೆಯ ಪ್ರಕರಣಗಳನ್ನು ಹಿಡಿಯುತ್ತೇವೆ ಎಂದಿದ್ದ ಬಿಜೆಪಿಯ ಎದುರೇ ಈಗ ಹಳೆಯ ಅಕ್ರಮದ ಭೂತ ಬಂದು ನಿಂತಿದೆ. BSY, BYV & ಎಸ್.ಟಿ ಸೋಮಶೇಖರ್ ವಿರುದ್ದದ ಪ್ರಕರಣಕ್ಕೆ ಉತ್ತರವೇನು, ಕ್ರಮವೇನು ಎಂದು ಪ್ರಶ್ನಿಸಿದೆ.

ಬಿಎಸ್ ವೈ ಅವರು ಈಗ ವಿಚಾರಣೆ ಎದುರಿಸಬೇಕಿದೆ, ಯತ್ನಾಳ್ ಅವರು ಹೇಳಿದಂತೆ ಕೇಂದ್ರ ಸಂಸದೀಯ ಮಂಡಳಿಗೆ ರಾಜೀನಾಮೆ ನೀಡುವರೇ? ಬಿವೈ ವಿಜಯೇಂದ್ರ ಅವರು ಉಪಾಧ್ಯಕ್ಷ ಹುದ್ದೆಗೆ ರಾಜೀನಾಮೆ ನೀಡುವರೇ ಅಥವಾ ಜೈಲಿನಿಂದಲೇ ಹುದ್ದೆ ನಿರ್ವಹಿಸುವರೇ? ಎಸ್.ಟಿ ಸೋಮಶೇಖರ್ ಅವರ ರಾಜೀನಾಮೆ ಯಾವಾಗ..? ಎಂದು ರಾಜ್ಯ ಕಾಂಗ್ರೆಸ್ ವಾಗ್ದಾಳಿ ನಡೆಸಿದೆ.

Key words: answer – against –BSY- BYV- ST Somashekhar-State -Congress

ENGLISH SUMMARY…

What is the reply for the cases against BYS, BYV, S.T. Somashekar? What are the measures? State Cong. questions
Bengaluru, September 19, 2022 (www.justkannada.in): The State Cong. Committee has expressed its ire upon the ED inquiry against KPCC President D.K. Shivakumar.
In a tweet, KPCC has alleged that the BJP govt. in order to conceal its 40% corruption allegations has taken up to blackmail politics against the Congress. The BJP had claimed that it would reopen old cases of the Congress government, whereas it has landed in it’s own soup. What is the reply of the State BJP Govt. regarding the court cases against B.S. Yediyurappa, B.Y. Vijendra and S.T. Somashekar? What are the measures,” it questioned in its tweet.
“BSY has to face the inquiry now, Will he resign from the Central Parliamentary Board as told by Yatnal? Will B.Y. Vijendra resign from his Vice-President’s post or will he work in the jail? When will Minister S.T. Somashekar resign,” KPCC’s tweet read.
Keywords: KPCC/ tweet/ BJP/ cases/ measures?