ನೀಟ್(NEET) ಪರೀಕ್ಷೆಗೆ ಗೈರಾದವರಿಗೆ ಮತ್ತೊಂದು ಅವಕಾಶ : ಸುಪ್ರೀಂ ಅನುಮತಿ 

kannada t-shirts

ಬೆಂಗಳೂರು,ಅಕ್ಟೋಬರ್,12,2020(www.justkannada.in) : ಕೊರೊನಾ ಕಾರಣದಿಂದ NEET ಪರೀಕ್ಷೆಗೆ ಹಾಜರಾಗದ ವಿದ್ಯಾರ್ಥಿಗಳಿಗೆ ಸುಪ್ರೀಂಕೋರ್ಟ್ ಮತ್ತೊಂದು ಅವಕಾಶ ನೀಡಿದ್ದು, ಅಕ್ಟೋಬರ್ 14 ರಂದು ಮತ್ತೊಮ್ಮೆ NEET ಪರೀಕ್ಷೆ ನಡೆಸಲು ಅನುಮತಿ ನೀಡಿದೆ.jk-logo-justkannada-logo

ಕೊರೊನಾ ಸೋಂಕಿನ ಭೀತಿಯಿಂದ ಕಂಟೈನ್ಮೆಂಟ್ ವಲಯದಲ್ಲಿ ವಾಸ ಮಾಡುತ್ತಿದ್ದ ಅನೇಕ ವಿದ್ಯಾರ್ಥಿಗಳು ಸೆಪ್ಟೆಂಬರ್ ನಲ್ಲಿ ನಡೆದ ನೀಟ್ ಪರೀಕ್ಷೆಗೆ ಹಾಜರಾಗಲು ಸಾಧ್ಯವಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ(ನೀಟ್) ನಡಸುವುದಕ್ಕೆ ಮತ್ತೆ ಅವಕಾಶ ನೀಡಿದೆ.

ವಿದ್ಯಾರ್ಥಿಗಳು ಸಲ್ಲಿಸಲಾಗಿದ್ದಂತಹ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ನ್ಯಾಯಪೀಠ, ಕೊರೊನಾದಿಂದ ಸಿಇಟಿ ಪರೀಕ್ಷೆ ತಪ್ಪಿಸಿಕೊಂಡಿದ್ದಂತಹ ವಿದ್ಯಾರ್ಥಿಗಳಿಗೆ ಮತ್ತೆ ಪರೀಕ್ಷೆ ಬರೆಯುವುದಕ್ಕೆ ಒಪ್ಪಿಗೆ ನೀಡಿದೆ.Another-opportunity-NEET-test-takers-Supreme- permission

ಅಕ್ಟೋಬರ್ 16ರಂದು ಫಲಿತಾಂಶ ಪ್ರಕಟಿಸುವಂತೆ ಸೂಚನೆ

ಅಕ್ಟೋಬರ್ 14ರಂದು ನೀಟ್ ಪರೀಕ್ಷೆ ನಡೆಸಿ, ಅಕ್ಟೋಬರ್ 16ರಂದು ಫಲಿತಾಂಶ ಕೂಡ ಪ್ರಕಟಿಸುವಂತೆ ಸೂಚಿಸಿದೆ. ಸೆಪ್ಟೆಂಬರ್ 13ರಂದು ದೇಶಾದ್ಯಂತ 3,843 ಕೇಂದ್ರಗಳಲ್ಲಿ 14 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು.

key words : Another-opportunity-NEET-test-takers-Supreme- permission

website developers in mysore