‘ನಾನು ಮತ್ತು ಗುಂಡ’ ಚಿತ್ರದ ಮತ್ತೊಂದು ಸಾಂಗ್ ರಿಲೀಸ್…

Promotion

ಸೆನ್ಸಾರ್’ನಿಂದ ಶಬಾಶ್’ಗಿರಿ ಪಡೆದ ಉತ್ಸಾಹದಲ್ಲಿ ಬಿಡುಗಡೆಗೆ ಸಿದ್ದಗೊಂಡಿರೋ ‘ನಾನು ಮತ್ತು ಗುಂಡ’ ಚಿತ್ರತಂಡ ಚಿತ್ರದ ಮತ್ತೊಂದು ಹಾಡನ್ನ ಬಿಡುಗಡೆಗೊಳಿಸಿದೆ.

ಆನಂದ್ ಆಡಿಯೋ ಯುಟ್ಯೂಬ್ ಚಾನೆಲ್’ನಲ್ಲಿ ಬಿಡುಗಡೆಗೊಂಡ ಅಯ್ಯಯ್ಯೋ ರಾಮ ರಾಮ ಎಂಬ ಹಾಡು  ಕ್ಯಾಚಿ ಲಿರಿಕ್ಸ್’ನಿಂದ ಈಗಾಗಲೇ ಚಿತ್ರಪ್ರೇಮಿಗಳನ್ನ ರಂಜಿಸುತ್ತಿದೆ.

ಆಟೋ ಡ್ರೈವರ್ ಶಂಕರನ ಬೆನ್ಹತ್ತೋ ಗುಂಡನ ಕಾಟ ತಡೆಯಲಾರದ ಶಂಕರನ ಪರಿಸ್ಥಿತಿ ಈ ಹಾಡಿನಲ್ಲಿ ತಿಳಿಹಾಸ್ಯದೊಂದಿದೆ ವ್ಯಕ್ತವಾಗಿ ಜನಮೆಚ್ಚುಗೆ ಪಡೆಯುತ್ತಿದೆ. ಕಾರ್ತಿಕ್ ಶರ್ಮಾ ಕಂಪೋಸ್ ಮಾಡಿರೋ ಕ್ಯಾಚಿ ಟ್ಯೂನ್’ಗೆ ರೋಹಿತ್ ರಮಣ್ ಅಷ್ಟೇ ಕ್ಯಾಚಿಯಾಗಿರೋ ಸಾಹಿತ್ಯವನ್ನ ಕಟ್ಟಿದ್ದಾರೆ. ಈ ಹಾಡು ಚಿತ್ರಪ್ರೇಮಿಗಳ ಹಾಗೂ ಶ್ವಾನಪ್ರೇಮಿಗಳ ಆಸಕ್ತಿಯನ್ನ ಮತ್ತಷ್ಟು ಹೆಚ್ಚಿಸುತ್ತಿದೆ.

Key words: Another- song- release -movie –nanu mattu Gunda’.