ಮಾರ್ಚ್ 11ಕ್ಕೆ ಪವರ್ ಸ್ಟಾರ್ ಅಪ್ಪು ನಟನೆಯ ‘ಜೇಮ್ಸ್​’ ಚಿತ್ರದ ಮತ್ತೊಂದು ಸಾಂಗ್ ರಿಲೀಸ್ !

Promotion

ಮೈಸೂರು, ಮಾರ್ಚ್ 09, 2022 (www.justkannada.in): ಪವರ್ ಸ್ಟಾರ್ ಅಪ್ಪು ನಟನೆಯ ‘ಜೇಮ್ಸ್​’ ಚಿತ್ರದ ಮತ್ತೊಂದು ಸಾಂಗ್ ಮಾರ್ಚ್ 11ಕ್ಕೆ ರಿಲೀಸ್​ ಆಗಲಿದೆ.

ಈಗಾಗಲೇ ಬಿಡುಗಡೆಯಾಗಿರುವ ಟ್ರೇಡ್ ಮಾರ್ಕ್ ಸಾಂಗ್​ ಸ್ಯಾಂಡಲ್​ವುಡ್​ ಅಷ್ಟೇ ಅಲ್ಲದೇ ಭಾರತೀಯ ಚಿತ್ರರಂಗದಲ್ಲಿ ಹೊಸ ಟ್ರೆಂಡ್​ ಸೃಷ್ಟಿ ಮಾಡಿದೆ.

ಚಿತ್ರದ ಮತ್ತೊಂದು ಸಾಂಗ್​ ರಿಲೀಸ್ ಮಾಡಲ ಚಿತ್ರತಂಡ ಸಜ್ಜಾಗಿದ್ದು, ಮಾರ್ಚ್ 11ಕ್ಕೆ 11ಗಂಟೆ 11 ನಿಮಿಷಕ್ಕೆ ‘ಜೇಮ್ಸ್​’ ಸಿನಿಮಾದ ಮತ್ತೊಂದು ಸಾಂಗ್​ ಬಿಡುಗಡೆಯಾಗುತ್ತಿದೆ. ಈ ವಿಚಾರ ಅಪ್ಪು ಅಭಿಮಾನಿಗಳ ಸಂತಸಕ್ಕೆ ಕಾರಣವಾಗಿದೆ.

ಅಂದಹಾಗೆ ಚಂದನ್ ಶೆಟ್ಟಿ ಇತ್ತೀಚೆಗೆ ಇದೇ ಹಾಡಿನ ಎರಡು ಸಾಲುಗಳನ್ನು ಹಾಡಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಇದೇ ಮಾರ್ಚ್ 17 ಜೇಮ್ಸ್ ತೆರೆಗೆ ಬರುತ್ತಿದೆ.

ಪುನೀತ್ ರಾಜ್‌ಕುಮಾರ್ ಅಭಿಮಾನಿಗಳು ‘ಜೇಮ್ಸ್’ ಸಿನಿಮಾ ಬಿಡುಗಡೆ ಹಾಗೂ ಅಪ್ಪು ಹುಟ್ಟುಹಬ್ಬದ ಅಂಗವಾಗಿ ಎರಡು ಹೆಲಿಕಾಪ್ಟರ್‌ಗಳನ್ನು ಬುಕ್ ಮಾಡಿದ್ದಾರೆ. ಈ ಹೆಲಿಕಾಪ್ಟರ್ ಮೂಲಕ ವೀರೇಶ್ ಚಿತ್ರಮಂದಿರ, ಪ್ರಸನ್ನ ಹಾಗೂ ಕಂಠೀರವ ಸ್ಟುಡಿಯೋದಲ್ಲಿರುವ ಅಪ್ಪು ಸಮಾಧಿಗೆ ಪುಷ್ಪಾರ್ಚನೆ ಮಾಡಲಿದ್ದಾರೆ.