ಪ್ಯಾರಾಲಿಂಪಿಕ್ಸ್ ನಲ್ಲಿ ಭಾರತಕ್ಕೆ ಮತ್ತೊಂದು ಚಿನ್ನ: ಬಂಗಾರ ಗೆದ್ಧು ವಿಶ್ವದಾಖಲೆ ನಿರ್ಮಿಸಿದ ಸುಮಿತ್ ಅಂಟಿಲ್.

ಟೋಕಿಯೋ,ಆಗಸ್ಟ್,30,2021(www.justkannada.in):  ಟೋಕಿಯೋ ಪ್ಯಾರಾಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಉತ್ತಮ ಪ್ರದರ್ಶನ ನೀಡುತ್ತಿರುವ ಭಾರತ ಇದೀಗ ಮತ್ತೊಂದು ಚಿನ್ನದ ಪದಕವನ್ನ ತನ್ನದಾಗಿಸಿಕೊಂಡಿದೆ ಜಾವೆಲಿನ್ ಥ್ರೋನಲ್ಲಿ . ಸುಮಿತ್ ಆಂಟಿಲ್  ಬಂಗಾರ ಪದಕ ಗೆದ್ದು ವಿಶ್ವ ದಾಖಲೆ ನಿರ್ಮಿಸಿದ್ದಾರೆ.

ಜಾವೆಲಿನ್ ಥ್ರೋನಲ್ಲಿ ಸುಮಿತ್ ಅಂಟಿಲ್ 68.55 ಮೀಟರ್ ದೂರ ಎಸೆಯುವ ಮೂಲಕ ವಿಶ್ವದಾಖಲೆ ನಿರ್ಮಿಸಿದ್ದಾರೆ. ಈ ಮೂಲಕ ಭಾರತ ಒಂದೇ ದಿನ 5 ಪದಕಗಳನ್ನ ಗೆದ್ದಿದೆ. ಎರಡು ಚಿನ್ನ, 4 ಬೆಳ್ಳಿ, ಒಂದು ಕಂಚು ಸೇರಿ 7 ಪದಕಗಳನ್ನ ಭಾರತ ಗೆದ್ದಿದೆ.

ಅವನಿ ಲೇಖಾರಾ ಹೊಸ ಪ್ಯಾರಾಲಿಂಪಿಕ್ ದಾಖಲೆಯೊಂದಿಗೆ ಭಾರತಕ್ಕೆ ಮೊದಲ ಚಿನ್ನವನ್ನು ಪಡೆದಿದ್ದರು. ಯೋಗೇಶ್ ಕಥುನಿಯಾ ಪುರುಷರ ಡಿಸ್ಕಸ್ ಥ್ರೋನಲ್ಲಿ ಬೆಳ್ಳಿ ಯನ್ನು ಗಳಿಸಿದ್ದಾರೆ.  ದೇವೇಂದ್ರ ಝಾಜಾರಿಯಾ ಪುರುಷರ ಜಾವೆಲಿನ್ ಎಸೆತದಲ್ಲಿ ಬೆಳ್ಳಿ ಪದಕವನ್ನು ಗೆದ್ದಿದ್ದರೆ, ಸುಂದರ್ ಸಿಂಗ್ ಗುರ್ಜಾರ್ ಈ ಸ್ಪರ್ಧೆಯಲ್ಲಿ ಕಂಚಿನ ಪದಕವನ್ನು ಸೇರಿಸಿದ್ದಾರೆ.

Key words: Another- gold -India –Paralympics-Sumit Antil