ಬೆಂಗಳೂರು,ಮಾರ್ಚ್,10,2023(www.justkannada.in): ಮಂಡ್ಯ ಲೋಕಸಭಾ ಕ್ಷೇತ್ರ ಪಕ್ಷೇತರ ಸಂಸದೆ ಸುಮಲತಾ ಅಂಬರೀಶ್ ಇಂದು ತಮ್ಮ ಮುಂದಿನ ರಾಜಕೀಯ ನಡೆ ಬಗ್ಗೆ ಘೋಷಣೆ ಮಾಡಲಿದ್ದಾರೆ.![]()
ಇಂದು ಮಂಡ್ಯದಲ್ಲಿ ಸುದ್ಧಿಗೋಷ್ಠಿ ನಡೆಸುವ ಸಂಸದೆ ಸುಮಲತಾ ಅಂಬರೀಶ್ ತಮ್ಮ ಮುಂದಿನ ರಾಜಕೀಯ ನಡೆ ಬಗ್ಗೆ ಘೋಷಿಸಲಿದ್ದಾರೆ. ಹಾಗೆಯೇ ಹಲವು ಬಿಜೆಪಿ ನಾಯಕರ ಜೊತೆ ಈಗಾಗಲೇ ಸುಮಲತಾ ಅಂಬರೀಶ್ ಚರ್ಚಿಸಿದ್ದು ಬಿಜೆಪಿ ಸೇರುವ ಸಾಧ್ಯತೆ ಇದೆ.
ಈ ಕುರಿತು ಬೆಂಗಳೂರಿನಲ್ಲಿ ಮಾತನಾಡಿರುವ ಸುಮಲತಾ ಅವರು, ನನ್ನ ಮುಂದಿನ ರಾಜಕೀಯ ನಡೆ ಬಗ್ಗೆ ಮಂಢ್ಯದಲ್ಲೇ ಘೋಷಣೆ ಮಾಡುತ್ತೇನೆ. ಎಲ್ಲಾ ವಿಚಾರಗಳ ಬಗ್ಗೆ ಮಂಡ್ಯದಲ್ಲೇ ತಿಳಿಸುತ್ತೇನೆ ಎಂದಿದ್ದಾರೆ. ಈಗಾಗಲೇ ಮಂಡ್ಯದತ್ತ ತೆರಳಿದ್ದಾರೆ.
Key words: announcement- about –next- political move – MP -Sumalatha Ambarish.







