ಧಮ್  ಇದ್ರೆ ನಿಮ್ಮ ಸಿಎಂ ಯಾರು ಎಂದು ಘೋಷಿಸಿ- ಕಾಂಗ್ರೆಸ್ ಗೆ ಸಚಿವ ಆರ್.ಅಶೋಕ್ ಸವಾಲು.

Promotion

ಬೆಂಗಳೂರು,ಆಗಸ್ಟ್,10,2022(www.justkannada.in):  3ನೇ ಸಿಎಂ ಸೀಟು ಹತ್ತೋದು ಸನ್ನಿಹಿತ ಎಂದು ಟ್ವೀಟ್ ಮಾಡಿ ವ್ಯಂಗ್ಯವಾಡಿದ್ದ ಕಾಂಗ್ರೆಸ್ ಗೆ ತಿರುಗೇಟು ನೀಡಿರುವ ಕಂದಾಯ ಸಚಿವ ಆರ್. ಅಶೋಕ್, ಧಮ್  ಇದ್ರೆ ನಿಮ್ಮ ಸಿಎಂ ಯಾರು ಎಂದು ಘೋಷಿಸಿ ಎಂದು ಸವಾಲು ಹಾಕಿದ್ದಾರೆ.

ಈ ಕುರಿತು ಮಾಧ್ಯಮಗಳ ಜತೆ ಮಾತನಾಡಿದ ಸಚಿವ ಆರ್.ಅಶೋಕ್, ನಮ್ಮಲ್ಲಿ ಚುನಾವಣೆವರೆಗೂ ಸಿಎಂ ಮತ್ತು ಅಧ್ಯಕ್ಷರ ಬದಲಾವಣೆ ಇಲ್ಲ. ನೀವು ಸಿಎಂ ಘೋಷಿಸಿದ್ರೆ ಕಾಂಗ್ರೆಸ್ ಇಬ್ಭಾಗವಾಗುತ್ತೆ. ಒಂದು ಸಿದ್ಧರಾಮಯ್ಯ ಕಾಂಗ್ರೆಸ್, ಇನ್ನೊಂದು ಡಿಕೆ ಶಿವಕುಮಾರ್ ಕಾಂಗ್ರೆಸ್ ಆಗುತ್ತೆ.  ಕಾಂಗ್ರೆಸ್ ರೀತಿ ಗಿಮಿಕ್ ಮಾಡಿ ವೋಟ್ ಕೇಳಲ್ಲ. ಅಭಿವೃದ್ಧಿ ಮುಂದಿಟ್ಟುಕೊಂಡು ಚುನಾವಣೆ ಎದುರಿಸುತ್ತೇವೆ ಎಂದು ಹೇಳಿದರು.

ಕಾಮಗ್ರೆಸ್ ಟ್ವಿಟ್ ಗೆ ನಯಾಪೈಸೆ ಬೆಲೆ ಇಲ್ಲ. ಕರ್ನಾಟಕ ಕಾಂಗ್ರೆಸ್ ನಾಯಕರ  ಜಗಳ ಬೀದಿಗೆ ಬಂದಿದೆ. ಅದನ್ನು ಮುಚ್ಚಿ ಹಾಕಲೆಂದು ಕಾಂಗ್ರೆಸ್​ ನಾಯಕರು ಇದೀಗ ಬಿಜೆಪಿ ಸರ್ಕಾರದ ಸಿಎಂ ಬದಲಾವಣೆ ವಿಚಾರ ಪ್ರಸ್ತಾಪಿಸಿದ್ದಾರೆ ಎಂದು ಸಚಿವ ಆರ್.ಅಶೋಕ್ ವಾಗ್ದಾಳಿ ನಡೆಸಿದರು.

Key words: announce – your CM-Minister -R. Ashok- challenge – Congress