ಅನ್ನಭಾಗ್ಯ ಅಕ್ಕಿಗೆ ಹಣ ಇಟ್ಟಿರಲಿಲ್ಲ ಎಂಬ ಹೆಚ್ ಡಿಕೆ ಆರೋಪಕ್ಕೆ ಸಿದ್ಧರಾಮಯ್ಯ ತಿರುಗೇಟು.

Promotion

ಬೆಂಗಳೂರು,ಸೆಪ್ಟಂಬರ್,20,2021(www.justkannada.in): ಅನ್ನಭಾಗ್ಯ ಅಕ್ಕಿಗೆ ಈ ಹಿಂದಿನ ಕಾಂಗ್ರೆಸ್ ಸರ್ಕಾರ ಹಣ ಇಟ್ಟಿರಲಿಲ್ಲ ಎಂದು ಮಾಜಿ ಸಿಎಂ  ಹೆಚ್ ಡಿ ಕುಮಾರಸ್ವಾಮಿ ಮಾಡಿದ ಆರೋಪಕ್ಕೆ ವಿಪಕ್ಷ ನಾಯಕ ಸಿದ್ಧರಾಮಯ್ಯ ಸದನದಲ್ಲೆ ತಿರುಗೇಟು ನೀಡಿದ್ದಾರೆ.

ಈ ಕುರಿತು ಸದನದಲ್ಲಿ ಮಾತನಾಡಿದ ಸಿದ್ದರಾಮಯ್ಯ, ಆಗ ಸರ್ಕಾರ ನಿಮ್ಮದಿರಲಿಲ್ಲ. ಆಗ ಇದ್ದಿದ್ದು ಸಮ್ಮಿಶ್ರ ಸರ್ಕಾರ. ಸಮ್ಮಿಶ ಸರ್ಕಾರದಲ್ಲಿ ನೀವು ಸಿಎಂ ಆಗಿದ್ರಿ ಅಷ್ಟೆ. ಸಪ್ಲಿಮೆಂಟರಿ  ಎಸ್ಟಿಮೆಂಟ್ ಅಂತಾ ಇರೋದು ಯಾಕೆ.   ಸಪ್ಲಿಮೆಂಟರಿ ಎಸ್ಟಿಮೇಟ್ ನಲ್ಲಿ ಹಣ ಕೊಡಬಹುದಿತ್ತಲ್ಲ ಎಂದು ಟಾಂಗ್ ನೀಡಿದರು.

ನಾನು ಹಣ ಕೊಟ್ಟಿಲ್ಲ ಅಂದಿದ್ದಿರಿ ಆದರೆ ಪೂರಕ ಅಂದಾಜಿನಲ್ಲಿ ಹಣ ನೀಡಲು ಅವಕಾಶವಿದೆ. ಆಗ ನೀವೆ ಹಣ ನೀಡಬಹುದಿತ್ತಲ್ಲಾ ಎಂದು ಸಿದ್ಧರಾಮಯ್ಯ ಪ್ರಶ್ನಿಸಿದರು.  ಸಿದ್ಧರಾಮಯ್ಯ 7 ಕೆಜಿ ಅಕ್ಕಿ ನೀಡುವುದಾಗಿ ಘೋಷಿಸಿ ನಂತರ  5 ಕೆಜಿಗೆ ಮಾತ್ರ ಹಣ ಇಟ್ಟಿದ್ರು ಎಂದು ಹೆಚ್.ಡಿಕೆ ಆರೋಪಿಸಿದ್ದರು.

key words: annabagaya-rice- money-HD Kumaraswamy- former cm- siddaramaiah