ಮತ್ತೆ ಕ್ಯಾಮೆರಾ ಹಿಡಿದು ಫೋಟೋಗ್ರಫಿ ಮರಳಿದ ಅನಿಲ್ ಕುಂಬ್ಳೆ

Promotion

ಬೆಂಗಳೂರು, 17 ನವೆಂಬರ್ 2020: ಜಂಬೋ’ ಅನಿಲ್ ಕುಂಬ್ಳೆ ಮತ್ತೆ ತಮ್ಮ ಮೆಚ್ಚಿನ ಫೋಟೋಗ್ರಫಿಯಲ್ಲಿ ತೊಡಗಿಸಿಕೊಂಡಿದ್ದಾರೆ.

ಕುಂಬ್ಳೆ ಕೇವಲ ಕ್ರಿಕೆಟಿನಾಗಿ ಮಾತ್ರವಲ್ಲ, ವೈಲ್ಡ್ ಲೈಫ್ ಫೋಟೋಗ್ರಫಿಯಲ್ಲೂ ಸಾಕಷ್ಟು ಸಮಯವನ್ನು ತೊಡಗಿಸಿಕೊಳ್ಳುತ್ತಾರೆ. ಸಮಯ ಸಿಕ್ಕಾಗಲೆಲ್ಲಾ ಕ್ಯಾಮರಾ ಎತ್ತಿಕೊಂಡು ತಮ್ಮ ಮೆಚ್ಚಿನ ಫೋಟೋಗ್ರಫಿಯಲ್ಲಿ ತೊಡಗಿಸಿಕೊಳ್ಳುತ್ತಾರೆ. ಇದೀಗ ಮತ್ತೆ ಕ್ಯಾಮೆರಾ ಹಿಡಿದಿದ್ದಾರೆ.

ಐಪಿಎಲ್ ನಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ಕೋಚ್ ಆಗಿ ಕರ್ತವ್ಯ ನಿಭಾಯಿಸಿ ತವರಿಗೆ ಮರಳಿರುವ ಅನಿಲ್ ಕುಂಬ್ಳೆ ಮತ್ತೆ ವೈಲ್ಡ್ ಲೈಫ್ ಫೋಟೋಗ್ರಫಿ ಕೆಲಸದಲ್ಲಿ ತೊಡಗಿಸಿಕೊಂಡಿರುವುದಾಗಿ ಹೇಳಿದ್ದಾರೆ.