ಫೀನಿಕ್ಸ್ ನಂತೆ ಮೇಲೆದ್ದ ಕಿಂಗ್ಸ್ ಇಲೆವೆನ್ ಪಂಜಾಬ್ ಹೋರಾಟದ ಹಿಂದೆ ‘ಕನ್ನಡಿಗನ’ ಕೈಚಳಕ

Promotion

ದುಬೈ, ಅಕ್ಟೋಬರ್ 27, 2020 (www.justkannada.in): ಐಪಿಎಲ್ 13 ರಲ್ಲಿ ಸತತ ಸೋಲನುಭವಿಸಿದ್ದ ಕಿಂಗ್ಸ್ ಇಲೆವೆನ್ ಪಂಜಾಬ್ ನಿರ್ಣಾಯಕ ಘಟ್ಟದಲ್ಲಿ ಫೀನಿಕ್ಸ್ ನಂತೆ ಮೇಲದ್ದು ಬಂದು ಸತತ ಐದು ಪಂದ್ಯಗಳನ್ನು ಗೆದ್ದಿದ್ದಲ್ಲದೆ ಅಗ್ರ ನಾಲ್ಕರೊಳಗೆ ಸ್ಥಾನ ಪಡದಿದೆ.

ಸತತ ಸೋಲಿನಿಂದ ಕಂಗೆಟ್ಟು ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನಕ್ಕೆ ಜಾರಿದ್ದ ಪಂಜಾಬ್ ಹೀಗೆ ಇದ್ದಕ್ಕಿದ್ದಂತೆ ಪುಟಿದೇಳಲು ಕಾರಣ ಕೋಚ್ ಅನಿಲ್ ಕುಂಬ್ಳೆಯ ಹೋರಾಟ ಮನೋಭಾವ ಎಂದು ಮಾಜಿ ಕ್ರಿಕೆಟಿಗ ಸುನಿಲ್ ಗವಾಸ್ಕರ್ ಹೇಳಿದ್ದಾರೆ.

ಸ್ವತಃ ಕುಂಬ್ಳೆ ಹೋರಾಟ ಮನೋಭಾವದವರು. ಅದನ್ನೇ ಅವರು ತಮ್ಮ ತಂಡದ ಸದಸ್ಯರಲ್ಲಿ ತುಂಬಿದ್ದಾರೆ. ಅವರ ಸ್ಪೂರ್ತಿಯಿಂದಲೇ ಪಂಜಾಬ್ ಈಗ ಶಕ್ತಿಯುತ ತಂಡವಾಗಿ ಹೊರಹೊಮ್ಮಿದೆ ಎಂದು ಗವಾಸ್ಕರ್ ಹೇಳಿದ್ದಾರೆ.