ಪತ್ರಿಕೋದ್ಯಮಕ್ಕೆ ಅಂದಾಜು 4,500 ರೂ. ಕೋಟಿ ನಷ್ಟ: ಪರಿಹಾರಕ್ಕೆ ಐಎಸ್‌ಎಸ್ ಆಗ್ರಹ

Promotion

ಹೊಸದಿಲ್ಲಿ, ಮೇ 01, 2020 (www.justkannada.in): ದೇಶೀಯ ಪತ್ರಿಕೋದ್ಯಮಕ್ಕೆ ಎರಡು ತಿಂಗಳಲ್ಲಿ 4,500 ಕೋ.ರೂ.ನಷ್ಟವಾಗಿದ್ದು, ತಕ್ಷಣವೇ ಪರಿಹಾರ ಪ್ಯಾಕೇಜ್‌ವೊಂದನ್ನು ಘೋಷಿಸಬೇಕೆಂದು ಭಾರತೀಯ ಸುದ್ದಿಪತ್ರಿಕೆ ಸಂಘಟನೆ(ಐಎಸ್‌ಎಸ್) ಆಗ್ರಹಿಸಿದೆ.

ದೇಶದಲ್ಲಿ ಆರ್ಥಿಕ ಚಟುವಟಿಕೆ ಕುಸಿತವಾದ ಬಳಿಕ ಜಾಹೀರಾತು ಸಿಗುತ್ತಿಲ್ಲ. ಸರಕಾರವು ಪ್ಯಾಕೇಜ್‌ನ್ನು ತುರ್ತಾಗಿ ಘೋಷಿಸದೇ ಇದ್ದರೆ ಮುಂದಿನ ಆರು-ಏಳು ತಿಂಗಳುಗಳ ಕಾಲ ಇದೇ ರೀತಿಯ ನಷ್ಟ ಮುಂದುವರಿಯುವ ನಿರೀಕ್ಷೆಯಿದ್ದು, ಹೆಚ್ಚುವರಿ 12,000ರಿಂದ 15,000 ಕೋಟಿ ರೂ.ನಷ್ಟವಾಗಬಹುದು ಎಂದು 800ಕ್ಕೂ ಅಧಿಕ ನ್ಯೂಸ್ ಪೇಪರ್‌ಗಳನ್ನು ಪ್ರತಿನಿಧಿಸುತ್ತಿರುವ ಐಎನ್‌ಎಸ್ ತಿಳಿಸಿದೆ.

ನ್ಯೂಸ್ ಪ್ರಿಂಟ್ ಮೇಲಿನ ಶೇ.5ರಷ್ಟಿರುವ ಆಮದು ಶುಲ್ಕ ಹಾಗೂ ಎರಡು ವರ್ಷ ಟ್ಯಾಕ್ಸ್ ಹಾಲಿಡೇ ತೆಗೆದುಹಾಕುವುದು ದಿನಪತ್ರಿಕೆಯನ್ನು ಉಳಿಸಲು ಹಾಗೂ ಮುಚ್ಚುವುದನ್ನು ತಪ್ಪಿಸಲು ಅತ್ಯಂತ ಅಗತ್ಯ. ನ್ಯೂಸ್‌ಪೇಪರ್‌ಗಳ ವೆಚ್ಚಗಳಿಗೆ ನ್ಯೂಸ್ ಪ್ರಿಂಟ್ ಅಕೌಂಟ್ಸ್ ಮುಖ್ಯ ಪಾತ್ರವಹಿಸುತ್ತಿದೆ. ಇದನ್ನು ಸಂಪೂರ್ಣ ಮನ್ನಾ ಮಾಡಬೇಕೆಂದು ಐಎನ್‌ಎಸ್ ಕೇಂದ್ರ ಸರಕಾರಕ್ಕೆ ಮನವಿ ಮಾಡಿದೆ.