ರಾಜ್ಯಕ್ಕೆ ಅಮಿತ್ ಶಾ ಬಂದಿರುವುದು ಸುಳ್ಳು ಹೇಳುವುದಕ್ಕೆ-ಮಾಜಿ ಸಿಎಂ ಸಿದ್ಧರಾಮಯ್ಯ ಟೀಕೆ…..

Promotion

ಬೆಂಗಳೂರು,ಜ,18,2020(www.justkannada.in):   ಸಿಎಎ ಪರ ಜಾಗೃತಿ ಸಮಾವೇಶದಲ್ಲಿ ಪಾಲ್ಗೊಳ್ಳಲು ರಾಜ್ಯಕ್ಕೆ ಆಗಮಿಸಿರುವ ಕೇಂದ್ರ ಗೃಹಸಚಿವ ಅಮಿತ್ ಶಾ ಅವರಿಗೆ ಮಾಜಿ ಸಿಎಂ ಸಿದ್ಧರಾಮಯ್ಯ ಟಾಂಗ್ ನೀಡಿದ್ದಾರೆ.

ಅಮಿತ್ ಶಾ ರಾಜ್ಯಕ್ಕೆ ಬಂದಿರುವುದು ಸುಳ್ಳು ಹೇಳುವುದಕ್ಕೆ. ಹುಬ್ಬಳ್ಳಿಗೆ ಭೇಟಿ ನೀಡುವ ಅಮಿತ್ ಶಾ ಮಹದಾಯಿ ವಿವಾದದ ಬಗ್ಗೆ ಸ್ಪಷ್ಟನೆ ನೀಡಲಿ ಎಂದು ಸಿದ್ಧರಾಮಯ್ಯ ಆಗ್ರಹಿಸಿದ್ದಾರೆ.

ಬೆಂಗಳೂರಿನಲ್ಲಿ ಈ ಬಗ್ಗೆ ಮಾತನಾಡಿದ ಮಾಜಿ ಸಿಎಂ ಸಿದ್ದರಾಮಯ್ಯ, ಹುಬ್ಬಳ್ಳಿಗೆ ಭೇಟಿ ನೀಡುವ ಅಮಿತ್ ಶಾ ಅವರು ಮಹದಾಯಿ ವಿವಾದದ ಬಗ್ಗೆ ಸ್ಪಷ್ಟನೆ ನೀಡಲಿ. ಅವರು ಕೊಟ್ಟಿರುವ ನೆರೆ ಪರಿಹಾರ ಸಾಕಾಗಲ್ಲ. ಅದರ ಬಗ್ಗೆಯೂ ಮಾತನಾಡಲಿ. ಅಮೇಲೆ ಸಿಎಎ ಬಗ್ಗೆ ಮಾತನಾಡಲಿ ಎಂದು ಕುಟುಕಿದ್ದಾರೆ.

ಹಾಗೆಯೇ ಸಂಪುಟ ವಿಸ್ತರಣೆ ಬಗ್ಗೆ ಪ್ರತಿಕ್ರಿಯಿಸಿದ ಸಿದ್ಧರಾಮಯ್ಯ, ಸಿಎಂ ಬಿಎಸ್ ಯಡಿಯೂರಪ್ಪ ಭೇಟಿಗೆ ಅಮಿತ್ ಶಾ ಅವಕಾಶ ಕೊಟ್ಟಿದ್ದಾರೋ ಇಲ್ಲವೋ ಗೊತ್ತಿಲ್ಲ. ವಿಮಾನದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷರು ಹೋಗಲ್ಲ ಅಂದ ಮೇಲೆ ಹೇಗೆ ಸಂಪುಟ ವಿಸ್ತರಣೆ ಬಗ್ಗೆ ಚರ್ಚೆಯಾಗುತ್ತದೆ. ಬಿಜೆಪಿ ರಾಜ್ಯಾಧ್ಯಕ್ಷರನ್ನ ಬಿಟ್ಟು ಹೇಗೆ ಸಂಪುಟ ವಿಸ್ತರಣೆ ಮಾಡ್ತಾರೆ. ನನ್ನ ಅವಧಿಯಲ್ಲಿ ಹೀಗೆ ಇರಲಿಲ್ಲ. ನಾವು ಎಲ್ಲರನ್ನೂ ಒಟ್ಟಾಗಿ ಕರೆದುಕೊಂಡು ಹೋಗಿದ್ದವು ಎಂದು ಬಿಜೆಪಿ ನಾಯಕರಿಗೆ ಟಾಂಗ್ ನೀಡಿದರು.

Key words: Amit Shah -come – state –lie-Former CM- Siddaramaiah -criticized.