“ಅಂಬೇಡ್ಕರ್ ತೋರಿದ ಬೌದ್ಧ ಬೆಳಕಿನಲ್ಲಿ ನಡೆದವರು ಎನ್.ರಾಚಯ್ಯ” : ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್

Promotion

ಮೈಸೂರು,ಫೆಬ್ರವರಿ,27,2021(www.justkannada.in) : ಪ್ರಬುದ್ಧ ಮನಸ್ಸಿನ ನಿರ್ಮಾಣ ಮತ್ತು ಪ್ರಬುದ್ಧ ಭಾರತದ ನಿರ್ಮಾಣಕ್ಕೆ ನೆರವಾಗುತ್ತದೆಂದು ಸಾಮೂಹಿಕ ಪರಿವರ್ತನೆಯ ದಾರಿತುಳಿದ, ಅಂಬೇಡ್ಕರ್ ಅವರು ತೋರಿದ ಬೌದ್ಧ ಬೆಳಕಿನಲ್ಲಿ ನಡೆದವರು ಎನ್.ರಾಚಯ್ಯನವರು ಎಂದು ಮೈಸೂರು ವಿವಿ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್ ಅಭಿಪ್ರಾಯವ್ಯಕ್ತಪಡಿಸಿದರು.

Ambedkar-shown-Buddhist light-N.Racharya-Chancellor-Prof.G. Hemant Kumar

ಮಾನಸಗಂಗೋತ್ರಿಯ ಬಿ.ಎಂ.ಶ್ರೀ ಸಭಾಂಗಣದಲ್ಲಿ ಮೈಸೂರು ವಿಶ್ವವಿದ್ಯಾನಿಲಯ ರಾಜ್ಯಶಾಸ್ತ್ರ ಅಧ್ಯಯನ ವಿಭಾಗದ ಎನ್.ರಾಚಯ್ಯ ಅಧ್ಯಯನ ಪೀಠದ ವತಿಯಿಂದ ಆಯೋಜಿಸಿದ್ದ “ದಲಿತ ಚಳವಳಿ ಮತ್ತು ರೈತ ಚಳವಳಿ ಒಂದು ಮುಖಾಮುಖಿ” ಕುರಿತ ಒಂದು ದಿನದ ರಾಜ್ಯಮಟ್ಟದ ವಿಚಾರ ಸಂಕಿರಣ ಕಾರ್ಯಕ್ರಮದಲ್ಲಿ  ಎನ್.ರಾಚಯ್ಯ ಶತಮಾನೋತ್ಸವ ಸ್ಮರಣ ಸಂಚಿಕೆ ಕೃತಿ ಬಿಡುಗಡೆ ಮಾಡಿ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್ ಮಾತನಾಡಿದರು.

ಎನ್.ರಾಚಯ್ಯ ಅವರದು ಮಾದರಿ ಬದುಕು 

ಬಾಬಾ ಸಾಹೇಬ್ ಅಂಬೇಡ್ಕರ್ ಪ್ರಜ್ಞೆ, ಸಮತೆ, ಕಾರುಣ್ಯ ತತ್ವಗಳನ್ನು ಪ್ರತಿಪಾದಿಸುವ ಬೌದ್ಧ ತತ್ವವನ್ನು ಅಂತರಂಗ ಮತ್ತು ಬಹಿರಂಗವಾಗಿ ಒಪ್ಪಿ ಪ್ರತಿಪಾದಿಸಿದರು ಎಂದು ಸ್ಮರಿಸಿದರು. ಎನ್.ರಾಚಯ್ಯ ಅವರು ತಮ್ಮ ಮಕ್ಕಳಿಗೆ ಸುಜಾತ, ಧರ್ಮಸೇನ,ಚಿತ್ತಬೋಧ ಎಂಬ ಹೆಸರಿಟ್ಟು ಮಾದರಿಯಾಗಿದ್ದಾರೆ. 1940ರ ದಶಕದಲ್ಲಿ ತಮ್ಮ ಸಾರ್ವಜನಿಕ ಜೀವನದ ಪ್ರವೇಶಿಕೆಯಿಂದ ಹಿಡಿದು 1989ರವರೆಗೂ ಸಾರ್ವಜನಿಕ ಮತ್ತು ರಾಜಕೀಯ ಜೀವನದಲ್ಲಿ ತತ್ವನಿಷ್ಠೆ, ಸೈದ್ಧಾಂತಿಕ ನಿಷ್ಠೆ ಮತ್ತು ಸಾಮಾಜಿಕ ಬದ್ಧತೆಗಳನ್ನು ಎಂದಿಗೂ ಬಿಟ್ಟುಕೊಡದೇ ಬದುಕಿದವರಾಗಿದ್ದಾರೆ ಎಂದು ಮೆಚ್ಚುಗೆವ್ಯಕ್ತಪಡಿಸಿದರು.

ಸಮಾಜದ ಅಂಚಿನವರ ಪರವಾಗಿ ಬದುಕು ಮುಡಿಪು

ಐದು ದಶಕಗಳ ಇಡೀ ಸಾರ್ವಜನಿಕ ಮತ್ತು ರಾಜಕೀಯ ಜೀವನವು ಸದಾ ಸಮಾಜದ ಅಂಚಿನವರ ಪರವಾಗಿ ಮುಡಿಪಾಗಿತ್ತು. ಈ ರೀತಿಯ ವಿಭಿನ್ನ ಜೀವನದ ಬದ್ಧತೆಯೇ ಎನ್.ರಾಚಯ್ಯನವರನ್ನು ಇತರೆ ರಾಜಕೀಯ ನಾಯಕರುಗಳಿಗಿಂತ ಭಿನ್ನವಾದ ನೆಲಗಟ್ಟಿನಲ್ಲಿ ನಿಲ್ಲಿಸುತ್ತದೆ ಎಂದರು.

ಎನ್.ರಾಚಯ್ಯ ವಿಚಾರಧಾರೆಗಳಿಗೆ ಪುಸ್ತಕ ರೂಪ ಮೈಸೂರು ವಿವಿಗೆ ಹ್ಮೆಮೆ

ಇಂತಹ ರಾಜಕೀಯ ಧುರೀಣನ ಸಮಾನತೆಯ ತತ್ವವನ್ನು ವಿಚಾರಧಾರೆಗಳನ್ನು ಪುಸ್ತಕ ರೂಪದಲ್ಲಿ ಹೊರತರುತ್ತಿರುವುದು ಮೈಸೂರು ವಿವಿ ಹ್ಮೆಮೆಯ ಸಂಗತಿ. ಮೈಸೂರು ವಿವಿ ಎನ್.ರಾಚಯ್ಯ ಅಧ್ಯಯನ ಪೀಠವು ತನ್ನ ಶೈಕ್ಷಣಿಕ ದಿನಗಳಲ್ಲಿ ಎನ್.ರಾಚಯ್ಯನವರ ಸಮಾನತೆಯ ತತ್ವ, ಸಾಮಾಜಿಕ ನ್ಯಾಯದ ಪರಿಕಲ್ಪನೆಯನ್ನು ಪಸರಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಿದೆ ಎಂದು ವಿವರಿಸಿದರು.

ದಲಿತೋದ್ಧಾರಕ್ಕೆ ಪ್ರಾಮಾಣಿಕವಾಗಿ ಪ್ರಯತ್ನಿಸಿದ ವ್ಯಕ್ತಿ 

ಸದರಿ ಸ್ಮರಣ ಸಂಚಿಕೆಯಲ್ಲಿ ಅಭಿಪ್ರಾಯಗಳು, ಭಾಷಾಂತರ, ಮೂಲ ಲೇಖಕರ ಲೇಖನಗಳು ಹಾಗೂ ಎರವಲು ಲೇಖನಗಳು ಎಂಬ ನಾಲ್ಕು ವಿಭಾಗಗಳಿದ್ದು, ಒಂದೊಂದು ವಿಭಾಗವು ಎನ್.ರಾಚಯ್ಯನವರ ಸಾಮಾಜಿಕ ನ್ಯಾಯದ ಪರಿಕಲ್ಪನೆಯನ್ನು ಸಾರುತ್ತವೆ. ದಲಿತೋದ್ಧಾರಕ್ಕೆ ಪ್ರಾಮಾಣಿಕವಾಗಿ ಪ್ರಯತ್ನಿಸಿದ ವ್ಯಕ್ತಿ ಎಂದು ಬಿ.ಡಿ.ಜತ್ತಿಯವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಎಂದು ನೆನೆದರು.

ಎನ್.ರಾಚಯ್ಯನವರಿಗೆ ನೂರು ವರ್ಷಗಳು ತುಂಬಿದ ಪ್ರಯುಕ್ತ ಸ್ಮರಣ ಸಂಚಿಕೆ

Ambedkar-shown-Buddhist light-N.Racharya-Chancellor-Prof.G. Hemant Kumar

ರಾಚಯ್ಯನವರ ಮಕ್ಕಳಾದ ಆರ್.ಧರ್ಮಸೇನ ಮತ್ತು ಆರ್.ಚಿತ್ತಬೋದ್ ಅವರು, ತಮ್ಮ ತಂದೆಯವರ ಕೊನೆ ಆಸೆ ಪಾನ ನಿಷೇದಕ್ಕಾಗಿ ಹೋರಾಟ ನಡೆಸುತ್ತಿದ್ದಾರೆ. ಎನ್.ರಾಚಯ್ಯನವರಿಗೆ ನೂರು ವರ್ಷಗಳು ತುಂಬಿದ ಪ್ರಯುಕ್ತ ಈ ಅತ್ಯಮೂಲ್ಯ ಸ್ಮರಣ ಸಂಚಿಕೆಯನ್ನು ಸಮಾಜಕ್ಕೆ ಅರ್ಪಿಸಲಾಗುತ್ತಿದೆ. ಸ್ಮರಣ ಸಂಚಿಕೆಗೆ ರಾಜಕೀಯ ನಾಯಕರುಗಳಾದ ಮಾಜಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಗೋವಿಂದ ಎಂ.ಕಾರಜೋಳ, ಸಂಸದ ವಿ.ಶ್ರೀನಿವಾಸ್ ಪ್ರಸಾದ್, ಮಾಜಿ ಸಚಿವ ಡಾ.ಎಚ್.ಸಿ.ಮಹದೇವಪ್ಪ, ಎಚ್.ಆಂಜನೇಯ ಅನೇಖರು ಶುಭಹಾರೈಸಿದ್ದಾರೆ ಎಂದು ತಿಳಿಸಿದರು.

ಕಾರ್ಯಕ್ರಮವನ್ನು ಮಾಜಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಉದ್ಘಾಟಿಸಿದರು. ರಾಜ್ಯ ಮಾಹಿತಿ ನಿವೃತ್ತ ಆಯುಕ್ತ ಎಲ್.ಕೃಷ್ಣಮೂರ್ತಿ, ವಿಧಾನ ಪರಿಷತ್ ಸದಸ್ಯ ಆರ್‌.ಧರ್ಮಸೇನ, ರಾಜ್ಯಶಾಸ್ತ್ರ ಅಧ್ಯಯನ ವಿಭಾಗದ ಅಧ್ಯಕ್ಷ ಮುಜಾಫರ್ ಅಸ್ಸಾದಿ ಇತರರು ಉಪಸ್ಥಿತರಿದ್ದರು.

ENGLISH SUMMARY….

N. Rachaiah was a person who walked in Ambedkar’s path: UoM VC
Mysuru, Feb. 27, 2021 (www.justkannada.in): “N. Rachaiah was the person who walked in the path of Buddhism that was shown by the architect of our constitution Dr. B.R. Ambedkar who followed the path of mass transformation to build matured minds and matured country,” opined Prof. G. Hemanth Kumar, Vice-Chancellor, University of Mysore.
He released the N. Rachaiah Centenary Memory issue, at the one-day seminar on the topic, “Face-to-face of Dalit Movement and Farmers Movement,’ organized by the N. Rachaiah Study Centre of the Political Science Research Department, University of Mysore, held at the B.M. Sri Auditorium in Manasagangotri.Ambedkar-shown-Buddhist light-N.Racharya-Chancellor-Prof.G. Hemant Kumar
“Ambedkar embraced Buddhism which is based on the principles of consciousness, equality, piousness. N. Rachaiah set an example by naming his children Sujatha, Dharmasena, and Chittaboda. Since he entered public life in the year 1940, till 1989 he was loyal to his principles, promptly followed them, and was committed to social principles,” he said.
Dr. H.C. Mahadevappa, the former minister inaugurated the program. L. Krishnamurthy, Commissioner (Retd.), State Information, R. Dharmasena, MLC, Muzafar Assadi, Chairman, Political Science Study Division were present.
Keywords: University of Mysore/ N. Rachaiah/ Prof. G. Hemanth Kumar/ Buddhism/ Ambedkar

key words : Ambedkar-shown-Buddhist light-N.Racharya-Chancellor-Prof.G. Hemant Kumar