ಮಹೇಶ್ ಭಟ್ ವೆಬ್ ಸೀರಿಸ್’ನಲ್ಲಿ ಅಮಲಾ ಪಾಲ್‌

Promotion

ಬೆಂಗಳೂರು, ಜನವರಿ 29, 2019 (www.justkannada.in): ತೆಲುಗಿನ ‘ಲಸ್ಟ್‌ ಸ್ಟೋರಿಸ್‌’ ಮೂಲಕ ವೆಬ್‌ಲೋಕ ಪ್ರವೇಶಿಸಿದ್ದ ನಟಿ ಅಮಲಾ ಪಾಲ್‌ ಈಗ ಇನ್ನೊಂದು ವೆಬ್‌ ಸಿರೀಸ್‌ಗೆ ಸಹಿ ಹಾಕಿದ್ದಾರೆ.

ಹಿರಿಯ ಬಾಲಿವುಡ್‌ ನಿರ್ದೇಶಕ ಮಹೇಶ್‌ ಭಟ್‌ ಅವರ ವೆಬ್‌ ಸಿರೀಸ್‌ನಲ್ಲಿ ಅಮಲಾ ನಟಿಸಲಿದ್ದಾರೆ. ಮಹೇಶ್‌ ಭಟ್‌ ಅವರ ಒಂದು ಕಾಲದ ಗೆಳತಿ ಪರ್ವೀನ್‌ ಬಾಬಿ ಜೀವನ ಕತೆ ಆಧರಿತ ವೆಬ್ ಸಿರೀಸ್‌ನಲ್ಲಿ ಅಮಲಾ, ಪರ್ವೀನ್‌ ಬಾಬಿ ಪಾತ್ರ ನಿರ್ವಹಿಸಲಿದ್ದಾರೆ.

ಈ ವಿಚಾರವನ್ನು ಮಹೇಶ್‌ ಭಟ್‌ ಟ್ವಿಟರ್‌ನಲ್ಲಿ ಪ್ರಕಟಿಸಿದ್ದರು. ‘ಇದು ಸರಿಯಾದ ಸಮಯ. ಜಿಯೊ ಸ್ಟುಡಿಯೊ ಜೊತೆ ಡಿಜಿಟಲ್‌ ಲೋಕಕ್ಕೆ ಕಾಲಿಡುತ್ತಿರುವುದಕ್ಕೆ ಖುಷಿಯಾಗುತ್ತಿದೆ ಎಂದು ಬರೆದುಕೊಂಡಿದ್ದರು.