ಅಲ್ಲು ಅರ್ಜುನ್ ಪುತ್ರಿ ಅತಿ ಚಿಕ್ಕ ವಯಸ್ಸಿಗೆ ಚೆಸ್ ಟ್ರೇನರ್ !

Promotion

ಬೆಂಗಳೂರು, ನವೆಂಬರ್ 24, 2021 (www.justkannada.in): ನಟ ಅಲ್ಲು ಅರ್ಜುನ್ ಪುತ್ರ ದಾಖಲೆಯೊಂದನ್ನು ಬರೆದಿದ್ದಾರೆ.
ಹೌದು. ಐದು ವರ್ಷದ ಪುಟಾಣಿ ಅರ್ಹಾ ಅರ್ಜುನ್‌ ಇದೀಗ ವಿಶ್ವದಾಖಲೆಯೊಂದನ್ನು ಮಾಡಿ ಗಮನ ಸೆಳೆದಿದ್ದಾಳೆ.

ನಟನೆಯಲ್ಲಿಯೂ ಸೈ ಎನಿಸಿಕೊಂಡಿರುವ ಈಕೆ ಇದೀಗ ಚೆಸ್‌ ಆಡುವ ಮೂಲಕ ನೊಬೆಲ್‌ ವಿಶ್ವ ದಾಖಲೆ ಮಾಡಿದ್ದಾಳೆ. ಈಕೆ ಅತಿ ಚಿಕ್ಕ ವಯಸ್ಸಿಗೆ ಚೆಸ್ ಟ್ರೇನರ್ ಆಗಿದ್ದಾಳೆ.

ಅರ್ಜುನ್‌ ಪತ್ನಿ ಅಲ್ಲು ಸ್ನೇಹಾ ರೆಡ್ಡಿ ಇನ್‌ಸ್ಟಾಗ್ರಾಂನಲ್ಲಿ ಈ ವಿಷಯವನ್ನು ಶೇರ್‌ ಮಾಡಿದ್ದಾರೆ. ಮಗಳ ಹುಟ್ಟುಹಬ್ಬಕ್ಕೆ ಶುಭ ಕೋರಿರುವ ಅವರು, ತಮ್ಮ ಪುತ್ರಿಯ ಸಾಧನೆಯ ಕುರಿತು ಬರೆದುಕೊಂಡಿದ್ದಾರೆ.