ಪುಷ್ಪ ಗೆದ್ದ ಖುಷಿಯಲ್ಲಿ ಬಾಲಿವುಡ್’ನತ್ತ ಅಲ್ಲು ಅರ್ಜುನ್ ಚಿತ್ತ!

Promotion

ಬೆಂಗಳೂರು, ಜನವರಿ 03, 2022 (www.justkannada.in): ತೆಲುಗು ಚಿತ್ರರಂಗದಲ್ಲಿ ಎರಡು ದಶಕಗಳ ಕಾಲ ಮಿಂಚಿರುವ ಅಲ್ಲು ಅರ್ಜುನ್, ಇದೀಗ ಬಾಲಿವುಡ್ ನಲ್ಲೂ ಕಾಣಿಸಿಕೊಳ್ಳಲು ಆಸಕ್ತಿ ವ್ಯಕ್ತಪಡಿಸಿದ್ದಾರೆ.

ಪುಷ್ಪ ಚಿತ್ರದ ಹಿಂದಿ ಆವೃತ್ತಿಯಿಂದ 56.69 ಕೋಟಿ ಕಲೆಕ್ಷನ್ ಆಗಿದ್ದು, ಅಲ್ಲು ಅರ್ಜುನ್ ಸಂತೋಷ ವ್ಯಕ್ತಪಡಿಸಿದ್ದು, ಮುಂದೆ ಹಿಂದಿ ಚಿತ್ರಗಳಲ್ಲೂ ನಟಿಸುವ ಇರಾದೆ ವ್ಯಕ್ತಪಡಿಸಿದ್ದಾರೆ.

ಬಾಲಿವುಡ್ ನಲ್ಲಿನ ತಮ್ಮ ಚೊಚ್ಚಲ ಚಿತ್ರದ ಕುರಿತಂತೆ ಮಾತನಾಡಿರುವ ಅಲ್ಲು ಅರ್ಜುನ್, ನನಗೆ ಆಫರ್ ಒಂದು ಬಂದಿದೆ. ಶೀಘ್ರದಲ್ಲಿಯೇ ಅದು ನಡೆಯುವ ವಿಶ್ವಾಸವಿದೆ ಎಂದಿದ್ದಾರೆ.

ಇನ್ನು ಇತ್ತೀಚಿಗೆ ಬಿಡುಗಡೆಯಾದ ಅಲ್ಲು ಅರ್ಜುನ್ ಅವರ ‘ಪುಷ್ಪ’ ಚಿತ್ರ ವಿಶ್ವದಾದ್ಯಂತ ಈವರೆಗೂ 300 ಕೋಟಿ ಕಲೆಕ್ಷನ್ ಮಾಡಿ ಗಮನ ಸೆಳೆದಿದೆ.