ವರ್ಗಾವಣೆಯಲ್ಲಿ ಭ್ರಷ್ಟಾಚಾರ ಆರೋಪ ಹಾಸ್ಯಸ್ಪದ- ಸಿಎಂ ಸಿದ್ಧರಾಮಯ್ಯ.

Promotion

ಬೆಂಗಳೂರು,ಜುಲೈ,13,2023(www.justkannada.in): ವರ್ಗಾವಣೆಯಲ್ಲಿ ಭ್ರಷ್ಟಾಚಾರ ನಡೆದಿದೆ ಎಂಬ ಆರೋಪ ಹಾಸ್ಯಾಸ್ಪದ. ವರ್ಗಾವಣೆಯಲ್ಲಿ ಭ್ರಷ್ಟಾಚಾರ ನಡೆಯೋದಕ್ಕೆ ಸಾಧ್ಯವೇ ಇಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದರು.

ವಿಧಾನಸಭೆಯಲ್ಲಿ ರಾಜ್ಯಪಾಲರ ಭಾಷಣದ ವಂದನಾ ನಿರ್ಣಯ ಮೇಲೆ ಮಾತನಾಡಿದ ಸಿಎಂ ಸಿದ‍್ಧರಾಮಯ್ಯ, ಅವರ ಕಾಲದಲ್ಲೂ ವರ್ಗಾವಣೆ ಆಗಿದೆ, ಆಗಲೂ ದಂಧೆ ನಡೆದಿತ್ತಾ ಎಂದು  ಪರೋಕ್ಷವಾಗಿ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿಗೆ ಟಾಂಗ್ ನೀಡಿದರು.

ಮೊದಲ ದಿನವೇ ಕ್ಯಾಬಿನೆಟ್​ ನಲ್ಲಿ ಮಂತ್ರಿಗಳಿಗೆ ಮನವಿ ಮಾಡಿದ್ದೇನೆ. ಯಾವುದೇ ಕಾರಣಕ್ಕೂ ಭ್ರಷ್ಟಾಚಾರ ನಡೆಯಬಾರದೆಂದು ತಿಳಿಸಿದ್ದೇನೆ. ವರ್ಗಾವಣೆಯಲ್ಲಿ ಭ್ರಷ್ಟಾಚಾರ ಆಗಬಾರದೆಂದು ಸಚಿವರಿಗೆ ಹೇಳಿದ್ದೇನೆ. ಎಲ್ಲ ಇಲಾಖೆಗಳ ಸಚಿವ ಸ್ಥಾನಗಳನ್ನು ಭರ್ತಿ ಮಾಡಿಕೊಂಡಿದ್ದೇನೆ. ಯಾವ ಖಾತೆಗಳೂ ಬಾಕಿ ಉಳಿಸಿಕೊಂಡಿಲ್ಲ, ಎಲ್ಲ ಖಾತೆ ಹಂಚಿದ್ದೇನೆ. ನನ್ನ ರಾಜಕೀಯ ಜೀವನದಲ್ಲಿ ಈವರೆಗೆ ಅಂತಹ ಆರೋಪಗಳು ಇಲ್ಲ. ಯಾರಾದರೂ ಆರೋಪ ಸಾಬೀತುಪಡಿಸಿದರೆ ರಾಜಕೀಯದಿಂದ ನಿವೃತ್ತಿ ಪಡೆಯುತ್ತೇನೆ ಎಂದು ಸಿದ‍್ಧರಾಮಯ್ಯ ನುಡಿದರು.

Key words: Allegations – corruption – transfers – ridiculous-CM -Siddaramaiah