ವಿದ್ಯುತ್ ಖರೀದಿಯಲ್ಲಿ ಭ್ರಷ್ಟಾಚಾರ ಆರೋಪ: ಸಿಎಂ ಬಿಎಸ್ ವೈಗೆ ಆಮ್ ಆದ್ಮಿ ಪಕ್ಷ ರಾಜ್ಯ ಸಂಚಾಲಕರಿಂದ ಬಹಿರಂಗ ಸವಾಲು…

ಬೆಂಗಳೂರು,ನವೆಂಬರ್,24,2020(www.justkannada.in): ವಿದ್ಯುತ್ ಖರೀದಿಯಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಆಮ್ ಆದ್ಮಿ ಪಕ್ಷ  ಮಾಡಿದ್ದ ಆರೋಪವನ್ನು ತಳ್ಳಿ ಹಾಕಿದ ಹಿನ್ನೆಲೆ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಆಮ್ ಆದ್ಮಿ ಪಕ್ಷ ರಾಜ್ಯ ಸಂಚಾಲಕ ಪೃಥ್ವಿ ರೆಡ್ಡಿ ಬಹಿರಂಗ ಸವಾಲು ಹಾಕಿದ್ದಾರೆ.I didn't knew CM BSY will think so cheaply - KPCC President D.K. Shivakumar

ಇಂದು ನಡೆದ ಪತ್ರಿಕಾ ಗೋಷ್ಠಿಯಲ್ಲಿ ಆಮ್ ಆದ್ಮಿ ಪಕ್ಷದ ರಾಜ್ಯ ಸಂಚಾಲಕ ಪೃಥ್ವಿ ರೆಡ್ಡಿ ಅವರು, ವಿದ್ಯುತ್ ಖರೀದಿಯಲ್ಲಿ ಕರ್ನಾಟಕ ರಾಜ್ಯ ಸರ್ಕಾರ ನಡೆಸಿರುವ ಭಾರಿ ಹಗರಣವನ್ನು ಬಹಿರಂಗಪಡಿಸಿದ್ದರು.

ವಿದ್ಯುತ್ ಖರೀದಿಯಲ್ಲಿನ ಭ್ರಷ್ಟಾಚಾರ, ಅಧಿಕಾರದ ದುರ್ಬಳಕೆಯಿಂದ ಆಗಿರುವ ಈ ನಷ್ಟವನ್ನು ಕರ್ನಾಟಕದ ಜನರ ಮೂಲಕ ಹೇಗೆ ವಸೂಲಿ ಮಾಡಲಾಗುತ್ತಿದೆ ಎಂಬುದಕ್ಕೆ ಸೂಕ್ತ ದಾಖಲೆಗಳನ್ನೂ ಸಹ ಒದಗಿಸಲಾಗಿತ್ತು.

ಕರ್ನಾಟಕದ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪ ಅವರ ಕಚೇರಿ ಈ ಆರೋಪಗಳಿಗೆ ಪ್ರತಿಕ್ರಿಯಿಸಿದ್ದು “ಆಮ್ ಆದ್ಮಿ ಪಕ್ಷ ನೀಡಿರುವ ಹೇಳಿಕೆಗಳು ಸುಳ್ಳು ದಾಖಲೆಗಳನ್ನು ಆಧರಿಸಿವೆ ಮತ್ತು ದಾರಿತಪ್ಪಿಸುವ ಉದ್ದೇಶವನ್ನು ಹೊಂದಿವೆ” ಎಂದು ಹೇಳಿದೆ.

ಮೇಲಿನ ಹೇಳಿಕೆಗೆ ಪ್ರತಿಕ್ರಿಯಿಸಿರುವ ಪೃಥ್ವಿ ರೆಡ್ಡಿ ಅವರು ಮುಖ್ಯಮಂತ್ರಿಗಳು ಹಾಗೂ ಇಂಧನ ಖಾತೆಯನ್ನು ಹೊಂದಿರುವ ಬಿ.ಎಸ್ ಯಡಿಯೂರಪ್ಪ ಅವರಿಗೆ 3 ಪ್ರಶ್ನೆಗಳನ್ನು ಕೇಳಿದ್ದಾರೆ.

  1. ಅದಾನಿಯ ಉಡುಪಿ ಪವರ್‌ನಿಂದ 2018 ರಿಂದ 2020 ರವರೆಗೆ ಪ್ರತಿ ಕಿಲೋವ್ಯಾಟ್‌ಗೆ 4.78 ರೂ.ನಿಂದ 6.80 ರೂ.ಗೆ ಖರೀದಿ ಬೆಲೆಯನ್ನು ಹೆಚ್ಚಿಸಲು ಕರ್ನಾಟಕ ಸರ್ಕಾರ ಅನುಮೋದನೆ ನೀಡಿರುವುದು ನಿಜವಲ್ಲವೇ?
  2. ಮಾನ್ಯ ಮುಖ್ಯಮಂತ್ರಿಗಳೇ ವಿದ್ಯುತ್ ಸುಂಕವನ್ನು ಶೇ 6ರಷ್ಟು ಹೆಚ್ಚಿಸಿ ಅದನ್ನು ಅದಾನಿಯ ಉಡುಪಿ ಪವರ್‌ಗೆ ವಿದ್ಯುತ್ ಪಾವತಿಸುವುದು ನಿಜವಲ್ಲವೇ? ಒಬ್ಬ ವ್ಯಕ್ತಿಯ ಲಾಭಕ್ಕೆ 6 ಕೋಟಿ ಜನರ ಮೇಲೆ ಹೊರೆ ಏಕೆ?
  3. ಮುಖ್ಯಮಂತ್ರಿಗಳೇ, ಈ ವರ್ಷ ಏಪ್ರಿಲ್ ನಿಂದ ಸೆಪ್ಟೆಂಬರ್ ವರೆಗೆ ಕರ್ನಾಟಕದ ನಾಗರಿಕರು ಉದ್ಯೋಗ ಮತ್ತು ಆದಾಯ ನಷ್ಟವನ್ನು ಅನುಭವಿಸುತ್ತಿರುವಾಗ, ಅದಾನಿ ಪವರ್ ಬೆಂಸ್ಕಾಂಗೆ ಸರಬರಾಜು ಮಾಡಿರುವ ವಿದ್ಯುತ್‌ನಿಂದ ಸುಮಾರು 2,260 ಕೋಟಿಯಷ್ಟು ಭಾರಿ ಲಾಭ ಗಳಿಸುವ ನಿರೀಕ್ಷೆಯಿದೆ ???

ನೀವು 2 ವರ್ಷಗಳಲ್ಲಿ 42 +% ಹೆಚ್ಚು ಹಣ ನೀಡಿದ್ದೀರಿ !!! ಇದು ನಿಜವಲ್ಲವೇAllegations - corruption – power- purchase-Aam Aadmi Party- challenge - CM BS Yeddyurappa

ಕರ್ನಾಟಕದಲ್ಲಿ ನಿಮ್ಮ ನೇತೃತ್ವದ ಬಿಜೆಪಿ ಸರ್ಕಾರ ಮಾಡಿದ ತಪ್ಪು ಮತ್ತು ಅನ್ಯಾಯದಿಂದ ಬಳಲುತ್ತಿರುವವರು ನಾವು ಅಂದರೆ ಕರ್ನಾಟಕದ 6 ಕೋಟಿ ಜನರು. ಈ ಜನರೆಲ್ಲರ  ಪರವಾಗಿ ಈ ಪ್ರಶ್ನೆಗಳಿಗೆ ಉತ್ತರ ಕೇಳುತ್ತಿದ್ದೇವೆ.

Key words: Allegations – corruption – power- purchase-Aam Aadmi Party- challenge – CM BS Yeddyurappa