ರಾಜ್ಯಸಭೆ ಚುನಾವಣೆಯಲ್ಲಿ ನಮ್ಮ ಮೂವರು ಅಭ್ಯರ್ಥಿಗಳ ಗೆಲುವು ಖಚಿತ- ಮಾಜಿ ಸಿಎಂ ಬಿಎಸ್ ವೈ ವಿಶ್ವಾಸ.

Promotion

ಬೆಂಗಳೂರು,ಜೂನ್,10,2022(www.justkannada.in): ರಾಜ್ಯಸಭೆ ಚುನಾವಣೆಯಲ್ಲಿ ನಮ್ಮ ಮೂವರು ಅಭ್ಯರ್ಥಿಗಳ ಗೆಲುವು ಖಚಿತ ಎಂದು ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಇಂದು ಮಾಧ್ಯಮಗಳ ಜತೆ ಮಾತನಾಡಿದ ಬಿಎಸ್ ಯಡಿಯೂರಪ್ಪ, ನಮ್ಮ ಅಭ್ಯರ್ಥಿಗಳಾದ ನಿರ್ಮಲಾಸೀತಾರಾಮನ್, ಜಗ್ಗೇಶ್ ಹಾಗೂ ಲೆಹರ್ ಸಿಂಗ್ ಗೆಲ್ಲುವುದು ಸ್ಪಷ್ಟ. ಆತ್ಮಸಾಕ್ಷಿ ಮತಗಳ ಬಗ್ಗೆ ಗೊತ್ತಿಲ್ಲ ಸಿದ್ಧರಾಮಯ್ಯ ಏನೇ ಮಾಡಿದರೂ ಪ್ರಯೋಜನವಿಲ್ಲ.  ಲೆಹರ್ ಸಿಂಗ್ ಗೆದ್ದೇ ಗೆಲ್ಲುತ್ತಾರೆ.  ಕಾಂಗ್ರೆಸ್ ಜೆಡಿಎಸ್ ನಿಂದ ಬಿಜೆಪಿಗೆ ತೊಂದರೆಯಾಗಲ್ಲ.  ಬಿಜೆಪಿಯಿಂದ ಯಾವುದೇ ಅಡ್ಡಮತದಾನ ಆಗುವುದಿಲ್ಲ. ಸಿದ್ದರಾಮಯ್ಯನವರ ಹೇಳಿಕೆಗೆ ಯಾವುದೇ ಮಹತ್ವ ಬೇಡ ಎಂದರು.

ಬೇರೆ ಪಕ್ಷದಲ್ಲಿ ಏನು ನಡೆಯುತ್ತದೆಯೋ ನಮಗೆ ಅದು ಅನಗತ್ಯವಾದ ವಿಷಯ. ನಮ್ಮ ಮೂರು ಅಭ್ಯರ್ಥಿಗಳನ್ನು ಗೆಲ್ಲಿಸಬೇಕೆಂಬುದು ನಮ್ಮ ಗುರಿಯಾಗಿದೆ. ಈ ಮೂಲಕ ರಾಜ್ಯಸಭೆಯಲ್ಲಿ ನಮ್ಮ ಸ್ಥಾನಗಳನ್ನು ಹೆಚ್ಚಿಸುವುದು ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವವನ್ನು ಬಲಪಡಿಸುವುದು ನಮ್ಮ ಗುರಿಯಾಗಿದೆ ಎಂದು ಬಿಎಸ್ ಯಡಿಯೂರಪ್ಪ ತಿಳಿಸಿದರು.

Key words: All three- our -candidates – win – Rajya Sabha –elections-Former CM -BSY