ಸಮಾಜದ ಎಲ್ಲಾ‌ ಸಮಸ್ಯೆಗಳನ್ನ ಶಿಕ್ಷಣದ ಮೂಲಕ ಮಾತ್ರ ಬಗೆಹರಿಸಲು ಸಾಧ್ಯ- ಸಚಿವ ಅಶ್ವಥ್ ನಾರಾಯಣ್.

ಮೈಸೂರು,ಸೆಪ್ಟಂಬರ್,7,2021(www.justkannada.in): ಸಮಾಜದ ಎಲ್ಲಾ‌ ಸಮಸ್ಯೆಗಳನ್ನ ಶಿಕ್ಷಣದ ಮೂಲಕ ಬಗೆಹರಿಸಲು ಮಾತ್ರ ಸಾಧ್ಯ ಎಂದು ಉನ್ನತ ಶಿಕ್ಷಣ ಸಚಿವ ಸಿ.ಎನ್ ಅಶ್ವಥ್ ನಾರಾಯಣ್ ನುಡಿದರು.

ರಾಷ್ಟ್ರೀಯ ಶಿಕ್ಷಣ ನೀತಿ ಅನುಷ್ಠಾನ ಕಾರ್ಯಾಗಾರದಲ್ಲಿ ಪಾಲ್ಗೊಂಡು ಮಾತನಾಡಿದ  ಉನ್ನತ ಶಿಕ್ಷಣ ಸಚಿವ ಅಶ್ವಥ್ ನಾರಾಯಣ್, ರಾಷ್ಟ್ರೀಯ ಶಿಕ್ಷಣ ನೀತಿ ಅನುಷ್ಠಾನ ಕಾರ್ಯಾಗಾರವನ್ನು ಸರ್ಕಾರಿ ಕಾಲೇಜುಗಳಲ್ಲಿ ಮಾಡಲಾಗುತ್ತಿದೆ. ಮಹಾರಾಣಿ ಕಾಲೇಜಿನಲ್ಲಿ 10 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿನಿಯರು ವಿದ್ಯಾಭ್ಯಾಸ ಮಾಡುತ್ತಿರುವುದು ಸಂತೋಷದ ವಿಚಾರ ಎಂದರು.

ಶಿಕ್ಷಣ ನಮ್ಮ ಬದುಕಿಗೆ ರಾಜಮಾರ್ಗ. ಸಮಾಜದ ಎಲ್ಲಾ‌ ಸಮಸ್ಯೆಗಳನ್ನ ಶಿಕ್ಷಣದ ಮೂಲಕ ಬಗೆಹರಿಸಲು ಮಾತ್ರ ಸಾಧ್ಯ. ಶಿಕ್ಷಣದ ಮೂಲಕವಾಗಿ ಎಲ್ಲಾ ಅರ್ಥಿಕ ವ್ಯವಸ್ಥೆ ಬೆಳವಣಿಗೆ ಆಗುತ್ತಿದೆ.ಶಿಕ್ಷಣ ಈ ಮನುಷ್ಯ ಹುಟ್ಟುದಾಗಿನಿಂದಲೂ ಇದೆ. ಆದರೆ ಶಿಕ್ಷಣ ನೀಡುವ ನೀತಿಗಳು ಬದಲಾವಣೆ ಮಾಡಿ ಗುಣಮಟ್ಟ ಹೆಚ್ಚಿಸಿಕೊಳ್ಳಬೇಕು ಎಂದು ಸಚಿವ ಅಶ್ವಥ್ ನಾರಾಯಣ್ ತಿಳಿಸಿದರು.

ಮುಂದುವರೆದ ರಾಷ್ಟ್ರಗಳ ಜೊತೆ ನಮಗೆ ಸ್ಪರ್ಧೆ ಇದೆ. ಸಂಶೋಧನಾ ಕೇಂದ್ರ ಆಗಬೇಕು ಎಂಬ ಬೇಡಿಕೆಗಳು ಕೇಳಿ ಬಂದಿವೆ.ಇಂತಹ ಕೆಲಸಗಳನ್ನು ಮಾಡದೇ ಇದ್ದರೆ  ಶೈಕ್ಷಣಿಕವಾಗಿ ಮುಂದುವರೆಯುವುದು ಹೇಗೆ…? ಒಂದಷ್ಟು ಬದಲಾವಣೆ ತಂದು ಉತ್ತಮ ಶಿಕ್ಷಣ ನೀಡಬೇಕು. ನಾವು ಅಭಿವೃದ್ಧಿ ಕಾಣಬೇಕು ಅಂದರೆ ಶಿಕ್ಷಣದಲ್ಲಿ ಸುಧಾರಣೆ ಕಾಣಬೇಕು. ಇವತ್ತು ಸ್ಪರ್ಧಾತ್ಮಕ ಯುಗದಲ್ಲಿ ಇದ್ದೇವೆ. ವಿಶ್ವಮಟ್ಟದಲ್ಲಿ ನಾವು ಓಡಬೇಕಿದೆ. ಈ ನಿಟ್ಟಿನಲ್ಲಿ ನಮ್ಮ ಸರ್ಕಾರ ಎಲ್ಲಾ ಕಾರ್ಯಕ್ರಮ ರೂಪಿಸುತ್ತಿದೆ ಎಂದು ಸಚಿವ ಅಶ್ವಥ್ ನಾರಾಯಣ್ ಹೇಳಿದರು.

Key words: All – problems -society – only – solved –education-Minister- Ashwath Narayan