ಕಥೆ ಹೇಳಲು ಡಿ.6ಕ್ಕೆ ತೆರೆಗೆ ಬರುತ್ತಿದ್ದಾರೆ ‘ಅಳಿದು ಉಳಿದವರು’

Promotion

ಬೆಂಗಳೂರು, ನವೆಂಬರ್ 2, 2019 (www.justkannada.in): ‘ಅಳಿದು ಉಳಿದವರು’ ಡಿಸೆಂಬರ್ 6ನೇ ತಾರೀಖು ರಾಜಾದಾದ್ಯಂತ ಗ್ರ್ಯಾಂಡ್ ಆಗಿ ರಿಲೀಸ್ ಆಗ್ತಿದೆ.

ಅರವಿಂದ್ ಶಾಸ್ತ್ರಿ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದು, ಬೆದ್ರ ವೆಂಚರ್ಸ್ ಮತ್ತು ಪಿವಿಆರ್ ಪಿಚ್ಚರ್ ಬ್ಯಾನರ್ ನಲ್ಲಿ ಈ ಚಿತ್ರ ನಿರ್ಮಾಣವಾಗಿದೆ. ಅಶುಬೆದ್ರ ಚೊಚ್ಚಲ ಬಾರಿಗೆ ನಿರ್ಮಾಣದೊಂದಿಗೆ ನಾಯಕ ನಟನಾಗಿ ಚಿತ್ರದಲ್ಲಿ ನಟಿಸಿದ್ದಾರೆ.

ಈ ಚಿತ್ರದಲ್ಲಿ ಇವರಿಗೆ ಸಂಗೀತಾ ಭಟ್, ಪವನ್ ಕುಮಾರ್, ಅತುಲ್ ಕುಲರ್ಕಣಿ, ಬಿ ಸುರೇಶ್, ಅರವಿಂದ್ ರಾವ್ ಪ್ರಮುಖ ಪಾತ್ರಗಳಲ್ಲಿ ಸಾಥ್ ಕೊಟ್ಟಿದ್ದಾರೆ. ಮಿಧುನ್ ಮುಕುಂದ್ ಈ ಚಿತ್ರಕ್ಕೆ ಸಂಗೀತ ಸಂಯೋಜಿಸಿದ್ದಾರೆ.