ಆಕಾರ್ ಮ್ಯಾಕ್ಸ್ ಉತ್ಪನ್ನಗಳು ಮಾರುಕಟ್ಟೆಗೆ

Promotion

ಬೆಂಗಳೂರು: ಆಕಾರ್ ಮ್ಯಾಕ್ಸ್ ಸಂಸ್ಥೆಯು ಅಭಿವೃದ್ಧಿಪಡಿಸಿರುವ ‘ಕನೆಕ್ಟ್ ಪ್ರೊ’ ಮತ್ತು ‘ದ ಇನ್ ಫ್ಲುಯೆನ್ಸ್ ಪ್ರೊ’ ಡಿಜಿಟಲ್ ಉತ್ಪನ್ನಗಳನ್ನು ಐಟಿ/ಬಿಟಿ ಸಚಿವರಾದ ಡಾ.ಸಿ.ಎನ್.ಅಶ್ವತ್ಥ ನಾರಾಯಣ ಅವರ ಉಪಸ್ಥಿತಿಯಲ್ಲಿ ಗುರುವಾರ ಬಿಡುಗಡೆಗೊಳಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಅಶ್ವತ್ಥ ನಾರಾಯಣ ಅವರು, ಭಾರತದ, ಅದರಲ್ಲೂ ಮುಖ್ಯವಾಗಿ ಕರ್ನಾಟಕದ ಉದ್ಯಮಶೀಲರು ಸ್ಥಳೀಯ ಹಾಗೂ ಜಾಗತಿಕ ಸವಾಲುಗಳಿಗೆ ಹೊಸ ಡಿಜಿಟಲ್ ಪರಿಹಾರಗಳನ್ನು ಅಭಿವೃದ್ಧಿಪಡಿಸುವುದರಲ್ಲಿ ಮುಂಚೂಣಿಗೆ ಬರಬೇಕು ಎಂದರು.

ಈ ಉತ್ಪನ್ನಗಳನ್ನು ಮುಖ್ಯವಾಗಿ ಮಧ್ಯಮ ಮತ್ತು ಸಣ್ಣ ಕೈಗಾರಿಕಾ ವಲಯಗಳನ್ನು ಗಮನದಲ್ಲಿರಿಸಿಕೊಂಡು ರೂಪಿಸಲಾಗಿದೆ. ಜೊತೆಗೆ ವಕೀಲರು, ಎಂಜಿನಿಯರುಗಳು, ವೈದ್ಯರು, ಕಲಾವಿದರಿಗೆ ಕೂಡ ಇವನ್ನು ಬಳಸಬಹುದಾಗಿದೆ. ಸಾಮಾಜಿಕ ಜಾಲ ಖಾತೆಗಳ ನಿರ್ವಹಣೆ, ಗ್ರ್ಯಾಫಿಕ್ ವಿನ್ಯಾಸ, ಗೂಗಲ್ ಮೈ ಬಿಜಿಸೆನ್, ಇ-ಬಿಜಿನೆಸ್, ಎಸ್.ಎಂ.ಎಸ್.ಮಾರ್ಕೆಟಿಂಗ್, ವರ್ಚ್ಯುಯಲ್ ಬಿಜಿನೆಸ್ ಇವೆಂಟ್ ಇತ್ಯಾದಿ ಸೇವೆಗಳನ್ನು ಈ ಉತ್ಪನ್ನಗಳ ಮೂಲಕ ಪಡೆಯಬಹುದು.

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕಂಪನಿಯ ಸಿಇಒ ಸ್ನೇಹಾ ರಾಕೇಶ್, ನಿರ್ದೇಶಕ ಎಸ್.ರಾಕೇಶ್, ಆರ್ ವಿಜಿ ಟೆಕ್ ಪ್ರೈವೇಟ್ ಲಿಮಿಟೆಡ್ ನ ಸಿಇಒ ರಜತ್ ವೆಂಕಟೇಶ್, ನಟ ರಮೇಶ್ ಅರವಿಂದ್, ನಟಿ ತಾರಾ, ಅನಿವಾಸಿ ಭಾರತೀಯರ ಕ್ಷೇಮಾಭಿವೃದ್ಧಿ ಸಂಘದ ಸಂಚಾಲಕ ದೀಪಕ್ ಸಿಂಗ್ ಉಪಸ್ಥಿತರಿದ್ದರು.