ಕ್ರಿಕೆಟ್’ಗೆ ವಿದಾಯ ಘೋಷಿಸಿದ ಅಜಂತಾ ಮೆಂಡಿಸ್

Promotion

ಕೊಲಂಬೊ, ಸೆಪ್ಟೆಂಬರ್ 29, 2019 (www.justkannada.in): ಶ್ರೀಲಂಕಾ ಕ್ರಿಕೆಟ್ ತಂಡದ ಸ್ಪಿನ್ನರ್ ಅಜಂತಾ ಮೆಂಡಿಸ್​ ಎಲ್ಲಾ ಆವೃತ್ತಿಯ ಕ್ರಿಕೆಟ್​ಗೂ ವಿದಾಯ ಘೋಷಿಸಿದ್ದಾರೆ.

34 ವರ್ಷದ ಮೆಂಡಿಸ್ ನ್ಯೂಜಿಲೆಂಡ್ ವಿರುದ್ಧ 2015 ರಲ್ಲಿ ತಮ್ಮ ಕೊನೆಯ ಏಕದಿನ ಪಂದ್ಯವನ್ನು ಆಡಿದ್ದರು. 2008ರ ಏಪ್ರಿಲ್​​​ನಲ್ಲಿ ವಿಂಡೀಸ್ ವಿರುದ್ಧ 39 ರನ್​ ನೀಡಿ 3 ವಿಕೆಟ್​ ಪಡೆದು ಇವರು ಅಂತರಾಷ್ಟ್ರೀಯ ಕ್ರಿಕೆಟ್​ಗೆ ಪದಾರ್ಪಣೆ ಮಾಡಿದ್ದರು.

ವಿಶ್ವ ಕ್ರಿಕೆಟ್‌ಗೆ ಕೇರಂ ಬಾಲ್ ಎಸೆತವನ್ನು ಪರಿಚಯಿಸಿದ್ದ ಅಜಂತ ಮೆಂಡಿಸ್ ಓರ್ವ ಅಪೂರ್ವ ಕ್ರಿಕೆಟಿಗನಾಗಿದ್ದರು. ಒಟ್ಟು 87 ಏಕದಿನ ಪಂದ್ಯಗಳನ್ನು ಆಡಿದ ಮೆಂಡಿಸ್ 152 ವಿಕೆಟ್​​, 39 ಟಿ-20ಯಲ್ಲಿ 66 ವಿಕೆಟ್​ ಹಾಗೂ 19 ಟೆಸ್ಟ್​ ಪಂದ್ಯದಲ್ಲಿ 70 ವಿಕೆಟ್​​​ ಪಡೆದ ಸಾಧನೆ ಮಾಡಿದ್ದಾರೆ.