ಐಶ್ವರ್ಯ ರೈ ವಿರುದ್ಧ ಅವಹೇಳನಕಾರಿ ಮೀಮ್ಸ್ ಶೇರ್ ಮಾಡಿ ಸಂಕಷ್ಟಕ್ಕೆ ಸಿಲುಕಿದ ನಟ ವಿವೇಕ್‌ ಓಬೆರಾಯ್‌

Promotion

ಬೆಂಗಳೂರು, ಮೇ 21, 2019 (www.justkannada.in): ಮತದಾನೋತ್ತರ ಸಮೀಕ್ಷೆಯನ್ನು ನಟಿ ಐಶ್ವರ್ಯ ರೈ ವೈಯಕ್ತಿಕ ಜೀವನಕ್ಕೆ ಹೋಲಿಕೆ ಮಾಡಿ ಮಾಡಿದ್ದ ಮೀಮ್ಸ್​ ಶೇರ್‌ ಮಾಡಿದ್ದ ನಟ ವಿವೇಕ್‌ ಓಬೆರಾಯ್‌ಗೆ ರಾಷ್ಟ್ರೀಯ ಹಾಗೂ ಮಹಾರಾಷ್ಟ್ರ ಮಹಿಳಾ ಆಯೋಗ ನೋಟಿಸ್​ ನೀಡಿದೆ.

ಹಳೆಯ ಬಾಯ್​ ಫ್ರೆಂಡ್​ ಸಲ್ಮಾನ್​ ಖಾನ್​ನೊಂದಿಗಿರುವ ಐಶ್ವರ್ಯ ರೈ ಚಿತ್ರವನ್ನು ಒಪಿನಿಯನ್​ ಪೋಲ್​ಗೆ, ವಿವೇಕ್​ ಒಬೆರಾಯ್​ನೊಂದಿಗಿನ ಐಶ್ವರ್ಯ ಚಿತ್ರವನ್ನು ಎಕ್ಸಿಟ್​ ಪೋಲ್​ಗೆ ಹಾಗೂ ಅಭಿಷೇಕ್​ ಬಚ್ಚನ್​ನೊಂದಿಗಿನ ಚಿತ್ರವನ್ನು ಫಲಿತಾಂಶ ಎಂದು ಮತದಾನೋತ್ತರ ಸಮೀಕ್ಷೆಯನ್ನು ವ್ಯಂಗ್ಯ ಮಾಡಲಾಗಿರುವ ಮೀಮ್ಸ್​ ಅನ್ನು ತಮ್ಮ ಟ್ವಿಟರ್​ನಲ್ಲಿ ವಿವೇಕ್‌ ಹಂಚಿಕೊಂಡಿದ್ದರು.

ಇನ್ನು ನಟ ವಿವೇಕ್​ ಒಬೆರಾಯ್​ ವಿರುದ್ದ ಬಾಲಿವುಡ್ ನ ಹಲವು ಮಂದಿ ಕಿಡಿಕಾರಿ, ಇದೊಂದು ಅಹಸ್ಯದ ವಿಷಯವಾಗಿದೆ ಅಂತ ಆಕ್ತೋಶ ವ್ಯಕ್ತಪಡಿಸಿದ್ದರು.