ಸೇನೆಯನ್ನ ಕೇಂದ್ರ ದುರ್ಬಲಗೊಳಿಸುತ್ತಿದೆ: ಅಗ್ನಿಪಥ್ ಹಿಂಪಡೆಯಬೇಕು- ರಾಹುಲ್ ಗಾಂಧಿ ಆಗ್ರಹ.

Promotion

ನವದೆಹಲಿ,ಜೂನ್,22,2022(www.justkannada.in):  ಕೇಂದ್ರ ಸರ್ಕಾರ ಅಗ್ನಿಪಥ್ ಯೋಜನೆಯನ್ನ ಹಿಂಪಡೆಯಬೇಕು ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆಗ್ರಹಿಸಿದ್ದಾರೆ.

ಅಗ್ನಿಪಥ್ ಯೋಜನೆ ವಿರೋಧಿಸಿ ನವದೆಹಲಿಯ ಎಐಸಿಸಿ ಕಚೇರಿ ಅವರಣದಲ್ಲಿ  ಪ್ರತಿಭಟನಾ ಸಭೆ ಆಯೋಜಿಸಲಾಗಿತ್ತು. ಸಭೆಯಲ್ಲಿ ಮಾತನಾಡಿದ ರಾಹುಲ್ ಗಾಂಧಿ, ಕೇಂಧ್ ಸರ್ಕಾರ ಸೇನೆಯನ್ನ ದುರ್ಬಲಗೊಳಿಸುತ್ತಿದೆ. ಮಾತೆತ್ತಿದರೇ ನಾವು ರಾಷ್ಟ್ರೀಯಾದಿಗಳು ಎನ್ನುತ್ತಾರೆ.  ರಾಷ್ಟ್ರವನ್ನ ಬಲಪಡಿಸಲು ನಿಜವಾದ ದೇಶಭಕ್ತಿ  ಅಗತ್ಯವಿದೆ ಎಂದು ಯುವಕರು ತಿಳಿದಿದ್ದಾರೆ. ಮೊದಲು ಅಗ್ನಿಪಥ್ ಯೋಜನೆ ಹಿಂಪಡೆಯಿರಿ ಎಂದು ಒತ್ತಾಯಿಸಿದರು.

ಅಗ್ನಿಪಥ್ ಯೋಜನೆ ವಿರೋಧಿಸಿ ನವದೆಹಲಿಯಲ್ಲಿ ಕಾಂಗ್ರೆಸ್ ಪ್ರತಿಭಟನೆ ಮುಂದುವರೆದಿದ್ದು ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲು ರಾಜ್ಯದಿಂದ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ವಿಪಕ್ಷ ನಾಯಕ ಸಿದ್ಧರಾಮಯ್ಯ, ರಾಜ್ಯಸಭೆ ಸಂಸದ ಮಲ್ಲಿಕಾರ್ಜುನ ಖರ್ಗೆ ಸೇರಿ ಹಲವು ನಾಯಕರು ದೆಹಲಿಗೆ ತೆರಳಿದ್ದಾರೆ.

Key words:  Agnipath – withdrawn-congress-Rahul Gandhi -demands.

ENGLISH SUMMARY…

The Center is weakening the army: Rahul Gandhi demands to withdraw Agnipath
New Delhi, June 22, 2022 (www.justkannada.in): Congress leader Rahul Gandhi has demanded the Union Government withdraw the Agnipath scheme.
A protest was held at the AICC premises in New Delhi against the Central Govt.’s Agnipath scheme. Speaking on the occasion, Rahul Gandhi alleged that the Union Government is weakening the army. “They claim themselves as patriots. The youth know genuine patriotism is required to strengthen the nation. Let them withdraw the Agnipath scheme first,” he demanded.
The Congress protest against the Agnipath scheme has continued in New Delhi. KPCC President D.K. Shivakumar, Leader of the Opposition Siddaramaiah, Rajya Sabha MP Mallikarjun Kharge, and other leaders from the State have joined the protest in Delhi.
Keywords: AICC/ protest/ Agnipath/ demand to withdraw