ಸಮಾಜ ಹಾಳು ಮಾಡುವುದೇ ಬಿಜೆಪಿಯ ಅಜೆಂಡಾ- ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಕಿಡಿ.

Promotion

ಮಂಡ್ಯ,ಮಾರ್ಚ್,21,2022(www.justkannada.in):  ಶಾಲಾ ಪಠ್ಯದಲ್ಲಿ ಭಗವದ್ಗೀತೆ ಅಳವಡಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಭಗವದ್ಗೀತೆ ತಲೆ ತುಂಬುತ್ತೆ ಎಂದು ಹೇಳಿಕೆ ನೀಡಿದ್ಧ ಸಂಸದ ಪ್ರತಾಪ್ ಸಿಂಹಗೆ  ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ.

ಮಂಡ್ಯದಲ್ಲಿಂದು ಮಾತನಾಡಿದ ಹೆಚ್.ಡಿ ಕುಮಾರಸ್ವಾಮಿ, ನಾನು ರಾಮಾಯಣ, ಮಹಾಭಾರತವನ್ನು ಓದಿದ್ದೇನೆ. ನಾನು ಮಾನವೀಯ ಮೌಲ್ಯಗಳನ್ನು ಬೆಳೆಸಿಕೊಂಡಿದ್ದೇನೆ. ಆದರೆ ಬಿಜೆಪಿ ದ್ವೇಷ ಬಿತ್ತುವ ಕೆಲಸವನ್ನು ಮಾಡುತ್ತಿದೆ. ಇಂತಹ ಗುಣ ತಲೆಗೆ ತುಂಬಿಸಿಕೊಳ್ಳುವ ಅವಶ್ಯಕತೆ ಇಲ್ಲ. ಬಿಜೆಪಿಯವರಿಂದ ನಾನು ತಿಳಿದುಕೊಳ್ಳಬೇಕಾದ ಅಗತ್ಯವಿಲ್ಲ. ಅಂತಹವರಿಂದ ಕಲಿತರೆ ಸಮಾಜ ಹಾಳಾಗುತ್ತದೆ  ಎಂದು ಕಿಡಿಕಾರಿದರು.

ಹಾಗೆಯೇ ಸಮಾಜವನ್ನು ಹಾಳುಮಾಡುವುದೇ ಬಿಜೆಪಿಯ ಅಜೆಂಡಾ ಎಂದು ಬಿಜೆಪಿ ವಿರುದ್ಧ ಹೆಚ್.ಡಿಕೆ ಆಕ್ರೋಶ ವ್ಯಕ್ತಪಡಿಸಿದರು.

Key words: agenda – BJP – Former CM-HD Kumaraswamy