ಎಂಇಎಸ್ ನಿಂದ ಮತ್ತೆ ನಾಡದ್ರೋಹಿ ಘೋಷಣೆ.

Promotion

ಬೆಳಗಾವಿ,ಮೇ,11,2022(www.justkannada.in):  ಇತ್ತೀಚೆಗೆ ಬೆಳಗಾವಿಯಲ್ಲಿ ಎಂಇಎಸ್ ಪುಂಡಾಟಿಕೆ ಹೆಚ್ಚಾಗಿದ್ದು ಇದೀಗ ಮತ್ತೆ ನಾಡದ್ರೋಹಿ ಘೋಷಣೆ ಕೂಗುವ ಮೂಲಕ ಪುಂಡಾಟ ಮೆರೆದಿದ್ದಾರೆ.

ಬೆಳಗಾವಿಯಲ್ಲಿ ಮರಾಠ ಕೋ ಅಪರೇಟಿವ್ ಬ್ಯಾಂಕ್ ಅಮೃತ ಮಹೋತ್ಸವದ ಕಾರ್ಯಕ್ರಮದಲ್ಲಿ ಎಂಇಎಸ್ ಪುಂಡರು ನಾಡದ್ರೋಹಿ ಘೋಷಣೆ  ಕೂಗಿದ್ದಾರೆ.  ಸಭೆಯಲ್ಲಿ ಮಹಾರಾಷ್ಟ್ರದ ಮಾಜಿ ಸಿಎಂ ಶರದ್ ಪವಾರ್ ಭಾಷಣ ಆರಂಭಿಸುತ್ತಿದ್ದಂತೆ ಬೆಳಗಾವಿ,ಕಾರವಾ,ನಿಪ್ಪಾಣಿ, ಬೀದರ್, ಭಾಲ್ಕಿ ಸಂಯುಕ್ತ ಮಹಾರಾಷ್ಟ್ರಕ್ಕೆ ಸೇರಬೇಕು ಎಂದು ಘೋಷಣೆ ಕೂಗಿದ್ದಾರೆ. ಎಂಇಎಸ್  ಘೋಷಣೆ ಕೂಗುತ್ತಿದ್ದರು ಶರದ್ ಪವಾರ್ ಸುಮ್ಮನೆ ನಿಂತಿದ್ದು ಕಂಡು ಬಂತು.

Key words: Again –MES- Traitor-belagavi