ನಾಲ್ಕು ವರ್ಷ ತರಬೇತಿ ಬಳಿಕ ಬಿಜೆಪಿ ಕಚೇರಿಗೆ ಸೆಕ್ಯೂರಿಟಿ ಆಗಬೇಕಾ.? ಅಗ್ನಿಪಥ್ ವಿರುದ್ಧ ಪ್ರಿಯಾಂಕ್ ಖರ್ಗೆ ಕಿಡಿ..

Promotion

ನವದೆಹಲಿ,ಜೂನ್,22,2022(www.justkannada.in):  ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಅಗ್ನಿಪಥ್ ಯೋಜನೆ ವಿರುದ್ದ ಕಾಂಗ್ರೆಸ್ ಶಾಸಕ ಪ್ರಿಯಾಂಕ್ ಖರ್ಗೆ ಕಿಡಿಕಾರಿದ್ದಾರೆ.

ಈ ಕುರಿತು ನವದೆಹಲಿಯಲ್ಲಿ ಮಾತನಾಡಿದ ಪ್ರಿಯಾಂಕ್ ಖರ್ಗೆ, ಸೈನಿಕನಾಗುವುದಕ್ಕೆ ಕನಿಷ್ಠ ನಾಲ್ಕು ವರ್ಷ ತರಬೇತಿ ಬೇಕು ಈ ವಿಷಯದಲ್ಲಿ ಕೇಂದ್ರ ಸರ್ಕಾರ ಯಾಕೆ ಹುಡುಗಾಟ ಆಡುತ್ತಿದೆ. ಅಗ್ನಿಪಥ್ ಯೋಜನೆಯಲ್ಲಿ  ತರಬೇತಿ ಬಳಿಕ ಬಿಜೆಪಿ ಕಚೇರಿಗೆ ಸೆಕ್ಯೂರಿಟಿ ಆಗಬೇಕಾ ಅಥವಾ ಬಿಜೆಪಿ ಶಾಸಕರಿಗೆ ಕಾರು ಚಾಲಕರಾಗಬೇಕಾ..? ಎಂದು ಚಾಟಿ ಬೀಸಿದರು.

ಅಗ್ನಿಪಥ್ ವಿರುದ್ಧ ಇಂದು ಪ್ರತಿಭಟನೆಗೆ ನಿರ್ಧಾರ ಮಾಡಿದ್ದೇವೆ. ದೇಶದ ಭದ್ರತೆ ವಿಷಯದಲ್ಲಿ ಸರ್ಕಾರ ಚೆಲ್ಲಾಟವಾಡುತ್ತಿದ್ದಾರೆ. ಸೇನಾಧಿಕಾರಿಗಳು ಸರ್ಕಾರದ ಪರ ಸಮರ್ಥಿಸಿಕೊಳ್ಳುತ್ತಿದ್ದಾರೆ. ದೇಶದ ಭದ್ರತೆಗಿಂತ ನಿಮಗೆ ಚುನಾವಣೆ ಮುಖ್ಯನಾ..? ಎಂದು ಪ್ರಶ್ನಿಸಿದರು.

Key words: After -four years –training- Priyank kharge- agains- Agnipath