230 ದಿನಗಳ ಬಳಿಕ ಭಾರತದಲ್ಲಿ ಅತಿ ಕಡಿಮೆ ಕೋವಿಡ್ ಪ್ರಕರಣ ದಾಖಲು.

ನವದೆಹಲಿ,ಅಕ್ಟೋಬರ್,18,2021(www.justkannada.in):  ದೇಶದಲ್ಲಿ 230 ದಿನಗಳ ಬಳಿಕ ಅತಿ ಕಡಿಮೆ ಸಂಖ್ಯೆಯಲ್ಲಿ ಕೋವಿಡ್ ಪ್ರಕರಣ ದಾಖಲಾಗಿದೆ. ಹೌದು, ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಭಾರಿ ಕುಸಿತವಾಗಿದ್ದು, ಕಳೆದ 24 ಗಂಟೆಯಲ್ಲಿ 13,596 ಜನರಲ್ಲಿ ಸೋಂಕು ಪತ್ತೆಯಾಗಿದೆ.

ಈ ಕುರಿತು ಕೇಂದ್ರ ಆರೋಗ್ಯ ಇಲಾಖೆ ಮಾಹಿತಿ ನೀಡಿದ್ದು,  ಕಳೆದ 24 ಗಂಟೆಯಲ್ಲಿ 13,596 ಜನರಲ್ಲಿ ಸೋಂಕು ಪತ್ತೆಯಾಗಿದೆ. ಈ ಮೂಲಕ ದೇಶದಲ್ಲಿ ಒಟ್ಟು ಕೊರೊನಾ ಸೋಂಕಿತರ ಸಂಖ್ಯೆ 3,40,81,315ಕ್ಕೆ ಏರಿಕೆಯಾಗಿದೆ. ಹಾಗೆಯೇ ಇದೇ ಅವಧಿಯಲ್ಲಿ 166  ಮಂದಿ ಕೊರೊನಾಗೆ ಬಲಿಯಾಗಿದ್ದಾರೆ. ದೇಶದಲ್ಲಿ ಈವರೆಗೆ ಕೋವಿಡ್ ಗೆ ಸಾವನ್ನಪ್ಪಿದವರ ಸಂಖ್ಯೆ 4,52,290ಕ್ಕೆ ಏರಿಕೆಯಾಗಿದೆ ಎಂದು ತಿಳಿಸಿದೆ.

1,89,694 ಕೋವಿಡ್ ಸಕ್ರಿಯ ಪ್ರಕರಣಗಳಿದ್ದು, 24 ಗಂಟೆಯಲ್ಲಿ 19.582 ಜನರು ಕೋವಿಡ್ ನಿಂದ ಗುಣಮುಖರಾಗಿದ್ದಾರೆ. ದೇಶದಲ್ಲಿ ಈವರೆಗೆ 3,34,39,331 ಸೋಂಕಿತರು ಕೊರೊನಾದಿಂದ ಗುಣಮುಖರಾಗಿದ್ದಾರೆ. ನಿನ್ನೆ ದೇಶದಲ್ಲಿ 9,89,493 ಜನರಿಗೆ ಕೋವಿಡ್ ಸ್ಯಾಂಪಲ್ ಟೆಸ್ಟ್ ಮಾಡಲಾಗಿದ್ದು, 24 ಗಂಟೆಯಲ್ಲಿ 12,05,162 ಜನರಿಗೆ ಲಸಿಕೆ ನೀಡಲಾಗಿದೆ.

Key words: After -230 days- India – lowest -Covid case.

ENGLISH SUMMARY…

Lowest number of COVID-19 Pandemic cases reported in India after 203 years
New Delhi, October 18, 2021 (www.justkannada.in): After 230 days the lowest number of COVID-19 Pandemic cases have been reported in the country. About 13,596 cases have been reported across the country in the last 24 hours.
According to the information provided by the Union Health Ministry, the total number of infections has increased to 3,40,81,315. At the same time, 166 people have lost their lives, increasing the total tally to 4,52,290.
There were 1,89,694 active cases in the last 24 hours, and 19,582 people have recovered from the pandemic. A total number of 3,34,39,331 people have recovered from the pandemic in the country to date. A total number of 9,89,493 samples were tested yesterday, and 12,05,162 people have been administered vaccines.
Keywords: COVID-19 Pandemic/ Corona/ cases/ lowest