ನವೋದ್ಯಮ ಮತ್ತು ಸದೃಢ ಭಾರತಕ್ಕಾಗಿ ನೈಸರ್ಗಿಕ ಕೃಷಿ ಪದ್ಧತಿ ಅಳವಡಿಕೆಗೆ ಸಂಕಲ್ಪ ಅಗತ್ಯ- ಡಾ. ರವಿಶಂಕರ್  ಗುರೂಜಿ …

Promotion

ಬೆಂಗಳೂರು,ಫೆಬ್ರವರಿ,8,2021(www.justkannada.in):  ದೇಶದ ಸಮಸ್ತ ರೈತ ಸಮುದಾಯ ‘ ನವೋದ್ಯಮ ಮತ್ತು ಸದೃಢ ಭಾರತಕ್ಕಾಗಿ ನೈಸರ್ಗಿಕ ಕೃಷಿ ಪದ್ಧತಿಯಿಂದ ಅಳವಡಿಸಿಕೊಳ್ಳಲು ಸಂಕಲ್ಪ ತೊಡಬೇಕು ಎಂದು ಅರ್ಟ್ ಅಫ್ ಲೀವಿಂಗ್ ನ ಡಾ. ರವಿಶಂಕರ ಗುರೂಜಿ ಹೇಳಿದ್ದಾರೆ.

ನಗರ ಹೊರವಲಯ ಹೆಸರಘಟ್ವದ ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆಯ ಆವರಣದಲ್ಲಿ ಇಂದಿನಿಂದ ಆರಂಭಗೊಂಡಿರುವ ಐದು ದಿನಗಳ ರಾಷ್ಟ್ರೀಯ ತೋಟಗಾರಿಕಾ ಮೇಳವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ನಾವಿಂದು ವಿಷಪೂರಿತ ರಾಸಾಯನಿಕ ಕೃಷಿಯನ್ನು ಮಾಡುತ್ತಿದ್ದೇವೆ. ಈ ಪದ್ಧತಿ ಬದಲಾಗಬೇಕು. ಆರೋಗ್ಯವಾಗಿರಬೇಕಾದರೆ ನಮ್ಮ ಆಹಾರ, ಭೋಜನಾ ವ್ಯವಸ್ಥೆ ಕೂಡ ಬದಲಾಗಬೇಕಿದೆ. ಕೆಲ ಪ್ರದೇಶಗಳಲ್ಲಿ ಜನರು ಅಪೌಷ್ಠಿಕತೆಯಿಂದ ಇಂದಿಗೂ ಬಳಲುತ್ತಿದ್ದಾರೆ. ಅದರಲ್ಲೂ ಗ್ರಾಮೀಣ ಪ್ರದೇಶದಲ್ಲಿ ಹೆಚ್ಚಿದೆ. ಆ ಅಪೌಷ್ಠಿಕತೆಯನ್ನು ದೂರ ಮಾಡಲು ಪ್ರತಿಯೊಬ್ಬ ರೈತರು ಸಹ ತಮ್ಮ ಜಮೀನುಗಳಲ್ಲಿ ಹಣ್ಣು-ಹಂಪಲುಗಳ ಗಿಡಮರಗಳನ್ನು ನೆಡಬೇಕು; ಈಮೂಲಕ ನೈಸರ್ಗಿಕ ಕೃಷಿಯನ್ನು ತಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.jk

ಭಾರತೀಯರಾದ ನಾವು ನಮ್ಮದೇ ಆದ ಸಾವಯವ ಕೃಷಿ, ನೈಸರ್ಗಿಕ ಆಹಾರ ಪದ್ಧತಿಯಿಂದ ದೂರ ಸರಿಯುತ್ತಿದ್ದೇವೆ. ವಿದೇಶಿ ಆಹಾರ ಪದಾರ್ಥಗಳಿಗೆ ಮಾರುಹೋಗುತ್ತಿದ್ದೇವೆ, ಇದರಿಂದ ನಮಗೆ ಅರಿವಿಲ್ಲದೆ, ರೋಗರುಜಿನಗಳು ಹೆಚ್ಚಾಗುತ್ತಿವೆ. ನಮ್ಮಲ್ಲಿ ಅಗ್ಗದ ದರದಲ್ಲಿ ದೊರೆಯುವ ನುಗ್ಗೆಸೊಪ್ಪಿನಲ್ಲಿ ಸಾಕಷ್ಟು ಪೌಷ್ಠಿಕಾಂಶ ಇದೆ. ಆದರೆ, ನಾವು ಅದನ್ನು ಸೇವಿಸುವುದು ಬಹಳಷ್ಟು ಕಡಿಮೆ. ಆದರೆ, ಅಮೆರಿಕಾದಲ್ಲಿ ನಮ್ಮ ನುಗ್ಗೆಸೊಪ್ಪುನ್ನು ಪುಡಿ ಮಾಡಿ ಗ್ರಾಂ ಲೆಕ್ಕದಲ್ಲಿ ಮಾರಾಟ ಮಾಡುತ್ತಿದ್ದಾರೆ. ಹಾಗಾಗಿ ನಮ್ಮ ರೈತರು ನಮ್ಮ ಸಾವಯವ ಕೃಷಿಗೆ ಹೆಚ್ಚಿನ ಪ್ರಾಮುಖ್ಯತೆ ಕೊಡಬೇಕು ಎಂದು  ರವಿಶಂಕರ್ ಗುರೂಜಿ ಕಿವಿಮಾತು ಹೇಳಿದರು.

ರೈತರ ಆದಾಯ ದ್ವಿಗುಣಗೊಳಿಸಲು ಕೃಷಿ, ತೋಟಗಾರಿಕಾ ಇಲಾಖೆ, ಸಂಶೋಧನಾ ಕೇಂದ್ರಗಳ ತಂತ್ರಜ್ಞಾನವನ್ನು ಅಳವಡಿಕೊಳ್ಳಬೇಕು, ರೈತರ ಜೊತೆ ಇಡೀ ದೇಶವೇ ನಿಂತಿದೆ. ಅನ್ನದಾತ ಕೃಷಿಕರಿಂದ ಆಹಾರ ಉತ್ಪಾದನಾ ಪ್ರಮಾಣ ಹೆಚ್ಚಾಗಬೇಕು, ಈ ಮೂಲಕ ಸ್ವಾವಲಂಭಿ ಭಾರತ ಮತ್ತಷ್ಟು ಸದೃಢವಾಗುತ್ತದೆ ಎಂದರು.

ಕೃಷಿ ಚೆನ್ನಾಗಿದ್ದರೆ ರೈತರು ಖುಷಿ ಆಗಿರುತ್ತಾರೆ. ರೈತರ ಮೊಗದಲ್ಲಿ ನಗೆ ಮೂಡಬೇಕಾದರೆ, ನೈಸರ್ಗಿಕ ಕೃಷಿ ಪದ್ದತಿ ಅಳವಡಿಕೆ ಅಗತ್ಯವಿದೆ. ರೈತರ ಸಮಸೈಗಳಿಗೆ ಸ್ಪಂದಿಸುವ ಕೆಲಸವನ್ನು ಕೃಷಿ, ತೋಟಗಾರಿಕಾ ಇಲಾಖೆಗಳು, ಸಂಶೋಧನಾ ಕೇಂದ್ರಗಳು ಮಾಡುತ್ತೀವೆ ಎಂದು ರವಿಶಂಕರ ಗುರೂಜಿ ಹೇಳಿದರು.

ಭಾರತ ಎಂದರೆ ಕೊರೋನೊಗೂ ಹೆದರಿಕೆ..!!

ಇಡೀ ವಿಶ್ವವನ್ನೇ ನಡುಗಿಸಿದ ಮಹಾಮಾರಿ ಕೊರೊನಾಗೆ ಭಾರತ, ಇಲ್ಲಿಯ ಜನರರೆಂದರೆ ಸ್ವಲ್ಪ ಹೆದರುತ್ತದೆ. ಭಾರತೀಯರಾದ ನಾವು ನೈಸರ್ಗಿಕ ಅಂದರೆ ಔಷಧೀಯ ಗುಣವುಗಳ್ಳ ಆಹಾರ ಪದಾರ್ಥಗಳನ್ನು ಹೆಚ್ಚೆಚ್ಚು ಸೇವಿಸುವುದರಿಂದ ಕೊರೊನಾ ಹತ್ತಿರಕ್ಕೂ ಸರಿಯುವುದಿಲ್ಲ; ನಮ್ಮ ಸಾವಯವ ಆಹಾರ ಪದ್ಧತಿಯಿಂದ ಲೇ ಕೊರೊನಾ ಸೋಂಕಿತ ಸಂಖ್ಯೆ ಕಡಿಮೆಯಾಗುತ್ತಿರುವುದು ಎಂದು ಆರ್ಟ್ ಆಫ್ ಲೀವಿಂಗ್ನ ರವಿಶಂಕರ ಗುರೂಜಿ ಅಭಿಪ್ರಾಯಪಟ್ಟರು.

ರೈತರ ಮನೆ ಬಾಗಿಲಿಗೆ ಬೀಜ

ಪ್ರಾಸ್ತವಿಕವಾಗಿ ಮಾತನಾಡಿದ ಭಾರತೀಯ ತೋಟಗಾರಿಕಾ ಸಂಶೋಧನಾ ಕೇಂದ್ರದ ನಿರ್ದೇಶಕ ಡಾ. ಎಂ.ಆರ್. ದಿನೇಶ್, ಕಳೆದ ಐದು ದಶಕಗಳಿಂದ ಸಾಕಷ್ಟು ತಳಿ ಮತ್ತು ತಂತ್ರಜ್ಞಾನವನ್ನು ಸಂಸ್ಥೆ ಅಭಿವೃದ್ಧಿಪಡಿಸಿದೆ. 300ಕ್ಕೂ ಹೆಚ್ಚು ತಂತ್ರಜ್ಞಾನವನ್ನು ಆವಿಷ್ಕಾರಿಸಿದೆ. 50ಸಾವಿಕ್ಕೂ ಅಧಿಕ ರೈತರು ವಿವಿಧ ತಂತ್ರಜ್ಞಾನವನ್ನು ಅಳವಡಿಸಿಕೊಂಡು ಕೃಷಿ, ತೋಟಗಾರಿಕೆ ಬೇಸಾಯ ಮಾಡುತ್ತಿದ್ದಾರೆ ಎಂದು ಹೇಳಿದರು.

ಇಂದಿನ ಸ್ಪರ್ಧಾತ್ಮಕ ಜಗತ್ತಿನೊಂದಿಗೆ ಪೈಪೋಟಿ ನಡೆಸಲು ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆತನ್ನನ್ನು ತಾನು ಸಜ್ಜುಗೊಳಿಸಿದೆ. ಆನ್ಲೈನ್ ಸೀಡ್ ಪೋರ್ಟಲ್ ಮೂಲಕ ಸುಮಾರು 40 ವಿವಿಧ ತರಕಾರಿ ಮತ್ತು ಹೂಗಳ ಬೀಜಗಳನ್ನು ದೇಶದ ಮೂಲೆ ಮೂಲೆಯಲ್ಲಿರುವ ರೈತರ ಮನೆ ಬಾಗಿಲಿಗೆ ಅತ್ಯಂತ ಕಡಿಮೆ ದರದಲ್ಲಿ ತಲುಪಿಸುವ ವ್ಯವಸ್ಥೆಯನ್ನು ಎಂದು ಡಾ. ಎಂ.ಆರ್. ದಿನೇಶ್ ತಿಳಿಸಿದರು.adoption - natural farming -- essential -innovation – sustainable- India- Dr. Ravishankar Guruji

ರೈತರ ಆದಾಯ ದ್ವಿಗುಣಗೊಳಿಸಲು ಕ್ರಮ

ವರ್ಚಯಲ್ ಮೂಲಕ ಮಾತನಾಡಿದ ಭಾರತೀಯ ಸಂಶೋಧನಾ ಸಂಸ್ಥೆಯ ಉಪಮಹಾನಿರ್ದೇಶಕ (ತೋಟಗಾರಿಕೆ ಮತ್ತು ವಿಜ್ಞಾನ) ಡಾ. ಎ.ಕೆ. ಸಿಂಗ್ ಮಾತನಾಡಿ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರೈತರಿಗೆ ಜ್ಞಾನ-ವಿಜ್ಞಾನ-ತಂತ್ರಜ್ಞಾನ ತಲುಪಿಸುವ ಕೆಲಸ ಮಾಡುತ್ತಿವೆ. ರೈತರು ತಮ್ಮ ಆದಾಯವನ್ನು ಯಾವ ರೀತಿ ದ್ವಿಗುಣಗೊಳಿಸಬಹುದು ಎನ್ನುವ ಕುರಿತು ಸರ್ಕಾರಗಳು, ಕೃಷಿ, ತೋಟಗಾರಿಕಾ ಸಂಶೋಧನಾ ಸಂಸ್ಥೆಗಳು ರೈತರಿಗೆ ಅಗತ್ಯ ಮಾಹಿತಿ ನೀಡುತ್ತಿವೆ. ರೈತರು ಒಂದೇ ಬೆಳೆಯನ್ನು ನೆಚ್ಚಿಕೊಳ್ಳದೆ ಸಮಗ್ರ ಬೆಳೆ ಪದ್ಧತಿಯನ್ನು ಅಳವಡಿಸಿಕೊಳ್ಳಲು ಸಲಹೆ ನೀಡುತ್ತಿವೆ ಎಂದು ಹೇಳಿದರು.

Key words: adoption – natural farming — essential -innovation – sustainable- India- Dr. Ravishankar Guruji