ಮೋದಿ ಸಹಾಯದಿಂದಲೇ ಅದಾನಿ ಸಂಪತ್ತು ಹೆಚ್ಚಳ- ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ್ ವಾಗ್ದಾಳಿ.

ಮೈಸೂರು,ಫೆಬ್ರವರಿ,10,2023(www.justkannada.in): ಅದಾನಿ ದೇಶವನ್ನು ಕೊಳ್ಳೆ ಹೊಡೆಯುತ್ತಿದ್ದಾರೆ. ಪ್ರಧಾನಿ ಮೋದಿ ಸಹಾಯದಿಂದಲೇ ಅದಾನಿ ಸಂಪತ್ತು ಹೆಚ್ಚಳವಾಗಿದೆ ಎಂದು ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ್ ಆರೋಪಿಸಿದರು.

ಇಂದು ಸುದ್ಧಿಗೋಷ್ಠಿ ನಡೆಸಿ ಮಾತನಾಡಿದ ಕಾಂಗ್ರೆಸ್ ವಕ್ತಾರ ಎಂ ಲಕ್ಷಣ್,  ಅದಾನಿ ಅಂಬಾನಿ ಮೋದಿ ಎಲ್ಲರೂ ಒಂದೇ. ಅದಾನಿ ದೇಶವನ್ನು ಕೊಳ್ಳೆ ಹೊಡೆಯುತ್ತಿದ್ದಾರೆ. ಮೋದಿ ಸಹಾಯದಿಂದಲೇ ಅದಾನಿ ಸಂಪತ್ತು ಹೆಚ್ಚಳವಾಗಿದ್ದು, ಬೇರೆ ಬೇರೆ ದೇಶದಲ್ಲಿ ಅದಾನಿಯ  38ಕ್ಕೂ ಹೆಚ್ಚು ಕಂಪೆನಿಗಳಿವೆ. 8.24 ಲಕ್ಷ ಕೋಟಿ ಅದಾನಿಯ ಸಂಪತ್ತು ಹೆಚ್ಚಳವಾಗಿದೆ. 18 ಶೇಲ್ ಕಂಪನಿಗಳಿಗೆ ಅಡ್ರೆಸ್ ಇಲ್ಲ. ರಾಹುಲ್ ಗಾಂಧಿ ಸಂಸತ್ ನಲ್ಲಿ ಮೋದಿಯನ್ನು ಪ್ರಶ್ನೆ ಮಾಡಿದರು. ಅದಾನಿ ಹಾಗೂ ನಿಮ್ಮ ನಡುವಿನ ಸಂಬಂಧ ಬಗ್ಗೆ ಪ್ರಶ್ನೆ ಕೇಳಿದರು. ಆದರೆ ಪ್ರಶ್ನೆಗೆ ಉತ್ತರ ಕೊಡದ ನೀವು ವಿಪಕ್ಷಗಳನ್ನು ಟೀಕೆ ಮಾಡಿದ್ದೀರಿ. ಅದಾನಿ ಷೇರುಗಳು ದಿನೇ ದಿನೇ ಜಾಸ್ತಿಯಾಗಿದೆ. ಯಾವುದನ್ನು ಮೋದಿ ತನಿಖೆ ಮಾಡಿಸಿಲ್ಲ. ಎಲ್.ಐ. ಸಿ ಹಣವನ್ನು ಅದಾನಿ ಗ್ರೂಪ್ ಅಲ್ಲಿ ಹೂಡಿಕೆ ಮಾಡಿ ಎಂದು ಮೋದಿ ಬರವಣಿಗೆಯಲ್ಲಿ ಕೊಡ್ತಾರೆ. 90 ಸಾವಿರ ಕೋಟಿ ಅದಾನಿ ಷೇರು ಮಾರುಕಟ್ಟೆಯಲ್ಲಿ ಹಾಕಿದ್ದಾರೆ. ಆ ದುಡ್ಡು ಕೆ.ಆರ್.ಎಸ್ ನೀರಿನಲ್ಲಿ ಹಾಕಿದ ದುಡ್ಡು ಎರಡು ಒಂದೇ ಎರಡು ವಾಪಸ್ ಸಿಗುವುದಿಲ್ಲ. 9 ಏರ್ ಪೋರ್ಟ್ ಗಳನ್ನ ಅದಾನಿಗೆ ಕೊಟ್ಟಿದ್ದಾರೆ, ಅದು ಫ್ರಿಯಾಗಿ, ಇದರಿಂದ ಯಾರಿಗೆ ಲಾಭ .?  ಎಂದು ವಾಗ್ದಾಳಿ ನಡೆಸಿದರು.

ಸಿದ್ದರಾಮಯ್ಯ ಸರ್ಕಾರ ಇದ್ದಾಗ ಬೆಂಗಳೂರು-ಮೈಸೂರು ಹೈ ಮಾಡುವ ಕುರಿತು ಕೇಂದ್ರ ಒಪ್ಪಿಗೆ ಕೊಟ್ಟಿದೆ . 2018ರಲ್ಲಿ ಕಾಂಗ್ರೇಸ್ ಇದ್ದಾಗ ಹಣ ಬಿಡುಗಡೆಯಾಗಿದ್ದು. ಇದರಲ್ಲಿ ನಿಮ್ಮ ಸಾಧನೆ ಏನಿದೆ.? 2 ಲಕ್ಷದ 48 ಸಾವಿರ ಹುದ್ದೆ ಕೊಟ್ಟಿದೀನಿ ಎಂದು ಹೇಳಿದ್ದೀರಿ ಯಾರಿಗೆ ಉದ್ಯೋಗ ಕೊಟ್ಟಿದಿರಿ ನಿಜ ಹೇಳಿ. ಬಾಯಿ ಬಿಟ್ಟರೆ ಬರಿ ಸುಳ್ಳೇ ಹೇಳುತ್ತೀರಿ, ಸುಳ್ಳೇ ನಿಮ್ಮ ಮನೆ ದೇವರು. ಬೆಂಗಳೂರು ಮೈಸೂರು ಹೈ ಟೋಲ್ ಇನ್ನೇನು ಶುರು ಮಾಡುತ್ತೀರಿ. ಬೆಂಗಳೂರು ಮೈಸೂರು ಹೋಗಿ ಬರಲು 800 ರೂಪಾಯಿ ಟೋಲ್ ಕಟ್ಟಬೇಕಂತೆ. ಇಷ್ಟು ಟೋಲ್ ತೆಗೆದುಕೊಳ್ಳೋ ಅಗತ್ಯ ಏನಿದೆ. ದಮ್ಮು ತಾಕತ್ತು ಬಗ್ಗೆ ಮಾತನಾಡುತ್ತಿರಿ, ಧಮ್ ಇದ್ರೆ ಜನರಿಗೆ ಫ್ರೀ ಟೋಲ್ ಮಾಡಿ ಎಂದು ಸವಾಲು ಹಾಕಿದರು.

ಸಿಟಿ ರವಿ ಅವರೇ ನನ್ನ ಮೇಲೆ ಮಾನನಷ್ಟ ಮೊಕದ್ದಮೆ ಹಾಕಿದ್ದೀರಿ. ಅದಕ್ಕೆ ಕೋರ್ಟಿನಲ್ಲಿ ಉತ್ತರ ಕೊಡ್ತೀನಿ. ಈಗ ನೀವು ಜನರಿಗೆ ಉತ್ತರ ಕೊಡಿ. ನಿಮ್ಮ ಬೀದಿಯ ಒಬ್ಬ ಟೀಚರ್ ಕೆ.ಆರ್.ಎಸ್ ನಲ್ಲಿ ಬಿದ್ದು ಆತ್ಮಹತ್ಯೆ ಮಾಡಿಕೊಂಡ್ರು. ಈ ಬಗ್ಗೆ ಕುಮಾರಸ್ವಾಮಿ ಹೇಳಿದ್ದಾರೆ. ದಯಮಾಡಿ ಈ ಬಗ್ಗೆ ಮಾತನಾಡಿ ಕುಮಾರಸ್ವಾಮಿಗೆ ಉತ್ತರ ಕೊಡಿ. ಇದನ್ನು ನಾನು ಹೇಳುತ್ತಿಲ್ಲ ,ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿದ್ದಾರೆ. ಯಡಿಯೂರಪ್ಪ ಅವರನ್ನು ಖುರ್ಚಿಯಿಂದ ಇಳಿಸಲು ನಿಮ್ಮ ಪಾತ್ರ ಅಪಾರವಾದುದು. ಬಿಜೆಪಿ ಅಧಿಕಾರಕ್ಕೆ ಬರಲ್ಲ, ಆದರೂ ಇಬ್ಬರು ಟವೆಲ್ ಹಾಕಿ ಕಾಯುತ್ತಿದ್ದಾರೆ. ಒಬ್ಬರು ಸಂತೋಷ್, ಇನ್ನೊಬ್ಬರು ಜೋಶಿ ಈ ಬಗ್ಗೆನು ಉತ್ತರ ಕೊಡಿ. ಕಾಂಗ್ರೆಸ್ ಜೆಡಿಎಸ್ ಗೆ ಉತ್ತರ ಕೊಡದಿದ್ದರೂ ಪರವಾಗಿಲ್ಲ, ಜನಸಾಮಾನ್ಯರಿಗೆ ಉತ್ತರ ಕೊಡಿ ಸಿಟಿ ರವಿ ಎಂದು ಎಂ.ಲಕ್ಷ್ಮಣ್ ಆಗ್ರಹಿಸಿದರು.

Key words: Adani- wealth- increased – help – Modi-KPCC spokesperson -M. Laxman