ನಟಿ ವಿಜಯಲಕ್ಷ್ಮಿ ತಾಯಿ ನಿಧನ

Promotion

ಬೆಂಗಳೂರು, ಸೆಪ್ಟೆಂಬರ್ 28, 2021 (www.justkannada.in): ನಟಿ ವಿಜಯಲಕ್ಷ್ಮಿ ತಾಯಿ ವಿಜಯ ಸುಂದರಂ ನಿಧನರಾಗಿದ್ದಾರೆ.

ಬೆಂಗಳೂರಿನಲ್ಲಿರುವ ಸಂತೃಪ್ತಿ ಹೋಟೆಲ್ ನಲ್ಲಿ ತಂಗಿದ್ದ ವಿಜಯಲಕ್ಷ್ಮಿ ಕುಟುಂಬ ಇಂದು ಚೆನ್ನೈಗೆ ಹೋಗಲು ಸಿದ್ಧವಾಗಿತ್ತು ಎನ್ನಲಾಗಿದೆ.

ತಾಯಿ ಮತ್ತು ಅಕ್ಕ ಉಷಾ ಜೊತೆಗೆ ವಾಸ ಮಾಡುತ್ತಿದ್ದ ವಿಜಯಲಕ್ಷ್ಮಿ ಅಕ್ಕನ ಅನಾರೋಗ್ಯದ ಬಗ್ಗೆ ಪದೇ ಪದೇ ಹೇಳಿಕೊಳ್ಳುತ್ತಿದ್ದರು. ಇದೀಗ ತಾಯಿ ನಿಧನರಾಗಿರುವುದು ಅವರಿಗೆ ಆಘಾತವುಂಟು ಮಾಡಿದೆ.

ಆರ್ಥಿಕ ಸಂಕಷ್ಟಕ್ಕೀಡಾಗಿದ್ದ ವಿಜಯ ಲಕ್ಷ್ಮಿ ಅವರು ಸಹಾಯ ಮಾಡಿ ಎಂದು ಸಾಮಾಜಿಕ ಜಾಲತಾಣದ ಮೂಲಕ ಬೇಡಿಕೆಯಿಟ್ಟಿದ್ದರು.

key words: Actress Vijayalakshmi mother passed away