ಲಾಸ್ ವೇಗಾಸ್‍ನಲ್ಲಿ ಮದುವೆ, ಇದು ನಟಿ ತ್ರಿಷಾ ಬಕೆಟ್ ಲಿಸ್ಟ್ !

Promotion

ಬೆಂಗಳೂರು, ಜನವರಿ 22, 2019 (www.justkannada.in): ನಟಿ ತ್ರಿಷಾ ಕೃಷ್ಣನ್ ಶೀಘ್ರದಲ್ಲಿಯೇ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರಾ?

ಈ ಪ್ರಶ್ನೆಗೆ ಸ್ವತಃ ತ್ರಿಷಾ ತಮ್ಮ ಇನ್‍ಸ್ಟಾದಲ್ಲಿ ಅಭಿಮಾನಿ ಪ್ರಶ್ನೆಗೆ ಉತ್ತರಿಸಿದ್ದಾರೆ. ನಿಮ್ಮ ಬಕೆಟ್ ಲಿಸ್ಟ್ ನಲ್ಲಿರುವ ಕ್ರೇಝಿಯೆಸ್ಟ್ ವಿಷಯ ಏನು ಎಂದು ಪ್ರಶ್ನೆಗೆ ತ್ರಿಷಾ “ಲಾಸ್ ವೇಗಾಸ್‍ನಲ್ಲಿ ಮದುವೆಯಾಗುವುದು” ಎಂದಿದ್ದಾರೆ.

ಈ ಉತ್ತರ ನೋಡಿದ ಅಭಿಮಾನಿಗಳು ತ್ರಿಷಾ ಸಧ್ಯದಲ್ಲೇ ಮದುವೆಯಾಗಲಿದ್ದಾರೆ ಎಂದು ಮಾತನಾಡಿಕೊಳ್ಳುತ್ತಿದ್ದಾರೆ. ಸದ್ಯ ತ್ರಿಷಾ ಮಲೆಯಾಳಂ ಚಿತ್ರದಲ್ಲಿ ನಟ ಮೋಹನ್‍ಲಾಲ್ ಅವರೊಂದಿಗೆ ‘ರಾಮ್’ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ.