ಸ್ಯಾಂಡಲ್’ವುಡ್’ನಲ್ಲಿ ಸಾಲು ಸಾಲು ಮದುವೆ: ಶುಭಾ ಪೂಂಜಾಗೆ ಕಂಕಣ ಭಾಗ್ಯ

Promotion

ಬೆಂಗಳೂರು, ಜೂನ್ 16, 2020 (www.justkannada.in): ನಟಿ ಶುಭಾ ಪೂಂಜಾಗೆ ಕಂಕಣ ಭಾಗ್ಯ ಕೂಡಿ ಬಂದಿದೆ.

ಹೌದು. ಮಂಗಳೂರು ಮೂಲದ ಉದ್ಯಮಿಯೊಂದಿಗೆ ಶುಭಾ ಪೂಂಜಾ ಸಪ್ತಪದಿ ತುಳಿಯಲಿದ್ದಾರೆ. ಸುಮಂತ್ ಮಹಾಬಲ ಜಯಕರ್ನಾಟಕ ಬೆಂಗಳೂರು ಸೌತ್ ವಿಂಗ್ ಪ್ರೆಸಿಡೆಂಟ್ ಆಗಿದ್ದಾರೆ. ಅಲ್ಲದೇ ಸುಮಂತ್ ಮಹಾಬಲ ಉದ್ಯಮಿ ಕೂಡ ಆಗಿದ್ದಾರೆ.

ಸುಮಂತ್ ಮತ್ತು ಶುಭಾ ಪೂಂಜಾ ಇಬ್ಬರೂ ಒಂದು ವರ್ಷದಿಂದ ಪರಸ್ಪರ ಪ್ರೀತಿಸುತ್ತಿದ್ದರು. ಇಬ್ಬರು ತಮ್ಮ ಪ್ರೀತಿಯ ವಿಚಾರವನ್ನು ಕುಟುಂಬದವರ ಬಳಿ ಹೇಳಿಕೊಂಡಿದ್ದಾರೆ.

ಎರಡು ಕುಟುಂಬದರು ಇವರ ಪ್ರೀತಿ ಒಪ್ಪಿಗೆ ಸೂಚಿಸಿದ್ದು, ಇದೇ ವರ್ಷ ವೈವಾಹಿಕ ಜೀವನಕ್ಕೆ ಕಾಲಿಡಲಿದ್ದಾರೆ.