ಡ್ರಗ್ಸ್ ದಂಧೆಗೆ ಸ್ಯಾಂಡಲ್ ವುಡ್ ನಂಟು ಆರೋಪ ಪ್ರಕರಣ: ನಟಿ ಸಂಜನಾ  ಮನೆ ಮೇಲೆ ಸಿಸಿಬಿ ಅಧಿಕಾರಿಗಳಿಂದ ದಾಳಿ…

Promotion

ಬೆಂಗಳೂರು,ಸೆಪ್ಟಂಬರ್,8,2020(www.justkannada.in):   ಡ್ರಗ್ಸ್ ದಂಧೆಗೆ ಸ್ಯಾಂಡಲ್ ವುಡ್ ನಂಟು ಆರೋಪ ಪ್ರಕರಣಕ್ಕೆ  ಸಂಬಂಧಿಸಿದಂತೆ  ತನಿಖೆ ಚುರುಕುಗೊಳಿಸಿರುವ ಸಿಸಿಬಿ‌ ಅಧಿಕಾರಿಗಳು ಇಂದು ಬೆಳಿಗ್ಗೆ ನಟಿ ಸಂಜನಾ ಗಲ್ರಾನಿ ಪ್ಲ್ಯಾಟ್ ಮೇಲೆ ದಾಳಿ ನಡೆಸಿದ್ದಾರೆ.jk-logo-justkannada-logo

ಡ್ರಗ್ಸ್ ಮಾಫಿಯಾದಲ್ಲಿ ನಟಿ ಸಂಜನಾ ಆಪ್ತ ರಾಹುಲ್ ನನ್ನ ಸಿಸಿಬಿ ಪೊಲೀಸರು ಬಂಧಿಸಿದ್ದು, ಈ ನಡುವೆ ಸಚ್೯ ವಾರಂಟ್ ಪಡೆದ ಸಿಸಿಬಿ‌ ಅಧಿಕಾರಿಗಳು  ಇಂದು ಮುಂಜಾನೆ ಸಂಜನಾ  ಮನೆ ಮೇಳೆ ದಾಳಿ ನಡೆಸಿ ತೀವ್ರ ಶೋಧ ನಡೆಸಿದ್ದಾರೆ.actress-sanjana-house-attacked-ccb

ಇಂದಿರಾ ನಗರದಲ್ಲಿರುವ ನಟಿ ಸಂಜನಾ ಅವರ ನಿವಾಸದ ಮೇಲೆ ಸಿಸಿಬಿ ಇನ್ಸ್​ಪೆಕ್ಟರ್ ಅಂಜುಮಾಲ, ಪೂರ್ಣಿಮಾ ನೇತೃತ್ವದ ತಂಡದಿಂದ ದಾಳಿ ನಡೆದಿದೆ. ನಟಿ ಸಂಜನಾಗೆ ಸೇರಿದದ ಮೂವರು ಮೊಬೈಲ್ ವಶಕ್ಕೆ ಪಡೆಯಲಾಗಿದೆ.   ಡ್ರಗ್ಸ್ ದಂಧೆಯಲ್ಲಿ ನಟಿ ಸಂಜನಾ ಹೆಸರು ಕೇಳಿಬರುತ್ತಿದ್ದು, ಈಗಾಗಲೇ ಆಪ್ತ ರಾಹುಲ್​ ಸಿಸಿಬಿ ಬಲೆಯಲ್ಲಿ ಸಿಕ್ಕಿಬಿದ್ದಿದ್ದಾರೆ.  ಇನ್ನು ಬಂಧಿತ ಪೆಡ್ಲೆರ್ ವಿರೇನ್ ಖನ್ನಾ ಮನೆ ಮೇಲೂ ಸಿಸಿಬಿ ದಾಳಿ ನಡೆಸಿದೆ.

Key words: Actress- Sanjana- house -attacked – CCB