ಡಬಲ್​ ಮೀನಿಂಗ್​ ಪ್ರಶ್ನೆಗೆ ಖಡಕ್ ಉತ್ತರ ಕೊಟ್ಟ ಸಮಂತಾ !

Promotion

ಬೆಂಗಳೂರು, ಫೆಬ್ರವರಿ 23, 2022 (www.justkannada.in): ಡಬಲ್​ ಮೀನಿಂಗ್​ ಪ್ರಶ್ನೆ ಕೇಳಿದ ವ್ಯಕ್ತಿಗೆ ಸಮಂತಾ ಸರಿಯಾದ ಉತ್ತರವೇ ಕೊಟ್ಟಿದ್ದಾರೆ.

ಸಮಂತಾರ ಉತ್ತರ ಕಂಡು ಎಲ್ಲರೂ ಸೂಪರ್​ ಸಮಂತಾ ಇಂಥವರಿಗೆ ಸರಿಯಾಗಿ ಬುದ್ಧಿ ಕಲಿಸಿದ್ದೀರ ಎಂದು ಹೇಳಿದ್ದಾರೆ.

ಟ್ರೋಲ್ ಮಾದರಿಯ, ಅಸಭ್ಯ ಪ್ರಶ್ನೆ ಒಂದು ಸಮಂತಾಗೆ ಎದುರಾಗಿತ್ತು. ಸಮಂತಾಳನ್ನು ರಿಪ್ರೋಡ್ಯೂಸ್ ಮಾಡುವುದಾಗಿ ಪ್ರಶ್ನೆಯಲ್ಲಿ ಕೇಳಲಾಗಿತ್ತು. ಈ ಪ್ರಶ್ನೆಯನ್ನು ಸ್ವೀಕರಿಸಿದ ನಟಿ ಸಮಂತಾ ಖಾರವಾಗಿ ಉತ್ತರ ಕೊಟ್ಟು ಪಾಠ ಕಲಿಸಿದ್ದಾರೆ.

‘ನೀವು ರಿಪ್ರೋಡ್ಯೂಸ್ ಆಗಿದ್ದೀರಾ? ಏಕೆಂದರೆ ನಾನು ನಿನ್ನನ್ನು ರಿಪ್ರೋಡ್ಯೂಸ್ ಮಾಡಲು ಬಯಸುತ್ತೇನೆ’ ಎಂದು ಪ್ರಶ್ನೆ ಕೇಳಲಾಗಿದೆ. ಈ ಪ್ರಶ್ನೆಗೆ ಸಮಂತಾ ಸೂಪರ್​ ಆಗಿಯೇ ಉತ್ತರ ಕೊಟ್ಟಿದ್ದಾರೆ. ‘ಒಂದು ವಾಕ್ಯದಲ್ಲಿ ರೀಪ್ರೊಡ್ಯೂಸ್ ಪದವನ್ನು ಹೇಗೆ ಬಳಸುವುದು. ಅದನ್ನು ಮೊದಲು ಗೂಗಲ್ ಮಾಡಬೇಕೇ? ಎಂದಿದ್ದಾರೆ.