ಸಿಸಿಬಿ ವಿಚಾರಣೆ  ಬಳಿಕ ನಟಿ ರಾಧಿಕಾ ಕುಮಾರಸ್ವಾಮಿ ಪ್ರತಿಕ್ರಿಯಿಸಿದ್ದು ಹೀಗೆ…?

actress-radhika-kumaraswamy-reacts-after-ccb-inquiry
Promotion

ಬೆಂಗಳೂರು,ಜನವರಿ,8,2021(www.justkannada.in):   ವಂಚನೆ ಪ್ರಕರಣದಲ್ಲಿ ಬಂಧಿತನಾಗಿರುವ ಯುವರಾಜ್ ಜತೆ ಹಣಕಾಸು ವ್ಯವಹಾರ ಆರೋಪಕ್ಕೆ ಸಂಬಂಧಿಸಿದಂತೆ ನಟಿ ರಾಧಿಕಾ ಕುಮಾರಸ್ವಾಮಿ ಸಿಸಿಬಿ ವಿಚಾರಣೆ ಎದುರಿಸಿ ಹೊರ ಬಂದರು.jk-logo-justkannada-mysore

ವಂಚಕ ಯುವರಾಜ್ ನಿಂದ ನಟಿ ರಾಧಿಕಾ ಕುಮಾರಸ್ವಾಮಿ ಅವರ ಖಾತೆಗೆ 1 ಕೋಟಿ ಹಣ ವರ್ಗಾವಣೆಯಾಗಿದೆ ಎಂಬ ಆರೋಪ ಕೇಳಿ ಬಂದಿತ್ತು. ಈ ಹಿನ್ನೆಲೆ ಇಂದು ವಿಚಾರಣೆಗೆ ಹಾಜರಾಗುವಂತೆ ಸಿಸಿಬಿ ಅಧಿಕಾರಿಗಳು ನೋಟಿಸ್ ನೀಡಿದ್ದರು.

ನೋಟಿಸ್ ನೀಡಿದ ಹಿನ್ನೆಲೆಯಲ್ಲಿ ಇಂದು ಬೆಳಿಗ್ಗೆ 11 ಗಂಟೆಗೆ ವಿಚಾರಣೆಗೆ ಹಾಜರಾಗಿ ಸತತ ನಾಲ್ಕು ಗಂಟೆಗಳ ಕಾಲ  ನಟಿ ರಾಧಿಕಾ ಕುಮಾರಸ್ವಾಮಿ ವಿಚಾರಣೆ ಎದುರಿಸಿದರು. ಇದೀಗ ಸಿಸಿಬಿ ವಿಚಾರಣೆ ಮುಕ್ತಾಯವಾಗಿದ್ದು ಈ ಕುರಿತು ಮಾಧ್ಯಮಗಳ ಜತೆ ಮಾತನಾಡಿರುವ ನಟಿ ರಾಧಿಕಾ ಕುಮಾರಸ್ವಾಮಿ, ಸಿಸಿಬಿ ಅಧಿಕಾರಿಗಳು ಕೇಳಿದ ಪ್ರಶ್ನೆಗಳಿಗೆ ಉತ್ತರ ನೀಡಿದ್ದೇನೆ. ಮತ್ತೆ ಅಧಿಕಾರಿಗಳು ಕರೆದರೇ ವಿಚಾರಣೆಗೆ ಹಾಜರಾಗುವೆ ಎಂದರು.actress-radhika-kumaraswamy-reacts-after-ccb-inquiry

ನನ್ನನ್ನ ಹಾಗೂ ಯುವರಾಜ್ ನನ್ನ ಮುಖಾಮುಖಿಯಾಗಿ ವಿಚಾರಣೆ ನಡೆಸಿಲ್ಲ. ನಾನು ಬೆಂಗಳೂರು ಬಿಟ್ಟು ಎಲ್ಲಿಯೂ ಹೋಗಿಲ್ಲ ಎಂದು ತಿಳಿಸಿದರು.

Key words: Actress -Radhika Kumaraswamy- reacts- after- CCB inquiry