ಈ ಸಲ ಕಪ್ ನಮ್ದೆ ಎಂದ ನಟಿ ಪ್ರಣೀತಾ ಸುಭಾಷ್! ಆರ್’ಸಿಬಿ ಫ್ಯಾನ್ಸ್ ಫುಲ್ ಖುಷ್

Promotion

ಬೆಂಗಳೂರು, ಏಪ್ರಿಲ್ 12, 2021 (www.justkannada.in): ಈ ಸಲ ಕಪ್ ನಮ್ದೆ ಎಂದಿದ್ದಾರೆ ನಟಿ ಪ್ರಣೀತಾ ಸುಭಾಷ್!

ಹೌದು. ನಟಿ ಪ್ರಣಿತಾ ಸುಭಾಷ್ ಕೂಡ ತಮ್ಮ ಟ್ವಿಟ್ಟರ್ ನಲ್ಲಿ ಈ ಸಲ ಕಪ್ ನಮ್ದೇ ಆರ್.ಸಿ.ಬಿ. ಎಂದು ಬರೆದುಕೊಂಡಿದ್ದಾರೆ. ಈ ಮೂಲಕ ಆರ್.ಸಿ.ಬಿಗೆ ಶುಭ ಹಾರೈಸಿದ್ದಾರೆ.

ಅಂದಹಾಗೆ ಐಪಿಎಲ್ ನ 14ನೇ ಆವೃತ್ತಿಯ ಮೊದಲನೇ ಪಂದ್ಯದಲ್ಲಿ ಆರ್.ಸಿ.ಬಿ. ತಂಡ ಮುಂಬೈ ಇಂಡಿಯನ್ಸ್ ವಿರುದ್ಧ ಗೆದ್ದು ಬೀಗಿತ್ತು.

ಮೊದಲ ಜಯಕ್ಕೆ ಖುಷಿಯಾಗಿರುವ ಪ್ರಣೀತಾ ಈ ಸಲ ಕಪ್ ನಮ್ದೆ ಎಂದು ಟ್ವೀಟ್ ಮಾಡಿದ್ದಾರೆ. ಇದಕ್ಕೆ ಆರ್ ಸಿಬಿ ಫ್ಯಾನ್ಸ್ ಜತೆ ಪ್ರಣೀತಾ ಅಭಿಮಾನಿಗಳು ಖುಷ್ ಆಗಿದ್ದಾರೆ.