ಹೊಸ ಫೋಟೋಶೂಟ್’ನಲ್ಲಿ ನಟಿ ನಿಶ್ವಿಕಾ ಮಿಂಚು !

Promotion

ಬೆಂಗಳೂರು, ಜೂನ್ 24, 2022 (www.justkannada.in): ಸದ್ಯ ಸ್ಯಾಂಡಲ್ ವುಡ್ ನಲ್ಲಿ ಬೇಡಿಕೆಯಲ್ಲಿರುವ ನಟಿಯಾಗಿರುವ ನಿಶ್ವಿಕಾ ನಾಯ್ಡು ಹೊಸ ಫೋಟೋಶೂಟ್ ನಲ್ಲಿ ಮಿಂಚಿದ್ದಾರೆ. ಈ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಅಭಿಮಾನಿಗಳಿಗಾಗಿ ಹಂಚಿಕೊಂಡಿದ್ದಾರೆ.

ಹೌದು. ನಿಶ್ವಿಕಾ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಸಕ್ರಿಯರಾಗಿರುತ್ತಾರೆ. ತಮ್ಮ ಫೋಟೋ ಹಾಗೂ ಸಿನಿಮಾಗೆ ಸಂಬಂಧಿಸಿದ ವಿಚಾರವನ್ನು ಹಂಚಿಕೊಳ್ಳುತ್ತಲೇ ಇರುತ್ತಾರೆ. ಈ ಬಾರಿ ಹೊಸದಾಗಿ ಮಾಡಿಸಿದ ಫೋಟೋಶೂಟ್ ನ ಸ್ಟಿಲ್ ಗಳನ್ನು ಹಂಚಿಕೊಂಡಿದ್ದಾರೆ.

ಅಂದಹಾಗೆ ನಿಶ್ವಿಕಾ ನಾಯ್ಡು ನಟನೆಯ ‘ಗುರು ಶಿಷ್ಯರು’ ಹಾಗೂ ‘ಗಾಳಿಪಟ 2’ ಚಿತ್ರದ ಶೂಟಿಂಗ್ ಕಂಪ್ಲೀಟ್ ಆಗಿದ್ದು, ‘ದಿಲ್ ಪಸಂದ್’ ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾರೆ.

ಇತ್ತೀಚೆಗೆ ಗೋಲ್ಡನ್*ಗಣೇಶ್ ಜೊತೆ ‘ಸಖತ್’ ಸಿನಿಮಾದಲ್ಲಿಕಾಣಿಸಿಕೊಂಡಿದ್ದ ನಿಶ್ವಿಕಾಗೆ ಅಭಿನಯಕ್ಕೆ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗಿತ್ತು.