ಕಾವೇರಿ ಕೂಗು: ನದಿ ಪಾತ್ರದಲ್ಲಿ ಗಿಡ ನೆಡಲು 42 ಲಕ್ಷ ದೇಣಿಗೆ ನೀಡಿದ ಕಂಗನಾ

Promotion

ಬೆಂಗಳೂರು, ಸೆಪ್ಟೆಂಬರ್ 09, 2019 (www.justkannada.in): ಕಾವೇರಿ ನದಿ ಪಾತ್ರದಲ್ಲಿ ಅರಣ್ಯ ಬೆಳೆಸುವ ಬಹುದೊಡ್ಡ ಅಭಿಯಾನದಲ್ಲಿ ಕೈಜೋಡಿಸಿರುವ ಕಂಗನಾ ಇದಕ್ಕಾಗಿ 42 ಲಕ್ಷ ರೂಪಾಯಿಗಳ ದೇಣಿಗೆ ನೀಡಿದ್ದಾರೆ.

ಕಾವೇರಿ ಕೂಗು ಸೇರಿದಂತೆ ಇನ್ನಿತರೆ ಪರಿಸರ ಕಾಳಜಿಯ ಆಂದೋಲನಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುತ್ತಿರುವ ಬಾಲಿವುಡ್ ನಟಿ ಕಂಗನಾ ರಣಾವತ್ ಇದೀಗ ದೊಡ್ಡ ಮೊತ್ತದ ನೆರವನ್ನೂ ನೀಡಿದ್ದಾರೆ.

ಜತೆಗೆ ಕಾವೇರಿ ನದಿ ಪಾತ್ರದಲ್ಲಿ ಗಿಡ ನೆಡಲು ಪ್ರತಿಯೊಬ್ಬರು ಒಂದು ಗಿಡಕ್ಕೆ 42 ರೂಪಾಯಿ ದೇಣಿಗೆ ಕೊಡುವ ಅಗತ್ಯವಿದೆ ಎಂದು ಮನವಿ ಮಾಡುತ್ತಿದ್ದೇನೆ. ಇಂತಹ ಒಂದು ಸಾಮಾಜಿಕ ಕಳಕಳಿಯ ಕಾರ್ಯಕ್ಕೆ ಸೆಲೆಬ್ರಿಟಿಗಳು ಕೈಜೋಡಿಸಬೇಕೆಂದೂ ಮನವಿ ಮಾಡಿದ್ದಾರೆ.