ಬೆಳಗಾವಿಯ ಗೋಕಾಕ್ ನಲ್ಲಿ ನೆರೆ ಸಂತ್ರಸ್ತರ ಸಮಸ್ಯೆ ಆಲಿಸಿ ಸಾಂತ್ವಾನ ಹೇಳಿದ ನಟಿ ಹರ್ಷಿಕಾ ಪೂಣಚ್ಛ…

Promotion

ಬೆಳಗಾವಿ,ಆ, 14,2019(www.justkannada.in): ರಾಜ್ಯದಲ್ಲಿ ಸುರಿದ ಧಾರಾಕಾರ ಮಳೆ, ಪ್ರವಾಹಕ್ಕೆ ಹಲವು ಜಿಲ್ಲೆಗಳ ಜನರು ನಲುಗಿಹೋಗಿದ್ದು ಮನೆ ಜಮೀನು ಎಲ್ಲವನ್ನೂ ಕಳೆದುಕೊಂಡು ಬೀದಿಗೆ ಬಿದ್ದಿದ್ದಾರೆ. ಪ್ರವಾಹಕ್ಕೆ ತುತ್ತಾಗಿರುವ ಜನರಿಗೆ ಪುನರ್ವಸತಿ ಕಲ್ಪಿಸಿ ಸಾಮಾನ್ಯ ಜೀವನಕ್ಕೆ ಮರುಳುವಂತೆ ಮಾಡುವ ಜವಾಬ್ದಾರಿ ಇದೀಗ ಸರ್ಕಾರದ ಮೇಲಿದೆ.

ಈ ನಡುವೆ ಭೀಕರ ಪ್ರವಾಹದಿಂದ ತತ್ತರಿಸಿರುವ ಬೆಳಗಾವಿ ಜಿಲ್ಲೆಯ ಗೋಕಾಕ್ ತಾಲ್ಲೂಕಿನ ಜನರಿಗೆ ನಟಿ ಹರ್ಷಿಕಾ ಪೂಣಚ್ಛ ಆತ್ಮಸ್ಥೈರ್ಯ ತುಂಬಿದ್ದಾರೆ.  ಹೌದು ಗೋಕಾಕ್ ತಾಲ್ಲೂಕಿನ  ಅದಿಬಟ್ಟಿ ಗ್ರಾಮಕ್ಕೆ ನಟಿ ಹರ್ಷಿಕಾ ಪೂಣಚ್ಛ ಭೇಟಿ ನೀಡಿ ನೆರೆ ಸಂತ್ರಸ್ತರ ಸಮಸ್ಯೆ ಆಲಿಸಿದ್ದಾರೆ. ನೆರೆ ಸಂತ್ರಸ್ತರಿಗೆ ಅಗತ್ಯ ವಸ್ತುಗಳನ್ನ ವಿತರಿಸಿದರು.

ಈ ಬಗ್ಗೆ ತಮ್ಮ ಇನ್ ಸ್ಟಾಗ್ರಾಮ್ನ ಪೇಜ್ ನಲ್ಲಿ ಬರೆದುಕೊಂಡಿರುವ ನಟಿ ಹರ್ಷಿಕಾ ಪೂಣಚ್ಚ, ಗೋಕಾಕ್ ಲ್ಲಿ ಪ್ರವಾಹ ಪೀಡಿತರು ಎಲ್ಲವನ್ನೂ ಕಳೆದುಕೊಂಡಿದ್ದಾರೆ. ಗೋಕಾಕ್‌ನ  ಇಡೀ ಆದಿಬಟ್ಟಿ ಗ್ರಾಮವು ಪ್ರವಾಹಕ್ಕೆ ಸಿಲುಕಿದೆ. ಅವರ ಸಾಮಾನ್ಯ ಜೀವನಕ್ಕೆ ಮರಳಲು  ದೇವರು ಕೃಪೆ ತೋರಲಿ ಎಂದು ಪ್ರಾರ್ಥಿಸಿದ್ದಾರೆ.

Key words: Actress -Harshika Poonacha- listens – problem -neighboring victims – Gokak- Belgaum.