ಅಮಲಾ ಪೌಲ್ ‘ಅಡೈ’ ಚಿತ್ರದ ಮತ್ತೊಂದು ವಿಡಿಯೋ ರಿಲೀಸ್ !

Promotion

ಮುಂಬೈ, ಜುಲೈ 22, 2019 (www.justkannada.in):  ನಟಿ ಅಮಲಾ ಪೌಲ್ ತಮಿಳಿನ ‘ಅಡೈ’ ಸಿನಿಮಾದ ಪ್ರತಿ ಪೋಸ್ಟರ್ ಗಳು ಸಾಕಷ್ಟು ಸುದ್ದಿ ಮಾಡುತ್ತಿವೆ.

ಅಮಲಾ ಕೆಲವು ದೃಶ್ಯಗಳಲ್ಲಿ ಬೆತ್ತಲಾಗಿ ಕಾಣಿಸಿಕೊಂಡಿದ್ದಾರೆ ಎನ್ನುವುದು ದೊಡ್ಡ ಸುದ್ದಿಯಾಗಿತ್ತು. ಮೊದಲು ಬಿಡುಗಡೆಯಾದ ಟೀಸರ್ ಇದೇ ಕಾರಣಕ್ಕೆ ದೊಡ್ಡ ಪ್ರಚಾರ ಪಡೆದಿತ್ತು.

ಈಗ ಈ ಸಿನಿಮಾದ ಮತ್ತೊಂದು ದೃಶ್ಯವನ್ನು ಹಂಚಿಕೊಳ್ಳಲಾಗಿದೆ. ಆ ದೃಶ್ಯವೂ ಕೂಡ ಬೆತ್ತಲೆಯ ದೃಶ್ಯವಾಗಿದೆ. ಮೈ ಮೇಲೆ ಬಟ್ಟೆ ಇಲ್ಲದೆ ಕನ್ನಡಿಯನ್ನು ಹಿಡಿದುಕೊಂಡು ಬರುವ ದೃಶ್ಯ ಇದಾಗಿದೆ.